ETV Bharat / state

ಗುಡಿಬಂಡೆ ಪಟ್ಟಣ ಪಂಚಾಯತ್​ ಚುನಾವಣೆ: 66 ನಾಮಪತ್ರ ಸಲ್ಲಿಕೆ - 66 Nomination Submission for Gudibande Town Panchayat Election

ಗುಡಿಬಂಡೆ ಪಟ್ಟಣ ಪಂಚಾಯತ್​ ಚುನಾವಣೆಗೆ ಒಟ್ಟು 66 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ವಾಪಸ್​ ಪಡೆಯಲು ಎರಡು ದಿನಗಳ ಕಾಲಾವಕಾಶ ಇದೆ.

Gudibande Town Panchayat Election
Gudibande Town Panchayat Election
author img

By

Published : Apr 16, 2021, 9:10 AM IST

ಗುಡಿಬಂಡೆ(ಚಿಕ್ಕಬಳ್ಳಾಪುರ): ಕುತೂಹಲ ಕೆರಳಿಸಿರುವ ಪಟ್ಟಣ ಪಂಚಾಯತ್​ ಚುನಾವಣೆಗೆ ಇಲ್ಲಿಯವರೆಗೂ ಒಟ್ಟು 66 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ.

ನಾಮಪತ್ರ ಸಲ್ಲಿಸಲು ನಿನ್ನೆ ಕೊನೆಯ ದಿನವಾಗಿತ್ತು. ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ಮತ್ತು ಪಕ್ಷೇತರರು ಸೇರಿದಂತೆ ಇಲ್ಲಿಯವರೆಗೆ ಒಟ್ಟು 66 ಅಭ್ಯರ್ಥಿಗಳು ನಾಮಿನೇಶನ್‌ ಮಾಡಿದ್ದಾರೆ.

ಬಿ-ಫಾರಂನಿಂದ ಭುಗಿಲೆದ್ದ ಅಸಮಾಧಾನ:

ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬಿ-ಫಾರಂ ಪಡೆದು ಸ್ಪರ್ಧಿಸುವ ಬಯಕೆ ಹೊಂದಿದ್ದ ಆಕಾಂಕ್ಷಿಗಳು ನಿರಾಶೆ ಅನುಭವಿಸಿದ್ದು, ಅಸಮಾಧಾನ ಭುಗಿಲೆದ್ದಿದೆ. ಕೆಲವರು ಕೊನೆ ಗಳಿಗೆಯಲ್ಲಿ ಬೇರೆ ಪಕ್ಷದ ಬಿ-ಫಾರಂ ಪಡೆದು ನಾಮಪತ್ರ ಸಲ್ಲಿಸಿದರೆ, ಇನ್ನೂ ಕೆಲವರು ಪಕ್ಷದ ವಿರುದ್ಧ ಬಂಡಾಯವೆದ್ದು ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದಾರೆ. ಈ ಮೂಲಕ ಎಲೆಕ್ಷನ್‌ನಲ್ಲಿ ವಿಜೇತರಾಗಿ ಪಕ್ಷಕ್ಕೆ ಸೆಡ್ಡು ಹೊಡೆಯಲು ಮುಂದಾಗಿದ್ದಾರೆ.

ಬಿ-ಫಾರಂ ಹಂಚಿಕೆ ಪ್ರಕ್ರಿಯೆ ಕಾಂಗ್ರೆಸ್ ಮುಖಂಡರಿಗೆ ತಲೆಬಿಸಿಯಾಗಿ ಪರಿಣಮಿಸಿದ್ದು, ನಾಮಪತ್ರ ವಾಪಸ್​ ಪಡೆಯಲು ಎರಡು ದಿನಗಳ ಕಾಲಾವಕಾಶ ಇದೆ. ಹಾಗಾಗಿ ಮುಖಂಡರು ಹಾಗೂ ಶಾಸಕರು ಬಂಡಾಯ ಅಭ್ಯರ್ಥಿಗಳ ಮನವೊಲಿಸಲು ಪ್ರಯತ್ನಿಸುತ್ತಾರಾ? ಅನ್ನೋದನ್ನು ಕಾದು ನೋಡಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.