ETV Bharat / state

ಗುರು ಮರೆಯದ ಶಿಕ್ಷಕ... ಪ್ರತಿವರ್ಷ ಕಲಿಸಿದವರ ಕಾಲಿಗೆ ಬೀಳ್ತಾರೆ ಈ ಪಿಟಿ ಟೀಚರ್ !

ಚಾಮರಾಜನಗರ, ಕೊಳ್ಳೇಗಾಲ, ನಂಜನಗೂಡು, ಬೆಂಗಳೂರು ಹೀಗೆ ತಮಗೆ ಶಿಕ್ಷಣ ನೀಡಿದ ಎಲ್ಲಾ ಶಿಕ್ಷಕರ ಮನೆಗೆ ತೆರಳಿ ಆಶೀರ್ವಾದ ಪಡೆದು ಬರುತ್ತಿದ್ದಾರೆ‌.

ಗುರು ಮರೆಯದ ಶಿಕ್ಷಕ
author img

By

Published : Sep 9, 2019, 5:53 PM IST

ಚಾಮರಾಜನಗರ:‌‌‌ ಸೆ.5 ಬಂದರೆ ಮಾತ್ರ ಶಿಕ್ಷಕರನ್ನು ನೆನೆಯುವುದು ಸಾಮಾನ್ಯ. ಆದರೆ, ಸೆಪ್ಟೆಂಬರ್ ತಿಂಗಳು ಪೂರ್ತಿ ಅಕ್ಷರ ಕಲಿಸಿದ ಗುರುಗಳನ್ನು ವಿಶೇಷವಾಗಿ ನೆನೆಯುತ್ತಿದ್ದಾರೆ ಈ ಶಿಕ್ಷಕ.

ಹೌದು, ಚಾಮರಾಜನಗರ ತಾಲೂಕಿನ‌ ಸಿದ್ದಯ್ಯನಪುರ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ನಾರಾಯಣ ಎಂಬುವರು ಸೆಪ್ಟೆಂಬರ್ ತಿಂಗಳಿನಲ್ಲಿ ತನ್ನೆಲ್ಲಾ ಶಿಕ್ಷಕರ ಮನೆಗೆ ತೆರಳಿ ಅವರನ್ನು ಸನ್ಮಾನಿಸಿ, ಆಶೀರ್ವಾದ ಪಡೆಯುವುದನ್ನು ಹಲವು ವರ್ಷಗಳಿಂದ ರೂಢಿಸಿಕೊಂಡು ಬಂದಿದ್ದಾರೆ.

ಚಾಮರಾಜನಗರ, ಕೊಳ್ಳೇಗಾಲ, ನಂಜನಗೂಡು, ಬೆಂಗಳೂರು ಹೀಗೆ ತಮಗೆ ಶಿಕ್ಷಣ ನೀಡಿದ ಎಲ್ಲಾ ಶಿಕ್ಷಕರ ಮನೆಗೆ ತೆರಳಿ ಆಶೀರ್ವಾದ ಪಡೆದು ಬರುತ್ತಿದ್ದಾರೆ‌. ಈ ಹಿಂದೆ ದೈಹಿಕ ಶಿಕ್ಷಣ ಶಿಕ್ಷಕರಾಗಿ ಈಗ ಪೊಲೀಸ್ ಇಲಾಖೆಯಲ್ಲಿರುವ ಉಮ್ಮತ್ತೂರು ಕುಮಾರ್, ನಾರಾಯಣ ಅವರ ಬಗ್ಗೆ ಮಾತನಾಡಿ, ಅವರ ಈ ಒಳ್ಳೆಯ ಗುಣವೇ ಅವರನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸಲಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಗುರು ಮರೆಯದ ಶಿಕ್ಷಕ

ಶಿಕ್ಷಕ ನಾರಾಯಣ ಈಟಿವಿ ಭಾರತದೊಂದಿಗೆ ಮಾತನಾಡಿ, ಶಿಕ್ಷಣ ನೀಡಿದ ಗುರುಗಳೇ ಕಣ್ಣಿಗೆ ಕಾಣುವ ದೇವರು. ಆದ್ದರಿಂದ,‌ 3 ವರ್ಷಗಳಿಂದ ನನ್ನೆಲ್ಲಾ ಗುರುಗಳ ಮನೆಗೆ ತೆರಳಿ ಆಶೀರ್ವಾದ ಪಡೆಯುತ್ತಿದ್ದೇನೆ ಎಂದರು.

ಫೇಸ್ಬುಕ್ ಬಳಸಿಕೊಂಡು ತಮ್ಮ ಶಾಲೆಯನ್ನು ಖಾಸಗಿ ಶಾಲೆಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಅಭಿವೃದ್ಧಿ ಪಡಿಸಿರುವ ನಾರಾಯಣ ಅವರಿಗೆ ಈ ಬಾರಿಯ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯೂ ಸಂದಿದೆ.

Intro:ಅಕ್ಷರ ಕಲಿಸಿದ ಗುರುಗಳಿಂದ ಪ್ರತಿವರ್ಷ ಆಶೀರ್ವಾದ ಪಡೆವ ಶಿಕ್ಷಕ

ಚಾಮರಾಜನಗರ:‌‌‌ ಸೆ.೫ ಬಂದರೆ ಮಾತ್ರ ಶಿಕ್ಷಕರನ್ನು ನೆನೆಯುವುದು ಸಾಮಾನ್ಯ. ಆದರೆ, ಸೆಪ್ಟೆಂಬರ್ ತಿಂಗಳು ಪೂರಾ ಅಕ್ಷರ ಕಲಿಸಿದ ಗುರುಗಳನ್ನು ವಿಶೇಷವಾಗಿ ನೆನೆಯುತ್ತಿದ್ದಾರೆ ಈ ಶಿಕ್ಷಕ.

