ಚಾಮರಾಜನಗರ: ದೇವಾಲಯಕ್ಕೆ ಹೋದಾಗ ಮುಡಿ ಕೊಟ್ಟು ಬರುವುದು ಸಾಮಾನ್ಯ. ಆದರೆ, ನೀವೇನಾದರೂ ಮುಡಿ ತೆಗೆಸಿ ಬಂದಿದ್ದೇ ಆದರೆ ಮಾದಪ್ಪನ ದರ್ಶನ ಸಿಗುವುದಿಲ್ಲ. ಹೌದು, ಇಂದು ನಿಯಮವೊಂದನ್ನು ಮಲೆಮಹದೇಶ್ವರ ಬೆಟ್ಟ ಪ್ರಾಧಿಕಾರ ಜಾರಿಗೊಳಿಸಿದ್ದು, ಮುಡಿ ತೆಗೆಸಿಕೊಂಡು ಬರುವ ಭಕ್ತಾದಿಗಳಿಗೆ ದೇವಾಲಯ ಒಳಾವರಣ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಲಾಗಿದ್ದು, ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ.
ಕೊರೊನಾ ಮುನ್ನೆಚ್ಚರಿಕೆ ಕ್ರಮವಾಗಿ ಮುಡಿ ಸೇವೆಯನ್ನು ಪ್ರಾಧಿಕಾರ ನಿರ್ಬಂಧಿಸಿದ್ದರೂ ಭಕ್ತಾಧಿಗಳು ಹೊರಗಿನಿಂದ ಮುಡಿ ತೆಗೆಸಿಕೊಂಡು ಬರುತ್ತಿರುವುದು ಜೊತೆಗೆ ಬೆಟ್ಟದಲ್ಲೇ ಕೆಲವರು ನೂರಾರು ಹಣ ಪೀಕಿ ಮುಡಿ ತೆಗೆಯುವುದನ್ನು ತಡೆಯಲು ಈ ಕ್ರಮವನ್ನು ಪ್ರಾಧಿಕಾರ ತೆಗೆದು ಕೊಂಡಿದೆ.