ETV Bharat / state

ಮುಖ್ಯ ಶಿಕ್ಷಕರಿಂದಲೇ ಶಾಲೆಯ ಶೌಚಾಲಯ ಸ್ವಚ್ಛತೆ.. ಮಕ್ಕಳಿಗೆ ಶುಚಿ ಪಾಠ - School head teacher cleans toilets

ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಹೊಂಗಹಳ್ಳಿ ಶಾಲೆಯ ಮುಖ್ಯ ಶಿಕ್ಷಕರೊಬ್ಬರು ಮಕ್ಕಳಿಗೆ ಸ್ವಚ್ಛತೆಯ ಪಾಠ ಮಾಡಲು ಅವರೇ ವಾರಕ್ಕೊಮ್ಮೆ ಶಾಲಾ ಶೌಚಾಲಯವನ್ನು ಸ್ವಚ್ಛಗೊಳಿಸುತ್ತ ಬಂದಿದ್ದಾರೆ.

Clean lesson for children
ಮಕ್ಕಳಿಗೆ ಶುಚಿ ಪಾಠ
author img

By ETV Bharat Karnataka Team

Published : Dec 24, 2023, 1:12 PM IST

ಚಾಮರಾಜನಗರ: ಕೋಲಾರದಲ್ಲಿ ಇತ್ತೀಚೆಗೆ ಶಾಲಾ ವಿದ್ಯಾರ್ಥಿಗಳನ್ನು ಮಲದ ಗುಂಡಿಗೆ ಇಳಿಸಿ ಸ್ವಚ್ಛಗೊಳಿಸಿದಂತಹ ಘಟನೆ ನಡುವೆ ಕಳೆದ 13 ವರ್ಷಗಳಿಂದ ಶಾಲೆಯ ಶೌಚಾಲಯವನ್ನು ಮುಖ್ಯ ಶಿಕ್ಷಕರೊಬ್ಬರು ಶುಚಿ ಮಾಡುವ ಅಪರೂಪದ, ಮಾದರಿ ಕಾರ್ಯ ಗಡಿಜಿಲ್ಲೆಯ ಶಾಲೆಯಲ್ಲಿದೆ.

ಹೌದು, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹೊಂಗಹಳ್ಳಿ ಶಾಲೆಯ ಮುಖ್ಯ ಶಿಕ್ಷಕ ಮಹಾದೇಶ್ವರಸ್ವಾಮಿ ಎಂಬವರು ಶಾಲ ಶೌಚಾಲಯವನ್ನು ಸ್ವತಃ ಶುಚಿ ಮಾಡಿ ವಿದ್ಯಾರ್ಥಿಗಳಿಗೆ ಸ್ವಚ್ಛತೆ ಪಾಠ ಮಾಡುತ್ತಿದ್ದಾರೆ. ಮಹಾತ್ಮಾ ಗಾಂಧಿ, ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಂಡಿರುವ ಮಹಾದೇಶ್ವರಸ್ವಾಮಿ ಸ್ವಚ್ಛತೆಯೇ ದೈವತ್ವ ಎಂದು ನಂಬಿದವರು. ಶೌಚಾಲಯಗಳನ್ನು ನಾವೇ ಶುಚಿ ಮಾಡಿದರೆ, ವಿದ್ಯಾರ್ಥಿಗಳು ಅದನ್ನು ಕಲಿತುಕೊಂಡು ಮನೆಯಲ್ಲಿ ಪಾಲನೆ ಮಾಡುತ್ತಾರೆ ಎಂದು ಶಿಕ್ಷಕ ಶೌಚಾಲಯಗಳನ್ನು ಕ್ಲೀನ್ ಮಾಡುತ್ತಾರೆ.

