ETV Bharat / state

ಹುತಾತ್ಮ ಯೋಧ ಗುರು ಕುಟುಂಬಕ್ಕೆ ಕೈವಾರದ ವಿದ್ಯಾರ್ಥಿಗಳಿಂದ ದೇಣಿಗೆ ಸಂಗ್ರಹ - ಕೈವಾರದ ವಿದ್ಯಾರ್ಥಿಗಳು

ಪುಲ್ವಾಮಾದಲ್ಲಿ ಉಗ್ರರ ಅಟ್ಟಹಾಸಕ್ಕೆ ಹುತಾತ್ಮರಾದ ಮಂಡ್ಯ ಜಿಲ್ಲೆಯ ಗುಡಗೆರೆ ಗ್ರಾಮದ ವೀರ ಯೋಧ ಗುರು ಅವರ ಕುಟುಂಬಕ್ಕೆ ಕೈವಾರದ ವಿದ್ಯಾರ್ಥಿಗಳು ದೇಣಿಗೆ ಸಂಗ್ರಹ ಮಾಡಿದರು.

ಕೈವಾರದ ವಿದ್ಯಾರ್ಥಿಗಳಿಂದ ದೇಣಿಗೆ ಸಂಗ್ರಹ
author img

By

Published : Feb 22, 2019, 9:51 AM IST

ಚಿಕ್ಕಬಳ್ಳಾಪುರ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ಅಟ್ಟಹಾಸಕ್ಕೆ ಹುತಾತ್ಮರಾದ ಯೋಧರಲ್ಲಿ ಮಂಡ್ಯ ಜಿಲ್ಲೆಯ ಗುಡಗೆರೆ ಗ್ರಾಮದ ವೀರ ಯೋಧ ಗುರು ಕೂಡ ಒಬ್ಬರು. ಅವರ ಕುಟುಂಬಕ್ಕೆ ನೆರವಾಗಲು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೈವಾರದ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಹಳೇ ವಿದ್ಯಾರ್ಥಿಗಳು ದೇಣಿಗೆ ಸಂಗ್ರಹ ಮಾಡಿದ್ದಾರೆ.

ಕೈವಾರ ಗ್ರಾಮದ ಶಾಲೆಗಳಾದ ಶ್ರೀ ಯೋಗಿ ನಾರಾಯಣ ಪ್ರೌಢ ಶಾಲೆ, ಅಂಬೇಡ್ಕರ್ ಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ಇತರೆ ಶಾಲೆ ವಿದ್ಯಾರ್ಥಿಗಳು ಹಾಗೂ ಶ್ರೀ ಯೋಗಿ ನಾರಾಯಣ ಶಾಲೆಯ ಹಳೆಯ ವಿದ್ಯಾರ್ಥಿಗಳು ಸಾರ್ವಜನಿಕ ಆಸ್ಪತ್ರೆಯಿಂದ ಸಾರ್ವಜನಿಕ ಬಸ್ ನಿಲ್ದಾಣದವರೆಗೂ ಮೆರವಣಿಗೆ ಹೊರಟು, ಪಾಕಿಸ್ತಾನದ ಉಗ್ರಗಾಮಿಗಳ ವಿರುದ್ಧ ಧಿಕ್ಕಾರಗಳನ್ನು ಕೂಗಿ ಊರಿನ ಅಂಗಡಿಗಳಿಗೆ ಹೋಗಿ ಸುಮಾರು 25,000 ರೂ. ದೇಣಿಗೆ ಸಂಗ್ರಹಿಸಿದರು.

ಕೈವಾರದ ವಿದ್ಯಾರ್ಥಿಗಳಿಂದ ದೇಣಿಗೆ ಸಂಗ್ರಹ

ಇದೇ ವೇಳೆ ಒಂದು ನಿಮಿಷಗಳ ಕಾಲ ಹುತಾತ್ಮರಾದ ಯೋಧರಿಗೆ ಮೌನಾಚರಣೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಎಲ್ಲಾ ಶಾಲಾ ಕಾಲೇಜಿನ ಶಿಕ್ಷಕರು, ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿ ಮುಖಂಡರು ಹಾಗೂ ಊರಿನ ಗ್ರಾಮಸ್ಥರು ಹಾಜರಿದ್ದರು.

