ಚಿಕ್ಕಬಳ್ಳಾಪುರ: ದೇಶದಲ್ಲಿ ಉತ್ತಮ ಮಳೆ-ಬೆಳೆ, ಹಾಗೂ ನೆಮ್ಮದಿಗಾಗಿ ಗಂಧಧೋತ್ಸವವನ್ನು ದರ್ಗಾದಲ್ಲಿ ಅದ್ದೂರಿಯಾಗಿ ಆಚರಣೆ ನಡೆಸಿರುವ ಘಟನೆ ಚಿಂತಾಮಣಿ ತಾಲೂಕಿನ ಕೋತ್ತೂರಿನಲ್ಲಿ ನಡೆದಿದೆ.
ಎನ್. ಕೊತ್ತೂರು ಗ್ರಾಮದಲ್ಲಿರುವ ಹಜರತ್- ಸೈಯದ್- ಯಾಕಿನ್- ಶಾವಲಿ ಬಾಬಾ ದರ್ಗಾದ 6ನೇ ವರ್ಷದ ಗಂಧೋತ್ಸವವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಯಿತು. ಹಲವಾರು ವರ್ಷಗಳ ಇತಿಹಾಸ ಹೊಂದಿರುವ ದರ್ಗಾ ಗಂಧಧೋತ್ಸವದಲ್ಲಿ ಸುತ್ತಮುತ್ತಲ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು.
ಗಂಧೋತ್ಸವ ಊರಿನ ಮುಖ್ಯ ರಸ್ತೆಯಲ್ಲಿ ಮೆರವಣಿಗೆಯ ಮೂಲಕ ಹೊರಟು ದರ್ಗಾ ತಲುಪಿ ಮುಸ್ಲಿಂ ಸಂಪ್ರದಾಯದ ಪ್ರಕಾರ ಗಂಧವನ್ನು ದರ್ಗಾದಲ್ಲಿ ಸಮರ್ಪಿಸಲಾಯಿತು. ದೇಶದಲ್ಲಿ ಉತ್ತಮ ಮಳೆ-ಬೆಳೆಯಾಗಲಿ, ಸಾರ್ವಜನಿಕರು ಶಾಂತಿ, ನೆಮ್ಮದಿ ಆರೋಗ್ಯವಾಗಿ ಬಾಳಲಿ ಎಂಬುವುದು ಈ ಗಂಧೋತ್ಸವದ ಉದ್ದೇಶವಾಗಿದೆ.