ETV Bharat / state

ಲೋನ್​ ಆ್ಯಪ್​ನಿಂದ ಪಡೆದಿದ್ದು ₹2 ಸಾವಿರ, ಕಟ್ಟಿದ್ದು ₹15 ಲಕ್ಷ: ನಗ್ನ ದೃಶ್ಯದ ಮೂಲಕ ಬೆದರಿಕೆ

ಹಣದ ಆವಶ್ಯಕತೆಯಿಂದ ಕೆಲ ತಿಂಗಳ ಹಿಂದೆ ಸ್ನೇಹಿತನ‌ ಮಾಹಿತಿಯಂತೆ ಆನ್ ಲೈನ್ MAJIC LOAN APP ನಲ್ಲಿ 2,000 ಸಾವಿರ ರೂ ಸಾಲ ಪಡೆದಿದ್ದ ವ್ಯಕ್ತಿಗೆ ಬೆದರಿಕೆ ಹಾಕಿ ಈಗ 15 ಲಕ್ಷ ಹಣ ಪೀಕಿದ್ದಾರೆ.

ಲೋನ್​ ಆಪ್​ನಿಂದ ವಂಚನೆ
ಲೋನ್​ ಆಪ್​ನಿಂದ ವಂಚನೆ
author img

By

Published : Aug 12, 2022, 9:43 PM IST

ಚಿಕ್ಕಬಳ್ಳಾಪುರ: ಆನ್​​ಲೈನ್​​ನಲ್ಲಿ 2 ಸಾವಿರ ರೂ ಸಾಲ ಪಡೆದ ವ್ಯಕ್ತಿಯೋರ್ವ ವಂಚಕರ ನಗ್ನ ಸಂದೇಶ ಬೆದರಿಕೆಗೆ ಭಯಪಟ್ಟು 15 ಲಕ್ಷ ರೂ.ಗೂ ಅಧಿಕ ಹಣ ಕಳೆದುಕೊಂಡಿದ್ದಾನೆ. ಈ ಘಟನೆ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ.

ಅಜ್ಮತ್ ಉಲ್ಲಾ (37) ವಂಚನೆಗೊಳಗಾದ ವ್ಯಕ್ತಿ. ಈತ ತಾಲೂಕಿನ ಬೆಳಗಾನಹಳ್ಳಿ ಬಳಿ ಇರುವ ನಂದಿನಿ ಡೈರಿಯಲ್ಲಿ ಸೂಪರ್ ವೈಸರ್ ಕೆಲಸ ಮಾಡಿಕೊಂಡು ಚಿಂತಾಮಣಿ ನಗರದ ಟಿಪ್ಪುನಗರದಲ್ಲಿ ಜೀವನ ನಡೆಸುತ್ತಿದ್ದಾನೆ. ಹಣದ ಅವಶ್ಯಕತೆಯಿಂದ ಕೆಲ ತಿಂಗಳ ಹಿಂದೆ ಸ್ನೇಹಿತನ‌ ಮಾಹಿತಿಯಂತೆ ಆನ್ ಲೈನ್ MAJIC LOAN APPನಲ್ಲಿ 2,000 ರೂ ಲೋನ್ ಪಡೆದಿದ್ದಾನೆ. ಬಳಿಕ ಈತ ಎರಡು ಸಾವಿರಕ್ಕೆ ಈಗ 15 ಲಕ್ಷಕ್ಕೂ ಅಧಿಕ ಹಣವನ್ನು ಬಡ್ಡಿ ರೂಪದಲ್ಲಿ ಕಟ್ಟುವಂತಾಗಿದೆ.

ಘಟನೆಯ ವಿವರ: ಆ್ಯಪ್‌ ಮುಖಾಂತರ 2,000 ರೂ. ಸಾಲ ಪಡೆದು ಬಡ್ಡಿಯ ರೂಪವಾಗಿ 3,500 ಕಟ್ಟಿದ್ದರು. ಇವರು ಲೋನ್ ಪಡೆಯುವಾಗ ಆ್ಯಪ್‌ನ ಆನ್‌ಲೈನ್ ವಂಚಕರು ಅಜ್ಮತ್ ಉಲ್ಲಾ ಆಧಾರ್ ಕಾರ್ಡ್​ ಮತ್ತು ಪಾನ್ ಕಾರ್ಡ್​ಗಳನ್ನು ಪಡೆದುಕೊಂಡಿದ್ದರು. ಅದನ್ನೇ ದುರುಪಯೋಗಪಡಿಸಿಕೊಂಡು ಬೇರೆ ಬೇರೆ 20ಕ್ಕೂ ಅಧಿಕ ಲೋನ್ ಆ್ಯಪ್​ಗಳ ಮೂಲಕ ಲಕ್ಷಾಂತರ ರೂಪಾಯಿಗಳನ್ನು ಆ ದಾಖಲಾತಿ ನೀಡಿ ಪಡೆದುಕೊಂಡಿದ್ದಾರೆ.

ಯಾವುದೇ ಲೋನ್ ಪಡೆಯದಿದ್ದರೂ ಲಕ್ಷಾಂತರ ರೂ. ಹಣ ಕಟ್ಟುವಂತೆ ಲೋನ್​ ಆ್ಯಪ್​ಗಳು ಪೀಡಿಸಿದ್ದು ಹಣ ಕಟ್ಟದ ಹಿನ್ನಲೆಯಲ್ಲಿ ಅಜ್ಮತ್‌ ಫೋಟೋ ಬಳಸಿ ಮಹಿಳೆಯರ ಜೊತೆ ನಗ್ನವಾಗಿರುವ ದೃಶ್ಯ ಸಂದೇಶಗಳನ್ನು ಸ್ನೇಹಿತರು ಕುಟುಂಬಸ್ಥರಿಗೆ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಭಯಗೊಂಡ ಅಜ್ಮದ್ ತನ್ನ ಎಸ್‌ಬಿಐ ಬ್ಯಾಂಕ್ ಖಾತೆಯಿಂದ 14,43,799 ರೂ ಸೇರಿದಂತೆ ಸ್ನೇಹಿತರ ಬಳಿ ಲಕ್ಷಾಂತರ ಸಾಲ ಮಾಡಿ ಸರಿಸುಮಾರು 15,56,731 ಲಕ್ಷ ರೂಗಳನ್ನು ವಂಚಕರ ಖಾತೆಗೆ ವರ್ಗಾವಣೆ ಮಾಡಿದ್ದಾರೆ.

ಆನ್ ಲೈನ್ ವಂಚಕರ ಸಹವಾಸ ಸಾಕಪ್ಪ ಎನ್ನುವಷ್ಟರಲ್ಲಿ ಮತ್ತೆ ಬೆದರಿಕೆ ಹಾಕಿ ನಗ್ನ ದೃಶ್ಯಗಳನ್ನು ಸ್ನೇಹಿತರಿಗೆ ಕಳುಹಿಸಿದ್ದು, ಮತ್ತ ಹಣವನ್ನು ಹಾಕುವಂತೆ ಪೀಡಿಸಿದ್ದಾರೆ. ಇದರಿಂದ ಬೇಸತ್ತ ಅಜ್ಮದ್, ನಗರ ಠಾಣೆಗೆ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ನ್ಯೂಯಾರ್ಕ್​ನಲ್ಲಿ ಭಾರತೀಯ ಲೇಖಕ ಸಲ್ಮಾನ್ ರಶ್ದಿ ಮೇಲೆ ಮಾರಣಾಂತಿಕ ಹಲ್ಲೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.