ಚಾಮರಾಜನಗರ: ಗಡಿಯಲ್ಲಿ ಕ್ಯಾತೆ ತೆಗೆದು ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿರುವ ಚೀನಾ ನಡೆ ವಿರೋಧಿಸಿ ನಗರದಲ್ಲಿ ಕರ್ನಾಟಕ ಸೇನಾಪಡೆ ವತಿಯಿಂದ ಚೀನಾ ನಿರ್ಮಿತ ಮೊಬೈಲ್ಗಳನ್ನು ಪುಡಿಗಟ್ಟಿ ಪ್ರತಿಭಟಿಸಲಾಯಿತು.
ಚಾಮರಾಜೇಶ್ವರನ ದೇಗುಲದಿಂದ ಭುವನೇಶ್ವರಿ ವೃತ್ತದವರೆಗೆ ಚೀನಾ ಅಧ್ಯಕ್ಷರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ, ಚೀನಾ ನಿರ್ಮಿತ ವಸ್ತುಗಳನ್ನಿಟ್ಟು ಪ್ರತಿಭಟನಾ ಮೆರೆವಣಿಗೆ ನಡೆಸಿ ಧಿಕ್ಕಾರ ಕೂಗಿದರು.
ಚೀನಾ ಮೊಬೈಲ್, ಬ್ಯಾಟರಿ ಇನ್ನಿತರೆ ವಸ್ತುಗಳನ್ನು ನಾಶಪಡಿಸಿ ಜಿನ್ಪಿಂಗ್ ಭಾವಚಿತ್ರವನ್ನು ಸುಟ್ಟರು. ಇದೇ ರೀತಿ ಗಡಿಯಲ್ಲಿ ಕ್ಯಾತೆ ತೆಗೆಯುತ್ತಿದ್ದರೆ ಇದಕ್ಕೆ ತಕ್ಕ ಪ್ರತ್ಯುತ್ತರವನ್ನು ಭಾರತೀಯ ಸೇನೆ ನೀಡಲಿದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಮೌನಾಚರಣೆ:
ಬೇಗೂರಿನಲ್ಲಿ ಅಖಿಲ ಭಾರತ ಕರುನಾಡು ಯುವಸೇನೆಯಿಂದ ಚೀನಾ ಸಂಘರ್ಷದಲ್ಲಿ ಮಡಿದ ಯೋಧರಿಗೆ ಮೂರು ನಿಮಿಷಗಳ ಕಾಲ ಶ್ರದ್ಧಾಂಜಲಿ ಸಲ್ಲಿಸಲಾಯಿತು.