ETV Bharat / state

ಪ್ರತಿ ಟ್ರಿಪ್ಪಿಗೂ ಬಸ್ ಗಳಿಗೆ ಸ್ಯಾನಿಟೈಸರ್​ ಸ್ಪ್ರೇ... ಚೆಕ್ ಪೋಸ್ಟ್ ಗಳಲ್ಲೂ ಡೆಟಾಲ್ ಸಿಂಪಡಣೆ! - Corona preventive action

ಚಾಮರಾಜನಗರ ಹಾಗೂ ಗ್ರಾಮಾಂತರ ಪ್ರದೇಶಗಳಿಗೆ ಓಡಾಡುವ ಬಸ್​​ಗಳನ್ನು ಪ್ರತೀ ಟ್ರಿಪ್​​ಗೂ ಸ್ಯಾನಿಟೈಸರ್​ ಸ್ಪ್ರೇ ಮಾಡಿ ಕ್ಲೀನ್​ ಮಾಡಲಾಗುತ್ತಿದೆ. ಈ ಮೂಲಕ ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

Sanitation to bus after every trip,,,, Dettol spray in check posts
ಪ್ರತಿ ಟ್ರಿಪ್ಪಿಗೂ ಬಸ್ ಗಳಿಗೆ ಸ್ಯಾನಿಟೇಷನ್... ಚೆಕ್ ಪೋಸ್ಟ್ ಗಳಲ್ಲೂ ಡೆಟಾಲ್ ಸಿಂಪಡಣೆ!
author img

By

Published : Mar 19, 2020, 2:30 PM IST

ಚಾಮರಾಜನಗರ: ಸಾರಿಗೆ ಸಂಸ್ಥೆ ಬಸ್ ಗಳಲ್ಲಿ ನಿತ್ಯ ಸಾವಿರಾರು ಮಂದಿ ಓಡಾಡುವುದರಿಂದ ಕೊರೊನಾ ಸೋಂಕು ತಡೆಯಲು ಪ್ರತಿ ಟ್ರಿಪ್ಪಿಗ್ಗೂ ಬಸ್ ಗಳಿಗೆ ಸ್ಯಾನಿಟೈಸ್​ ಮಾಡಲಾಗುತ್ತಿದೆ.

ಪ್ರತಿ ಟ್ರಿಪ್ಪಿಗೂ ಬಸ್ ಗಳಿಗೆ ಸ್ಯಾನಿಟೈಸರ್​ ಸ್ಪ್ರೇ... ಚೆಕ್ ಪೋಸ್ಟ್ ಗಳಲ್ಲೂ ಡೆಟಾಲ್ ಸಿಂಪಡಣೆ!

ನಗರ ಬಸ್ ನಿಲ್ದಾಣಕ್ಕೆ ಬರುವ ಬಸ್ ಗಳಿಗೆ ಹಾಗೂ ಗ್ರಾಮಾಂತರ ಪ್ರದೇಶಗಳಿಗೆ ತೆರಳುವ ಬಸ್ ಗಳಿಗೂ 4-5 ಮಂದಿ ಸಿಬ್ಬಂದಿ ಸ್ಯಾನಿಟೈಸರ್​ ಸ್ಪ್ರೆ ಮಾಡುತ್ತಿದ್ದಾರೆ‌. ಪ್ರಯಾಣಿಕರು ಕುಳಿತುಕೊಳ್ಳುವ ಸೀಟುಗಳು, ಬಸ್​ ಆಸನಗಳ ಬಳಿ ಕೈ ಊರುವ ಸ್ಥಳಗಳು, ಬಾಗಿಲು, ಕಿಟಕಿಗಳಿಗೆ ಸ್ಪ್ರೇ ಮಾಡುವ ಮೂಲಕ ಸೋಂಕಿದ್ದರೂ ಮತ್ತೊಬ್ಬರಿಗೆ ಹರಡದಂತೆ ಕಟ್ಟೆಚ್ಚರ ವಹಿಸಲಾಗುತ್ತಿದೆ.

ಇನ್ನು, ತಮಿಳುನಾಡು ಹಾಗೂ ಕೇರಳ ಗಡಿಗಳಲ್ಲಿ ಅಲ್ಲಿನ ಆರೋಗ್ಯ ಇಲಾಖೆ ಸಿಬ್ಬಂದಿ ಎಲ್ಲಾ ಬಸ್ ಗಳಿಗೂ ಡೆಟಾಲ್ ಸಿಂಪಡಿಸಿ ತಮ್ಮ ಗಡಿಯೊಳಗೆ ಬಿಟ್ಟುಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ. ಚಾಮರಾಜನಗರ ಜಿಲ್ಲೆಯು ತಮಿಳುನಾಡು ಹಾಗೂ ಕೇರಳ ಗಡಿಗಳನ್ನು ಹಂಚಿಕೊಂಡಿರುವುದರಿಂದ ಸಾಕಷ್ಟು ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.