ETV Bharat / state

ಕಾಡುಗಳ್ಳನ ಊರಲ್ಲಿ ಅಧಿಕಾರಿಯೇ ದೇವರು: ವೀರಪ್ಪನ್ ಸತ್ತರೂ ಶ್ರೀನಿವಾಸನ್ ಅಮರ..! - ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನ

ಅರಣ್ಯ ಅಧಿಕಾರಿ ಶ್ರೀನಿವಾಸನ್​​ ಕಾಡುಗಳ್ಳ ವೀರಪ್ಪನ್​​​​ ಸಂಚಿಗೆ ಬಲಿಯಾಗಿ 27 ವರ್ಷಗಳಾಗುತ್ತಾ ಬಂದರೂ ನೆಚ್ಚಿನ ಅಧಿಕಾರಿಯನ್ನು ನೆನೆದು  ಇಂದಿಗೂ ಗೋಪಿನಾಥಂ ಗ್ರಾಮದ ಜನರು ಕಣ್ಣೀರಾಕುತ್ತಾರೆ. ದೇವಾಲಯದಲ್ಲಿ ಅವರ ಫೋಟೋ ಇಟ್ಟು ಪೂಜಿಸುತ್ತಾರೆ, ವರ್ಷಕ್ಕೊಮ್ಮೆ ನಡೆಯುವ ಮಾರಿಹಬ್ಬದಲ್ಲಿ ಅವರ ಫೋಟೋ ಸಮೇತ ಆಹ್ವಾನ ಪತ್ರಿಕೆ ಮುದ್ರಿಸುತ್ತಾರೆ.

ಶ್ರೀನಿವಾಸ್​ ಇರುವ ಆಹ್ವಾನ ಪತ್ರಿಕೆ ಮತ್ತು ದೇವಸ್ಥಾನ
author img

By

Published : Sep 11, 2019, 8:37 PM IST

ಚಾಮರಾಜನಗರ : ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವಾದ ಇಂದು ದೇಶದೆಲ್ಲೆಡೆ ಹುತಾತ್ಮ ಅರಣ್ಯಾಧಿಕಾರಿಗಳನ್ನು ನೆನೆಯುತ್ತಾರೆ. ಆದರೆ, ಕಾಡುಗಳ್ಳ, ದಂತಚೋರ ವೀರಪ್ಪನ್ ಊರಿನಲ್ಲಿ ಅರಣ್ಯಾಧಿಕಾರಿ ಶ್ರೀನಿವಾಸನ್​​ನನ್ನು ಜನರು ನೆನೆಯುತ್ತಾರೆ.

ಶ್ರೀನಿವಾಸನ್​​ ಕಾಡುಗಳ್ಳ ವೀರಪ್ಪನ್​​​​ ಸಂಚಿಗೆ ಬಲಿಯಾಗಿ 27 ವರ್ಷಗಳಾಗುತ್ತಾ ಬಂದರೂ ನೆಚ್ಚಿನ ಅಧಿಕಾರಿಯನ್ನು ನೆನೆದು ಇಂದಿಗೂ ಗೋಪಿನಾಥಂ ಗ್ರಾಮದ ಜನರು ಕಣ್ಣೀರು ಹಾಕುತ್ತಾರೆ. ದೇವಾಲಯದಲ್ಲಿ ಅವರ ಫೋಟೋ ಇಟ್ಟು ಪೂಜಿಸುತ್ತಾರೆ, ವರ್ಷಕ್ಕೊಮ್ಮೆ ನಡೆಯುವ ಮಾರಿಹಬ್ಬದಲ್ಲಿ ಅವರ ಫೋಟೋ ಸಮೇತ ಆಹ್ವಾನ ಪತ್ರಿಕೆ ಮುದ್ರಿಸುತ್ತಾರೆ.

ಕಾಡುಗಳ್ಳನ ಊರಲ್ಲಿ ಅಧಿಕಾರಿಯೇ ದೇವರು: ವೀರಪ್ಪನ್ ಮರೆಯಾದರೂ ಶ್ರೀನಿವಾಸನ್ ಅಮರ..!