Clean lesson
ಶಾಲಾ ಮುಖ್ಯ ಶಿಕ್ಷಕನಿಂದ ಮಕ್ಕಳಿಗೆ ಶುಚಿ ಪಾಠ

ಶಾಲೆಯಲ್ಲಿ ಬಾಲಕಿಯರಿಗೆ ಎರಡು, ಬಾಲಕರಿಗೆ ಎರಡು ಹಾಗೂ ಶಿಕ್ಷಕರಿಗೆ 1 ಶೌಚಾಲಯವಿದೆ. 5 ಶೌಚಾಲಯಗಳನ್ನು ವಾರಕ್ಕೊಮ್ಮೆ ವಿದ್ಯಾರ್ಥಿಗಳನ್ನು ಕರೆದು ಅವರ ಮುಂದೆ ತಾವೇ ಶುಚಿಗೊಳಿಸುತ್ತಾರೆ. ತಮ್ಮ ಹಣದಲ್ಲಿ ಫೆನಾಯಿಲ್, ಸೋಪ್ ತಂದಿಡುವ ಮಹಾದೇಶ್ವರಸ್ವಾಮಿ ಶಾಲೆಯ ಪ್ರತಿ ತರಗತಿಯಲ್ಲಿ ಕನ್ನಡಿ, ಬಾಚಣಿಗೆ, ಪೌಡರ್, ವಿಭೂತಿ, ಕುಂಕುಮ ತಂದಿಟ್ಟಿದ್ದಾರೆ.

ಕಳೆದ 2010 ರಲ್ಲಿ ಗಾಂಧಿ ಜಯಂತಿ ದಿನದಿಂದ ನಾನು ಈ ಕಾರ್ಯ ಆರಂಭ ಮಾಡಿದ್ದು, ಅಂದಿನಿಂದಲೂ ಇದನ್ನು ಮುಂದುವರೆಸಿಕೊಂಡು ಬಂದಿದ್ದೇನೆ. ಶಿಕ್ಷಕರನ್ನು ನೋಡಿಯೇ ಮಕ್ಕಳು ಕಲಿಯಲಿದ್ದು, ನಾವೇ ಕ್ಲೀನ್ ಮಾಡಿದಾಗ ಮಕ್ಕಳಿಗೂ ಕೂಡ ಶುಚಿ ಪ್ರಜ್ಞೆ ಮೂಡಲಿದೆ. ಮನೆಯಲ್ಲೂ ಮುಂದೆ ಅವರ ಜೀವನದಲ್ಲೂ ಅದನ್ನು ಪಾಲನೆ ಮಾಡುತ್ತಾರೆ ಎನ್ನುತ್ತಾರೆ ಮಹಾದೇಶ್ವರಸ್ವಾಮಿ.

ಶಾಲೆಯಲ್ಲಿದೆ ಅಕ್ಷರ ಜೋಳಿಗೆ ಕಾರ್ಯಕ್ರಮ: ಹೊಂಗಹಳ್ಳಿ ಶಾಲೆಯಲ್ಲಿ ಅಕ್ಷರ ಜೋಳಿಗೆ ಎಂಬ ಕಾರ್ಯಕ್ರಮ ಆರಂಭ ಮಾಡಲಾಗಿದ್ದು, ವಿದ್ಯಾರ್ಥಿಗಳು, ಪಾಲಕರು, ಸಾರ್ವಜನಿಕರು ತಾವು ಬೆಳೆದ ಹಣ್ಣು, ತರಕಾರಿಗಳನ್ನು ತಂದು ಕೊಡಬಹುದಾಗಿದೆ. ಜೊತೆಗೆ, ಹುಟ್ಟುಹಬ್ಬ ಸೇರಿದಂತೆ ವಿಶೇಷ ದಿನಗಳನ್ನು ಮಧ್ಯಾಹ್ನದ ಬಿಸಿಯೂಟಕ್ಕೆ ವಿಶೇಷ ಆಹಾರ ಒದಗಿಸುವ ಮೂಲಕ ಆಚರಿಸಬಹುದಾಗಿದೆ. ಶಾಲೆಯ ಮಧ್ಯಾಹ್ನದ ಬಿಸಿಯೂಟದ ಮೆನುವಿನಲ್ಲಿ ಮುದ್ದೆ, ಪಲ್ಯ, ಮಜ್ಜಿಗೆ ಹಾಗೂ ಪಾಯಸ ಇರುವುದು ವಿಶೇಷವಾಗಿದೆ.

ಇದನ್ನೂ ಓದಿ: ಮಕ್ಕಳಿಂದ ಶೌಚಾಲಯ ಸ್ವಚ್ಛತೆ: ಸರ್ಕಾರದ ನಿರ್ಲಕ್ಷ್ಯವೇ ಇದಕ್ಕೆಲ್ಲ ಕಾರಣ ಎಂದ ಆರ್​.ಅಶೋಕ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.