ETV Bharat / state

ಫಸಲು ಬಂದರೂ ಆದಾಯ ಶೂನ್ಯ.. ಕಸದ ರಾಶಿ ಸೇರುತ್ತಿದೆ ಚಿಕ್ಕಬಳ್ಳಾಪುರ ದ್ರಾಕ್ಷಿ ಬೆಳೆ

ಕೊರೊನಾ ಹರಡದಂತೆ ತಡೆಯಲು ಲಾಕ್​ಡೌನ್​ ಘೋಷಿಸಿರುವ ಹಿನ್ನೆಲೆ ಚಿಕ್ಕಬಳ್ಳಾಪುರದ ದ್ರಾಕ್ಷಿ ಬೆಳೆಗಾರರು ಕಂಗಾಲಾಗಿದ್ದಾರೆ.

grapes
ದ್ರಾಕ್ಷಿ
author img

By

Published : Mar 29, 2020, 9:47 PM IST

ಚಿಕ್ಕಬಳ್ಳಾಪುರ: ತಾಲೂಕಿನ ತಮ್ಮನಾಯಕನಹಳ್ಳಿ ಗ್ರಾಮದ ಗಂಗರಾಜು‌ ಮತ್ತು ಸಹೋದರರು ತಮ್ಮ 6 ಎಕರೆ‌ ಜಮೀನಿನಲ್ಲಿ ದ್ರಾಕ್ಷಿ ಬೆಳೆಯನ್ನು ಬೆಳೆದಿದ್ದರು.

ಬ್ಯಾಂಕ್‌ ನಲ್ಲಿ ‌ಸಾಲ‌ಮಾಡಿ ಇವರು ದ್ರಾಕ್ಷಿ ಬೆಳೆದಿದ್ದರು. ಆದರೆ ಕೊರೊನಾ ಎಂಬ ಮಹಾಮಾರಿ ರೈತನ‌ ಕನಸಿಗೆ ಕೊಳ್ಳಿಯಿಟ್ಟಿದೆ. ಪ್ರಧಾನಿ‌ ನರೇಂದ್ರ ಮೋದಿ 21 ದಿನಗಳ‌ ಕಾಲ ಲಾಕ್​ಡೌನ್​ ಘೋಷಿಸಿದ ಹಿನ್ನೆಲೆ ಮಾರುಕಟ್ಟೆಗಳು ಬಂದ್​ ಆಗಿವೆ.

ರೈತರ ಗೋಳು ಕೇಳೋರು ಯಾರು..?

ರೈತ ಬೆಳೆದ ದ್ರಾಕ್ಷಿಬೆಳೆ ಕಸದ ರಾಶಿ ಸೇರುತ್ತಿದೆ. ಒಂದು ವರ್ಷದ ಕಾಲ‌ ಕುಟುಂಬವೇ‌ ಈ ದ್ರಾಕ್ಷಿ ಬೆಳೆಯನ್ನ ನಂಬಿಕೊಂಡಿದ್ದು ಕೊರೊನಾ ಕರಿ‌ನೆರಳಿನಿಂದ‌ ರೈತ ಕಂಗಾಲಾಗಿದ್ದಾನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.