ಜಮ್ಮು ಕಾಶ್ಮೀರದ ಪುಲ್ವಾಮಾ ದಲ್ಲಿ ಉಗ್ರರ ಅಟ್ಟಹಾಸಕ್ಕೆ ಹಲವಾರು ಯೋಧರು ಹುತಾತ್ಮರಾಗಿದ್ದರು.ಅದರಲ್ಲಿಯೂ ಕೂಡ ಕರ್ನಾಟಕದ ಮಂಡ್ಯ ಜಿಲ್ಲೆಯ ಗುಡಗೆರೆ ಗ್ರಾಮದ ವೀರ ಯೋಧ ಗುರು ಅವರು ಅಸು ನೀಗಿದ್ದರು ಅವರ ಕುಟುಂಬಕ್ಕೆ ನೆರವಾಗಲು ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಕೈವಾರದ ಶಾಲಾ ಕಾಲೇಜು ವಿದ್ಯಾರ್ಥಿಗಳು, ಹಳೇ ವಿದ್ಯಾರ್ಥಿ ಯುವಕರು ದೇಣಿಗೆ ಸಂಗ್ರಹ ಮಾಡಿದ್ದಾರೆ.

ಕೈವಾರ ಗ್ರಾಮದ ಶಾಲೆಗಳಾದ ಶ್ರೀ ಯೋಗಿನಾರೆಯನ ಪ್ರೌಡ ಶಾಲೆ, ಅಂಬೇಡ್ಕರ್ ಶಾಲೆ,  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಇತರೆ ಶಾಲೆ ವಿದ್ಯಾರ್ಥಿಗಳು ಗ್ರಾಮದ ವಿವಿಧ ಬೀದಿಗಳಲ್ಲಿ ಮೆರವಣಿಗೆ ಹೊರಟು ಪಾಕಿಸ್ತಾನ ಉಗ್ರಗಾಮಿಗಳ ವಿರುದ್ಧ ದಿಕ್ಕಾರಗಳನ್ನು ಕೂಗುತ್ತಾ ,  ಊರಿನ,ಅಂಗಡಿಗಳಿಗೆ ಹೋಗಿ ದೇಣಿಗೆ ಸಂಗ್ರಹಿಸಿದರು.

ಕೈವಾದಲ್ಲಿ ಶ್ರೀ ಯೋಗಿ ನಾರಾಯಣ ಶಾಲೆಯ ಎಸ್.ಎಸ್.ಎಲ್.ಸಿ.ಹಳೆಯ ವಿದ್ಯಾರ್ಥಿಗಳು ಸೇರಿ ಪುಲ್ವಾಮದಲ್ಲಿ ಮೃತರಾದ  ಯೋದ ಗುರುರವರ ಹೆಸರಿನಲ್ಲಿ ಶ್ರದ್ಧಾಂಜಲಿ ಹಾಗೂ ದೇಣಿಗೆ ಸಂಗ್ರಹಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕೈವಾರ ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳನ್ನು ಹಾಗೂ ಕಾಲೇಜಿನ ವಿದ್ಯಾರ್ಥಿಗಳನ್ನು ಸೇರಿಸಿ ಸರ್ಕಾರಿ ಸಾರ್ವಜನಿಕ ಅಸ್ವತ್ರೆಯಿಂದ ಸಾರ್ವಜನಿಕ ಬಸ್ ನಿಲ್ದಾಣದವರೆಗೂ ಪಾಕಿಸ್ತಾನದ ವಿರುದ್ಧ ವಿದ್ಯಾರ್ಥಿಗಳು ದಿಕ್ಕಾರ ಕೂಗುತ್ತಾ ಮೆರವಣಿಗೆ ಮಾಡಲಾಯಿತು.ಹಾಗೆಯೇ ದೇಣಿಗೆ ಸಂಗ್ರಹಿಸಲಾಯಿತು.ಒಂದು ನಿಮಿಷಗಳ ಕಾಲ ಹುತಾತ್ಮರಾದ ಯೋಧರ ಹೆಸರಿನಲ್ಲಿ ಮೌನಾಚರಣೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಎಲ್ಲಾ ಶಾಲೆಯ ಹಾಗೂ ಕಾಲೇಜಿನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು,ಹಳೆಯ ವಿದ್ಯಾರ್ಥಿ ಮುಖಂಡರು ಹಾಗೂ ಊರಿನ ಗ್ರಾಮಸ್ಥರು ಹಾಜರಿದ್ದರು.ಸುಮಾರು 25000 ರೂಗಳನ್ನು ದೇಣಿಗೆ ಸಂಗ್ರಹಿಸಿ ಸ್ವತಃ ಮೃತ ಕುಟುಂಬಕ್ಕೆ ನೇರವಾಗಿ ಕೊಡುವ ನಿರ್ಧಾರ ತೆಗೆದುಕೊಂಡರು..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.