ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಭೂಮಿ ಮತ್ತೆ ಕಂಪಿಸಿದ. ಗುಡಿಬಂಡೆ ತಾಲೂಕಿನ ಕೆಲವು ಗ್ರಾಮಗಳಲ್ಲಿ ತಡರಾತ್ರಿ ಭೂಕಂಪ ಸಂಭವಿಸಿದೆ. ಇದರಿಂದ ಜನ ಭಯಭೀತರಾಗಿ ಮನೆಯ ಒಳಗೆ ಹೋಗಲು ಹಿಂದೇಟು ಹಾಕಿದ್ದಾರೆ.
ಗುಡಿಬಂಡೆ ತಾಲೂಕಿನ ಕಂಬಳಹಳ್ಳಿ, ಬುಲ್ಲಸಂದ್ರ ಸೇರಿದಂತೆ ಸುತ್ತಲಿನ ಹಳ್ಳಿಗಳಲ್ಲಿ ಸುಮಾರು 5 ನಿಮಿಷಗಳ ಕಾಲ ಭೂಮಿ ಕಂಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗ್ರಾಮಸ್ಥರಿಗೆ ಭೂಮಿ ಕಂಪಿಸಿದ ಅನುಭವ ಉಂಟಾದ ಹಿನ್ನೆಲೆ ಭಯಗೊಂಡು ಮನೆಯಿಂದ ಹೊರ ಬಂದು ಚಳಿಯಲ್ಲೇ ರಾತ್ರಿಯಿಡೀ ಕಾಲ ಕಳೆದಿದ್ದಾರೆ.
ಇನ್ನು ಭೂಕಂಪನದಿಂದ ಕೆಲ ಮನೆಗಳು ಬಿರುಕು ಬಿಟ್ಟಿವೆ ಎಂದು ತಿಳಿದು ಬಂದಿದೆ. ಜಿಲ್ಲೆಯಲ್ಲಿ ಆಗಾಗ ಭೂಕಂಪ ಸಂಭವಿಸುತ್ತಿರುವ ಹಿನ್ನೆಲೆ ಸಾಕಷ್ಟು ಕುಟುಂಬಗಳು ಮನೆಗಳನ್ನು ತೊರೆದು ಬೇರೆ ಕಡೆ ತೆರಳುತ್ತಿದ್ದಾರೆ.
(ಇದನ್ನೂ ಓದಿ: 'ನಾನು ಯಾವ ಟೆಸ್ಟೂ ಕೊಡೋದಿಲ್ಲ, ಫಿಟ್&ಫೈನ್ ಆಗಿದ್ದೀನಿ, ಬೇಕಾದ್ರೆ ನಿಮ್ಮ ಹೋಂ ಮಿನಿಸ್ಟರ್‌ನ ಕಳ್ಸಿ ಹೊತ್ಕೊಂಡು ಹೋಗ್ತೀನಿ')