ಅಪ್ಪಟ ಅಹಿಂಸಾವಾದಿಯಾಗಿದ್ದ ಪಿ.ಶ್ರೀನಿವಾಸನ್ ಮಹಾತ್ಮಾ ಗಾಂಧೀಜಿ, ವಿನೋಬಾ ಭಾವೆಯಿಂದ ಪ್ರಭಾವಿತರಾಗಿ ಕಾಡುಗಳ್ಳ ವೀರಪ್ಪನ್​​ನನ್ನು ಅಹಿಂಸೆಯಿಂದಲೇ ಬದಲಾಯಿಸುತ್ತೇನೆ ಎಂಬ ನಂಬಿಕೆ ಇಟ್ಟಿದ್ದರು. ಆದ್ರೆ, ಆ ನಂಬಿಕೆಯೇ ಅವರನ್ನು ಬಲಿ ಪಡೆಯಿತು ಎನ್ನುತ್ತಾರೆ ಗ್ರಾಮಸ್ಥರು.

ದಂತಚೋರ ವೀರಪ್ಪನ್ ಕೇವಲ ಒಂದು ಬಾರಿ ಮಾತ್ರ ಪೊಲೀಸರಿಗೆ ಸೆರೆಸಿಕ್ಕಿದ್ದ. 1980 ರಲ್ಲಿ ಬೆಂಗಳೂರು ಸಾರ್ಕ್ ಸಮ್ಮೇಳನ ನಡೆಯುವ ವೇಳೆ ವೀರಪ್ಪನ್​ನನ್ನು ಬಂಧಿಸಿ ಅರಣ್ಯ ಇಲಾಖೆಗೆ ಬೆಂಗಳೂರಿನ ಅಧಿಕಾರಿಗಳು ಒಪ್ಪಿಸಿದ್ದರು. ನಂತರ ಚಾಮರಾಜನಗರದ ಬೂದಿಪಡಗ ಗೆಸ್ಟ್ ಹೌಸ್​​​ನಲ್ಲಿ 3 ದಿನ ವಿಚಾರಣೆ ನಡೆಸಲಾಗಿತ್ತು.

ಇನ್ನು ಅರಣ್ಯ ಅಧಿಕಾರಿ ಶ್ರೀನಿವಾಸನ್ ರೌಂಡ್ಸ್​​​ಗೆ ಹೋದ ವೇಳೆ ಗೆಸ್ಟ್ ಹೌಸ್ ನಿಂದ ಪರಾರಿಯಾದ ವೀರಪ್ಪನ್ ಇನ್ನೆಂದೂ ಪೊಲೀಸರಿಗಾಗಲಿ, ಅರಣ್ಯಾಧಿಕಾರಿಗಳಿಗಾಗಲಿ ಜೀವಂತವಾಗಿ ಸಿಗಲಿಲ್ಲ.

ನಂತರ ನಾನು ಶರಣಾಗುತ್ತೇನೆಂದು ಸಂಚು ಮಾಡಿದ ವೀರಪ್ಪನ್​​, ಡಿಸಿಎಫ್ ಶ್ರೀನಿವಾಸನ್ ಅವರನ್ನು 1991 ನವೆಂಬರ್ 10 ರಂದು ಗೋಪಿನಾಥಂನಿಂದ ನಲ್ಲೂರು ಬಳಿ ಕರೆಸಿ ತಲೆ ಕತ್ತರಿಸಿ ಬರ್ಬರವಾಗಿ ಕೊಂದು ಹಾಕುತ್ತಾನೆ.

ಅಪ್ಪಟ ಗಾಂಧಿವಾದಿಯಾಗಿದ್ದ ಸಾಹೇಬರು ತಮಗೆ ಮನೆಗಳನ್ನು ಕಟ್ಟಿಸಿಕೊಟ್ಟರು, ಮಾರಿಯಮ್ಮ ದೇಗುಲ ನಿರ್ಮಿಸಿ ಕೊಟ್ಟಿದ್ದಾರೆ. ಇಂದಿಗೂ ಅವರ ಫೋಟೋ ಗ್ರಾಮದ ಪ್ರತಿಯೊಬ್ಬರ ಮನೆಗಳಲ್ಲೂ ಇದ್ದು, ಗ್ರಾಮದ ದೇವಾಲಯದಲ್ಲಿ ಸಾಹೇಬರಿಗೆ ಪ್ರಥಮ ಪೂಜೆ ಎನ್ನುತ್ತಾರೆ ಗೋಪಿನಾಥಂ ಗ್ರಾಮದ ಯಜಮನ ಭೂಪಾಲ್ ಗೌಂಡ.

