ETV Bharat / state

ಕಾಂಗ್ರೆಸ್ ನಾಯಕಿಯ ಮಗಳ ಸಾವು ಪ್ರಕರಣ: ಸಾವಿಗೆ ಯಾರೂ ಕಾರಣರಲ್ಲ ಎಂದ ತಂದೆ - ಕಾಂಗ್ರೆಸ್ ನಾಯಕಿ‌ ಮಮತಾ ಮೂರ್ತಿ ಅವರ ಮಗಳು ನಿಹಾರಿಕ

ಕಾಂಗ್ರೆಸ್ ನಾಯಕಿಯ ಮಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಪ್ರಕರಣದ ಕುರಿತಾಗಿ ಮೃತ ಯುವತಿಯ ತಂದೆಯು ತಮ್ಮ ಮಗಳ ಸಾವಿಗೆ ಯಾರು ಕಾರಣರಲ್ಲ ಎಂದು ದೂರು ನೀಡಿದ್ದಾರೆ.

Death of Congress leader's daughter
ಕಾಂಗ್ರೆಸ್ ನಾಯಕಿಯ ಮಗಳ ಸಾವು ಪ್ರಕರಣ
author img

By

Published : Aug 19, 2020, 9:29 PM IST

ಚಿಕ್ಕಬಳ್ಳಾಪುರ: ಮನೆಯಲ್ಲಿ‌ ಅನುಮಾನಾಸ್ಪದ ರೀತಿಯಲ್ಲಿ ಕಾಂಗ್ರೆಸ್ ನಾಯಕಿ‌ ಮಮತಾ ಮೂರ್ತಿ ಅವರ ಮಗಳು ನಿಹಾರಿಕ (18) ನೇಣಿಗೆ ಶರಣಾಗಿದ್ದು, ಇದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಮೃತ ಯುವತಿಯ ತಂದೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ತನ್ನ ಮಗಳ ಸಾವಿಗೆ ಯಾರೂ ಕಾರಣರಲ್ಲ ಎಂದು ಉಲ್ಲೇಖಿಸಿದ್ದಾರೆ.

ಸಾವಿನ ಬಗ್ಗೆ ಹಲವು ಅನುಮಾನಗಳು ಕೇಳಿ ಬರುತ್ತಿರುವುದರಿಂದ, ಮೃತಳ ತಂದೆ ಶಿಡ್ಲಘಟ್ಟ ತಾಲೂಕು ಆರೋಗ್ಯಾಧಿಕಾರಿ ವೆಂಕಟೇಶ್ ಮೂರ್ತಿ ಚಿಕ್ಕಬಳ್ಳಾಪುರ ನಗರ ಠಾಣೆಗೆ ಭೇಟಿ ನೀಡಿದ್ದು ದೂರು ದಾಖಲಿಸಿದ್ದಾರೆ.

ಕಾಂಗ್ರೆಸ್ ನಾಯಕಿಯ ಮಗಳ ಸಾವು ಪ್ರಕರಣ

ದೂರಿನಲ್ಲಿ ಏನಿದೆ..?

ನಿಹಾರಿಕ ಪಿಯುಸಿ ಪರೀಕ್ಷೆಯ ನಂತರ ಸಿಇಟಿ ಹಾಗೂ ನೀಟ್ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದಳು. ನೀಟ್ ಪರೀಕ್ಷೆ ನಡೆಯದೇ ಮುಂದುಡುತ್ತಿದ್ದರಿಂದ ಬೇಸರಗೊಂಡು ಹಾಗೂ ಸಿಇಟಿ ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ಪಡೆದುಕೊಳ್ಳುವ ಆತಂಕದಿಂದ ತನ್ನಷ್ಟಕ್ಕೆ ತಾನೇ ನೇಣು ಬಿಗಿದು‌ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅವಳ ಸಾವಿಗೆ ಬೇರೆ ಯಾವುದೇ ಕಾರಣಗಳಿಲ್ಲ ಎಂದು‌ ಉಲ್ಲೇಖಿಸಿದ್ದಾರೆ.

ಬಾಗಿಲು ಒಡೆದು‌ ನೋಡಿದಾಗ ಅಲ್ಪಸ್ವಲ್ಪ ಉಸಿರಾಡುತ್ತಿದ್ದ ಮಗಳನ್ನು, ಆ್ಯಂಬುಲೆನ್ಸ್​​ನಲ್ಲಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಬರುವ ಮಾರ್ಗ ಮಧ್ಯೆಯೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರೆಂದು ದಾಖಲಿಸಿದ್ದಾರೆ.

ಪ್ರಕರಣವನ್ನು ದಾಖಲಿಸಿಕೊಂಡ ಚಿಕ್ಕಬಳ್ಳಾಪುರ ಪೊಲೀಸರು, ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಯ ಶವಗಾರದಿಂದ ಚಿಕ್ಕಬಳ್ಳಾಪುರ ಸಾರ್ವಜನಿಕ ಶವಗಾರಕ್ಕೆ ಶವವನ್ನು ರವಾನಿಸಿದ್ದು ಮುಂದಿನ ಕ್ರಮಕ್ಕೆ ಕೈ ಗೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.