ಕೊಳ್ಳೇಗಾಲ: ಗೆಳೆಯರೊಡನೆ ಕಬ್ಬುತಿನ್ನಲು ಹೋದ ಬಾಲಕನೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಕುಣಗಳ್ಳಿ ಗ್ರಾಮದಲ್ಲಿ ನಡೆದಿದೆ.
ಕುಣಗಳ್ಳಿ ಗ್ರಾಮದ ನಿವಾಸಿ ಮಹದೇವಶೆಟ್ಟಿ ಎಂಬುವರ ಮಗ ವಿಜಯ್ ಶಿವಕುಮಾರ್ ಶೆಟ್ಟಿ( 8) ಮೃತ್ತ ದುರ್ದೈವಿ. ಈತ ಗುರುವಾರ ತನ್ನ ಇಬ್ಬರು ಗೆಳಯರೊಂದಿಗೆ ಸುರಪುರದ ಹುಚ್ಚೇಗೌಡನ ಕೆರೆಗೆ ಆಟವಾಡಲು ತೆರೆಳಿದ್ದಾರೆ. ಕೆರೆಯಲ್ಲಿ ಆಟವಾಡಿದ ನಂತರ ಸಮೀಪದ ಜಮೀನಲ್ಲಿ ಗೆಳೆಯರೆಲ್ಲರೂ ಸೇರಿ ಕಬ್ಬು ತಿಂದು ಕಾಲಕಳೆದಿದ್ದಾರೆ. ಇದೇ ವೇಳೆ, ವಿಜಯ್ ತನಗೆ ಕಬ್ಬು ಸಾಲಲಿಲ್ಲ ಎಂದು ಮತ್ತೆ ತರುವುದಾಗಿ ಹೊರಟವನು ಹಿಂದಿರುಗಿ ಬಂದೇ ಇಲ್ಲ.
ಸಂಜೆಯಾದರೂ ಮಗ ಮನಗೆ ಬಾರದೇ ಇದ್ದಾಗ ತಂದೆ ಮಹದೇವ ಶೆಟ್ಟಿ ಗ್ರಾಮದ ಸುತ್ತ ಹಾಗೂ ಕೆರೆಯ ಸಮೀಪ ಹುಡುಕಾಟ ನಡೆಸಿದ್ದಾರೆ, ಆಗಲೂ ವಿಜಯ್ ಪತ್ತೆಯಾಗಿಲ್ಲ. ಆದ್ರೆ ಶುಕ್ರವಾರ ಮುಂಜಾನೆ ವಿಜಯ್ ಮೃತ ದೇಹ ಕೆರೆಯ ಸಮೀಪ ಇರುವುದಾಗಿ ತಿಳಿದು ಬಂದಿದ್ದು ಗ್ರಾಮಸ್ಥರು ತೆರಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಅಪಘಾತ ಶಂಕೆ: ಮೃತ ಬಾಲಕನ ದೇಹದ ತೊಡೆ, ಬೆನ್ನು ಭಾಗಕ್ಕೆ ತೀವ್ರ ಪೆಟ್ಟಾಗಿರುವುದು ಕಂಡು ಬಂದಿದ್ದು, ಮೂಗಿನಲ್ಲಿ ರಕ್ತ ಬಂದಿದೆ. ಮೇಲ್ನೋಟಕ್ಕೆ ಮೃತ ಬಾಲಕ ವಿಜಯ್ ಶಿವಕುಮಾರ್ ಶೆಟ್ಟಿಗೆ ಅಫಘಾತ ಸಂಭವಿಸಿರಬಹುದೆಂದು ಊಹಿಸಲಾಗಿದೆ. ಅಪಘಾತ ಮಾಡಿರುವವರು ತಪ್ಪಿಸಿಕೊಳ್ಳಲು ಕೆರೆಯ ಹತ್ತಿರ ದೇಹವನ್ನು ಬಿಟ್ಟು ಹೋಗಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು. ಗ್ರಾಮಾಂತರ ಸಬ್ ಇನ್ಸ್ಪೆಕ್ಟರ್ ಅಶೋಕ್ ನೇತೃತ್ವದ ತಂಡ ಕುಣಗಳ್ಳಿ ಗ್ರಾಮಕ್ಕೆ ತೆರಳಿ ತನಿಖೆ ಚುರುಕುಗೊಳಿಸಿದ್ದಾರೆ.