Intro:ಕಾಡುಗಳ್ಳನ ಊರಲ್ಲಿ ಅಧಿಕಾರಿಯೇ ದೇವರು: ವೀರಪ್ಪನ್ ಮರೆಯಾದರೂ ಶ್ರೀನಿವಾಸನ್ ಅಮರ!

ಚಾಮರಾಜನಗರ: ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವಾದ ಇಂದು ದೇಶದೆಲ್ಲೆಡೆ ಹುತಾತ್ಮ ಅರಣ್ಯಾಧಿಕಾರಿಗಳನ್ನು ನೆನೆಯುತ್ತಾರೆ. ಆದರೆ, ಕಾಡುಗಳ್ಳ, ದಂತಚೋರ ವೀರಪ್ಪನ್ ಊರಿನಲ್ಲಿ ಅರಣ್ಯಾಧಿಕಾರಿ ಶ್ರೀನಿವಾಸನ್ ಅಜರಾಮರ.

Body:ಹೌದು, ಕಾಡುಗಳ್ಳನ ಸಂಚಿಗೆ ಬಲಿಯಾಗಿ 27 ವರ್ಷಗಳಾಗುತ್ತಾ ಬಂದರೂ ನೆಚ್ಚಿನ ಅಧಿಕಾರಿಯನ್ನು ನೆನೆದು ಇಂದಿಗೂ ಕಣ್ಣೀರಾಗುತ್ತಾರೆ. ದೇವಾಲಯದಲ್ಲಿ ಅವರ ಫೋಟೋ ಇಟ್ಟು ಪೂಜಿಸುತ್ತಾರೆ, ವರ್ಷಕ್ಕೊಮ್ಮೆ ನಡೆಯುವ ಮಾರಿಹಬ್ಬದಲ್ಲಿ ಅವರ ಫೋಟೋ ಸಮೇತ ಆಹ್ವಾನ ಪತ್ರಿಕೆ ಮುದ್ರಿಸುತ್ತಾರೆ ಗ್ರಾಮಸ್ಥರು.

ಅಪ್ಪಟ ಅಹಿಂಸಾವಾಗಿದ್ದ ಪಿ.ಶ್ರೀನಿವಾಸನ್ ಮಹಾತ್ಮಾ ಗಾಂಧೀಜಿ, ವಿನೋಬಾ ಭಾವೆಯಿಂದ ಪ್ರಭಾವಿತರಾಗಿ ಕಾಡುಗಳ್ಳನನ್ನು ಅಹಿಂಸೆಯಿಂದ ಬದಲಾಯಿಸುತ್ತೇನೆ ಎಂಬ ನಂಬಿಕೆಯೇ ಅವರನ್ನು ಬಲಿ ಪಡೆಯಿತು ಎಂಬುದು ದುರಂತ.

ಅವನೂ ನಮ್ಮಂತೆಯೇ ಗ್ರಾಮದಲ್ಲಿ ಓಡಾಡಬೇಕು ಕಳ್ಳತನದ ಕೆಲಸ ಬಿಟ್ಟು ಸರಿಯಾಗಿ ನಡೆಯಬೇಕು, ಆತನನ್ನು ಮುಖ್ಯವಾಹಿನಿಗೆ ಕರೆತರಬೇಕೆಂಬ ಒಳ್ಳೆಯನವೇ ಮುಳುವಾಯಿತು ಎಂದು ಕಣ್ಣಾಲಿಗಳನ್ನು ಒದ್ದೆ ಮಾಡಿಕೊಳ್ಳುತ್ತಾರೆ ಗೋಪಿನಾಥಂನ ಅರಣ್ಯ ರಕ್ಷಕ ವೀರಪ್ಪನ್.