Body:ಹೌದು, ಚಾಮರಾಜನಗರ ತಾಲೂಕಿನ‌ ಸಿದ್ದಯ್ಯನಪುರ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ನಾರಾಯಣ ಎಂಬವರು ಸೆಪ್ಟೆಂಬರ್ ತಿಂಗಳಿನಲ್ಲಿ ತನ್ನೆಲ್ಲಾ ಶಿಕ್ಷಕರ ಮನೆಗೆ ತೆರಳಿ ಅವರನ್ನು ಸನ್ಮಾನಿಸಿ ಆಶೀರ್ವಾದ ಪಡೆಯುವುದನ್ನು ಹಲವು ವರ್ಷಗಳಿಂದ ರೂಢಿಸಿಕೊಂಡು ಬಂದಿದ್ದಾರೆ.

ಚಾಮರಾಜನಗರ, ಕೊಳ್ಳೇಗಾಲ, ನಂಜನಗೂಡು, ಬೆಂಗಳೂರು ಹೀಗೆ ತಮಗೆ ಶಿಕ್ಷಣ ನೀಡಿದ ಎಲ್ಲಾ ಶಿಕ್ಷಕರ ಮನೆಗೆ ತೆರಳಿ ಆಶೀರ್ವಾದ ಪಡೆದು ಬರುತ್ತಿದ್ದಾರೆ‌.

ಈ ಹಿಂದೆ ದೈಹಿಕ ಶಿಕ್ಷಣ ಶಿಕ್ಷಕರಾಗಿ ಈಗ ಪೊಲೀಸ್ ಇಲಾಖೆಯಲ್ಲಿರುವ ಉಮ್ಮತ್ತೂರು ಕುಮಾರ್ ಈಟಿವಿ ಭಾರತದೊಂದಿಗೆ ಮಾತನಾಡಿ, ಶಿಕ್ಷಣ ಪಡೆದ ಬಳಿಕ ಪಾಠ ಹೇಳಿಕೊಟ್ಟ ಗುರುಗಳನ್ನು ಮರೆಯುವವರೇ ಹೆಚ್ಚು. ವರ್ಷಾನುಗಟ್ಟಲೆ ಆದರೂ ಶಿಕ್ಷಕರನ್ನು
ಮರೆಯದೇ ಬಂದು ಅಭಿನಂದಿಸಿ ಆಶೀರ್ವಾದ ಪಡೆಯುವುದು ವಿರಳ. ನಾರಾಯಣ ಅವರ ಈ ಒಳ್ಳೇಯ ಗುಣವೇ ಅವರನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸಲಿದೆ ಎಂದು ಸಂತಸ ವ್ಯಕ್ತಪಡಿಸಿದರು.

Bite- ಉಮ್ಮತ್ತೂರು ಕುಮಾರ್, ನಾರಾಯಣರ ಶಿಕ್ಷಕ[[[ ಇಬ್ಬರು ಇರುವವರು]]]]

ಗುರುಗಳ ಮನೆಗೆ ತೆರಳಿ ಆಶೀರ್ವಾದ ಪಡೆವ ಶಿಕ್ಷಕ ನಾರಾಯಣ ಈಟಿವಿ ಭಾರತದೊಂದಿಗೆ ಮಾತನಾಡಿ, ಶಿಕ್ಷಣ ನೀಡಿದ ಗುರುಗಳೇ ಕಣ್ಣಿಗೆ ಕಾಣುವ ದೇವರು. ಆದ್ದರಿಂದ,‌ ೩ ವರ್ಷಗಳಿಂದ ನನ್ನೆಲ್ಲಾ ಗುರುಗಳ ಮನೆಗೆ ತೆರಳಿ ಆಶೀರ್ವಾದ ಪಡೆಯುತ್ತಿದ್ಧೇನೆ ಎಂದರು.

Bite- ನಾರಾಯಣ, ಆಶೀರ್ವಾದ ಪಡೆವ ಶಿಕ್ಷಕ

ಫೇಸ್ಬುಕ್ ಬಳಸಿಕೊಂಡು ಶಾಲೆಯನ್ನು ಕಾನ್ಬೆಂಟ್ ಗೆ ಸಡ್ಡು ಹೊಡೆಯುವ ರೀತಿಯಲ್ಲಿ ಶಾಲೆ ಅಭಿವೃದ್ಧಿ ಪಡಿಸಿರುವ ನಾರಾಯಣ ಅವರಿಗೆ ಈ ಬಾರಿಯ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯೂ ಸಂದಿದೆ.

Conclusion:ಒಟ್ಟಿನಲ್ಲಿ ಶಿಕ್ಷಕನ ಈ ಕಾರ್ಯ ಕೇವಲ ಶಿಕ್ಷಕರಿಗಷ್ಟೆ ಅಲ್ಲದೇ ಎಲ್ಲರಿಗೂ ಮಾದರಿಯಾಗಿದೆ.‌ ಬದುಕು ನೀಡಿದ ಶಿಕ್ಷಕರಿಗೆ ಅಕ್ಕರೆಯ ನಮನ ಸಲ್ಲಿಸುವುದು ಎಲ್ಲರ ಜವಾಬ್ದಾರಿಯಾಗಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.