ETV Bharat / state

ಪೋಷಕರು ಕಾಲೇಜಿಗೆ ಹೋಗು ಎಂದಿದ್ದಕ್ಕೆ ಯುವತಿ ಆತ್ಮಹತ್ಯೆ! - ಯುವತಿ ಆತ್ಮಹತ್ಯೆ

ಪೋಷಕರು ಕಾಲೇಜಿಗೆ ಹೋಗು ಎಂದು ಬಲವಂತ ಮಾಡಿದ್ದಕ್ಕೆ ಮನನೊಂದ ಯುವತಿಯೋರ್ವಳು ಕ್ರಿಮಿನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ದಿವ್ಯಾ ಮೃತ ಯುವತಿ.

young woman commits
ದಿವ್ಯಾ
author img

By

Published : Mar 17, 2021, 6:54 PM IST

ಕೊಳ್ಳೇಗಾಲ/ಚಾಮರಾಜನಗರ: ಪೋಷಕರು ಕಾಲೇಜಿಗೆ ಹೋಗು ಎಂದು ಬಲವಂತ ಮಾಡಿದ್ದಕ್ಕೆ ಮನನೊಂದ ಯುವತಿಯೋರ್ವಳು ಕ್ರಿಮಿನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಳ್ಳೇಗಾಲದಲ್ಲಿ ನಡೆದಿದೆ.

ಮೇಗಲದೊಡ್ಡಿ ಗ್ರಾಮದ ಲೂರ್ಧಸ್ವಾಮಿ ಎಂಬುವರ ಮಗಳು ದಿವ್ಯಾ ಮೃತ ದುರ್ದೈವಿ. ಈಕೆ ಕಳೆದ ವರ್ಷ ಕೊರೊನಾ ಹಿನ್ನೆಲೆ ಲಾಕ್​ಡೌನ್​ನಿಂದ ಕಾಲೇಜಿಗೆ ಹೋಗದೆ ಕೂಲಿ ಕೆಲಸ ಮಾಡಿಕೊಂಡಿದ್ದಳು. ಆದರೆ ಕಾಲೇಜು ಆರಂಭವಾದ ಬಳಿಕ ಓದಲು ಹೋಗು ಎಂದು ಪೋಷಕರು ಬಲವಂತ ಮಾಡಿ ಕಾಲೇಜಿಗೆ ಕಳುಹಿಸಿದ್ದರು. ಕಾಲೇಜಿಗೆ ಹೋಗಲು ಇಷ್ಟವಿಲ್ಲದ ಕಾರಣ ದಿವ್ಯಾ ಇಂದು ಕ್ರಿಮಿನಾಶಕವನ್ನು ಸೇವಿಸಿದ್ದಾಳೆ. ಕ್ರಿಮಿನಾಶಕ ಕುಡಿದು ನರಳುತ್ತಿದ್ದ ಮಗಳನ್ನು ನೋಡಿದ ಪೋಷಕರು ತಕ್ಷಣ ಉಪವಿಭಾಗ ಸರ್ಕಾರಿ ಆಸ್ಪತ್ರೆಗೆ ಕರೆ ತರುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

ಓದಿ: ಕುಸ್ತಿಪಂದ್ಯದಲ್ಲಿ ಸೋತ ಹತಾಶೆ: ಆತ್ಮಹತ್ಯೆಗೆ ಶರಣಾದ ಬಬಿತಾ ಫೋಗಟ್‌ ಸಂಬಂಧಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.