Bite2- ವೀರಪ್ಪನ್, ಶ್ರೀನಿವಾಸನ್ ಇದ್ದಾಗಿನ ನೌಕರ

ದಂತಚೋರ ವೀರಪ್ಪನ್ ಕೇವಲ ಒಂದು ಬಾರಿ ಮಾತ್ರ ಪೊಲೀಸರಿಗೆ ಸೆರೆಸಿಕ್ಕಿದ್ದ. ೧೯೮೦ರಲ್ಲಿ ಬೆಂಗಳೂರು ಸಾರ್ಕ್ ಸಮ್ಮೇಳನ ನಡೆಯುವ ವೇಳೆ ವೀರಪ್ಪನ್ ನ್ನು ಬಂಧಿಸಿ ಅರಣ್ಯ ಇಲಾಖೆಗೆ ಬೆಂಗಳೂರಿನ ಅಧಿಕಾರಿಗಳು ಡಿಎಫ್ಒ ಶ್ರೀನಿವಾಸನ್ ಗೆ ಒಪ್ಪಿಸಿದ್ದರು. ಚಾಮರಾಜನಗರದ ಬೂದಿಪಡಗ ಗೆಸ್ಟ್ ಹೌಸ್ ನಲ್ಲಿ ೩ ದಿನ ವಿಚಾರಣೆಗಿಡಲಾಗಿತ್ತು.

ಶ್ರೀನಿವಾಸನ್ ರೌಂಡ್ಸ್ ಗೆ ಹೋದ ವೇಳೆ ಗೆಸ್ಟ್ ಹೌಸ್ ನಿಂದ ಪರಾರಿಯಾದ ವೀರಪ್ಪನ್ ಇನ್ನೆಂದೂ ಪೊಲೀಸರಿಗಾಗಲಿ- ಅರಣ್ಯಾಧಿಕಾರಿಗಳಿಗಾಗಲಿ ಜೀವಂತವಾಗಿ ಸಿಗಲಿಲ್ಲ.

ಶರಣಾಗುತ್ತೇನೆಂದು ಸಂಚು ಮಾಡಿ
ಡಿಸಿಎಫ್ ಶ್ರೀನಿವಾಸನ್ ಅವರನ್ನು ೧೯೯೧ ನವೆಂಬರ್ ೧೦ ರಂದು ಗೋಪಿನಾಥಂನಿಂದ ಅಣತಿ ದೂರದ ನಲ್ಲೂರು ಬಳಿ ತಲೆ ಕತ್ತರಿಸಿ ಬರ್ಬರವಾಗಿ ಕೊಂದು ಹಾಕುತ್ತಾನೆ.

ಅಪ್ಪಟ ಗಾಂಧಿವಾಗಿದ್ದ ಸಾಹೇಬರು ತಮಗೆ ಮನೆಗಳನ್ನು ಕಟ್ಟಿಸಿಕೊಟ್ಟರು, ಮಾರಿಯಮ್ಮ ದೇಗುಲ ನಿರ್ಮಿಸಿ ಕೊಟ್ಟಿದ್ದಾರೆ. ಇಂದಿಗೂ ಅವರ ಫೋಟೋ ಗ್ರಾಮದ ಪ್ರತಿಯೊಬ್ಬರ ಮನೆಗಳಲ್ಲೂ ಇದ್ದು, ಗ್ರಾಮದ ದೇವಾಲಯದಲ್ಲಿ ಸಾಹೇಬರಿಗೆ ಪ್ರಥಮ ಪೂಜೆ ಎಂದು ಗೋಪಿನಾಥಂ ಗ್ರಾಮದ ಯಜಮನರಾದ ಭೂಪಾಲ್ ಗೌಂಡರ್ ಈಟಿವಿ ಭಾರತಕ್ಕೆ ತಿಳಿಸಿದರು.

Bite1- ಭೂಪಾಲ್ ಗೌಂಡರ್, ಗೋಪಿನಾಥಂ ಗ್ರಾಮದ ಮುಖಂಡ

ಕಾಡಿನ ದಾರಿಗೆ ಸಾಹೇಬರ ಹೆಸರಿಡಲಾಗಿದೆ, ಗೋಪಿನಾಥಂ ಮಿಸ್ಟ್ರಿ ಕ್ಯಾಂಪಿನ ಸಭಾಂಗಣಕ್ಕೆ ಅವರ ಹೆಸರಿನ್ನಿಡಲಾಗಿದೆ.

Conclusion:ಗೋಪಿನಾಥಂನಲ್ಲಿ ವೀರಪ್ಪನ್ ನೆನಪು ಅಳಿದರೂ ಡಿಸಿಎಫ್ ಶ್ರೀನಿವಾಸನ್ ಅವರ ಹೆಸರು ಮಾತ್ರ ಶಾಶ್ವತ ಎಂಬುದಂತೂ ದಿಟ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.