ETV Bharat / state

3 ದಿನದಲ್ಲಿ 30 ಕುರಿ, 2 ಎಮ್ಮೆ ಕದ್ದ ಖದೀಮರು... ಗಡಿ ಜಿಲ್ಲೆಯಲ್ಲಿ ಹೆಚ್ಚಿದ ಕಳ್ಳರ ಹಾವಳಿ - ಸಂತೇಮರಹಳ್ಳಿ ಠಾಣಾ ವ್ಯಾಪ್ತಿ

ಚಾಮರಾಜನಗರ ಜಿಲ್ಲೆಯಲ್ಲಿ ಮತ್ತೆ ಕುರಿ ಹಾಗೂ ಎಮ್ಮೆ ಕಳ್ಳರ ಹಾವಳಿ ಹೆಚ್ಚಾಗಿದೆ. ಜಿಲ್ಲೆಯ ಸಂತೇಮರಹಳ್ಳಿ, ಯಳಂದೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ 3 ದಿನದಲ್ಲಿ 30ಕ್ಕೂ ಹೆಚ್ಚು ಕುರಿಗಳು ಹಾಗೂ ಎರಡು ಎಮ್ಮೆ ಕಳುವಾಗಿವೆ.

ಹಗಲಲ್ಲಿ ಸ್ಕೆಚ್​,ರಾತ್ರಿ ಕುರಿಗಳೊಂದಿಗೆ ಎಸ್ಕೇಪ್​..ಚಾಮರಾಜನಗರದಲ್ಲೆ ಹೆಚ್ಚಾಗ್ತಿದೆ ಕುರಿಗಳ್ಳರ ಕಾಟ
author img

By

Published : Sep 14, 2019, 8:06 AM IST

ಚಾಮರಾಜನಗರ: ಜಿಲ್ಲೆಯ ಸಂತೇಮರಹಳ್ಳಿ, ಯಳಂದೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮೂರು ದಿನದಲ್ಲಿ 30ಕ್ಕೂ ಹೆಚ್ಚು ಕುರಿಗಳು ಹಾಗೂ ಎರಡು ಎಮ್ಮೆ ಕಳುವಾಗಿವೆ. ಇದು ಹೈನುಗಾರಿಕೆಯಲ್ಲಿ ತೊಡಗಿರುವವರನ್ನು ಬೆಚ್ಚಿ ಬೀಳಿಸಿದೆ.

ಚಾಮರಾಜನಗರದಲ್ಲಿ ಹೆಚ್ಚಾಗ್ತಿದೆ ಕುರಿಗಳ್ಳರ ಕಾಟ

ಸಂತೇಮರಹಳ್ಳಿ ಠಾಣಾ ವ್ಯಾಪ್ತಿಯ ಮಹಾದೇವಯ್ಯ ಎಂಬುವವರ ದೊಡ್ಡಿಯಲ್ಲಿ 9 ಆಡುಮರಿ, ಪುಟ್ಟಮಾದಯ್ಯ ಎಂಬುವವರ ಮನೆಯಲ್ಲಿ12 ಕುರಿಗಳು ಒಂದೇ ರಾತ್ರಿ ಕಳುವಾಗಿವೆ. ಬುಧವಾರ ರಾತ್ರಿ ಕಿನಕಹಳ್ಳಿ ಮತ್ತು ಕಟ್ಟಣವಾಡಿಯಲ್ಲಿ 2 ಎಮ್ಮೆಗಳು,11 ಕುರಿಗಳು ಕಳುವಾಗಿದ್ದವು.

ಕಳೆದ ವರ್ಷ ಚಾಮರಾಜನಗರ ಸುತ್ತಮುತ್ತ ಕುರಿಗಳ್ಳರ ಹಾವಳಿ ಮಿತಿಮೀರಿತ್ತು. ಬಳಿಕ ಮೂವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ ನಂತರ ಕಳ್ಳತನ ಹತೋಟಿಗೆ ಬಂದಿತ್ತು. ಆದರೆ ಮತ್ತೆ ಈ ಭಾಗದಲ್ಲಿ ಕುರಿಗಳ್ಳರ ಹಾವಳಿ ಹೆಚ್ಚಾಗಿದೆ.

Intro:ಹಗಳಲ್ಲಿ ಸ್ಕೆಚ್ಚು-ರಾತ್ರಿ ವೇಳೆ ಕುರಿಗಳೊಂದಿಗೆ ಎಸ್ಕೇಪು: ಚಾಮರಾಜನಗರಕ್ಕೆ ಕುರಿಗಳ್ಳರ ಲಗ್ಗೆ!

ಚಾಮರಾಜನಗರ: ಟೆಂಪೊ, ಬೊಲೆರೊ ವಾಹನಗಳಲ್ಲಿ ಬಂದು ಹಿಂಡುಗಟ್ಟಲೇ ಕುರಿಗಳನ್ನು ಕದ್ದೋಯ್ಯುತ್ತಿರುವ ಘಟನೆಗಳು ಕುರಿಗಾಹಿಗಳನ್ನು ಬೆಚ್ಚಿ ಬೀಳಿಸಿದೆ.

Body:ಹೌದು, ಸಂತೇಮರಹಳ್ಳಿ, ಯಳಂದೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ೩ ದಿನಗಳಿಂದ ೩೦ ಕ್ಕೂ ಹೆಚ್ಚು ಕುರಿಗಳು, ಎರಡು ಎಮ್ಮೆ ಕಳುವಾಗಿದ್ದು ಹೈನುಗಾರಿಕೆಯಲ್ಲಿ ತೊಡಗಿರುವವರನ್ನು ಬೆಚ್ಚಿ ಬೀಳಿಸಿದೆ.

ಸಂತೇಮರಹಳ್ಳಿ ಠಾಣಾ ವ್ಯಾಪ್ತಿಯ ನಂಜಯ್ಯ ಎಂಬವರ ಮಗ ಮಹಾದೇವಯ್ಯ ಅವರ ದೊಡ್ಡಿಯಲ್ಲಿ ೯ ಆಡುಮರಿ, ಪುಟ್ಟಮಾದಯ್ಯ ಎಂಬವರ ಮನೆಯಲ್ಲಿ ೧೨ ಕುರಿ ಒಂದೇ ರಾತ್ರಿ ಕಳವಾಗಿದೆ. ಬುಧವಾರ ರಾತ್ರಿ ಕಿನಕಹಳ್ಳಿ ಮತ್ತು ಕಟ್ಟಣವಾಡಿಯಲ್ಲಿ ೨ ಎಮ್ಮೆಗಳು, ೧೧ ಕುರಿಗಳು ಕಳುವಾಗಿರುವುದು ಆತಂಕಕಾರಿ ಬೆಳವಣಿಗೆ.

Conclusion:ಕಳೆದ ವರ್ಷ ಚಾಮರಾಜನಗರ ಸುತ್ತಮುತ್ತ ಕುರಿಗಳ್ಳರ ಹಾವಳಿ ಮಿತಿಮೀರಿತ್ತು. ಬಳಿಕ, ಮೂವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ ಬಳಿಕ ತಹಬದಿಗೆ ಬಂದಿತ್ತು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.