ETV Bharat / state

ಸ್ಥಳೀಯ ಜ್ಞಾನ ಮತ್ತು ಅನುಭವ ಬಳಸಿ ಕಾರ್ಯನಿರ್ವಹಿಸಿದಾಗ ಮಾತ್ರ ಪರಿಹಾರ ಸಾಧ್ಯ - journalist nagesh hegade news

ಪ್ರಾಣಿಗಳನ್ನು, ಪಕ್ಷಿಗಳನ್ನು, ಅರಣ್ಯವನ್ನು ವಿವಿಧ ಕಾರಣ ನೀಡಿ ನಾಶ ಮಾಡಲಾಗುತ್ತಿದೆ. ಸೀಮಿತ ಸಂಖ್ಯೆಯಲ್ಲಿ ಪಕ್ಷಿಗಳು ಇದ್ದಾಗ ಮಾತ್ರ ವಂಶೋದ್ಧಾರ ಮಾಡುತ್ತವೆ. ಸಾಕಷ್ಟು ಬಹುರಾಷ್ಟ್ರೀಯ ಕಂಪನಿಗಳು ವಿವಿಧ ಕಾಮಗಾರಿಗಳಿಂದ ಆರಂಭಿಸಿದ್ದು, ಪರಿಸರ ನಾಶ ಹೆಚ್ಚಾಗಿದೆ.

nagesh hegade
nagesh hegade
author img

By

Published : Dec 16, 2020, 7:27 PM IST

Updated : Oct 28, 2022, 1:15 PM IST

ಚಾಮರಾಜನಗರ : ಮಾಧ್ಯಮಗಳು ಎಲ್ಲಾ ವಿಧದ ವ್ಯಕ್ತಿಗಳನ್ನು, ಸಂದರ್ಭವನ್ನು ಅರಿಯುವ ಕಾರ್ಯ ಮಾಡಬೇಕು. ಬರವಣಿಗೆ ಅತ್ಯಂತ ಸೂಕ್ಷ್ಮವಾಗಿರಬೇಕು ಎಂದು ಹಿರಿಯ ಪತ್ರಕರ್ತ ಹಾಗೂ ಅಂಕಣಕಾರ ನಾಗೇಶ್ ಹೆಗಡೆ ಅಭಿಪ್ರಾಯಪಟ್ಟಿದ್ದಾರೆ.

ಚಾಮರಾಜನಗರದ ಕೆ ಗುಡಿಯಲ್ಲಿ ನಡೆದ ಬಿಆರ್​ಟಿ ವನ್ಯಜೀವಿ ಸಂರಕ್ಷಿತ ಪ್ರದೇಶದಲ್ಲಿ ವನ್ಯಜೀವಿ ಕುರಿತ ರಾಜ್ಯಮಟ್ಟದ ಮಾಧ್ಯಮ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಮಾಜದ ಮೇಲೆ ಪ್ರಭಾವ ಬೀರುವ ವಿಚಾರವನ್ನು ಹುಡುಕಿ, ಆವಿಷ್ಕರಿಸುವ ಕಾರ್ಯ ಮಾಡಬೇಕು ಎಂದರು.

ನಾನು ಸಹ ಒಂದು ಎನ್​ಜಿಒ ಜತೆ ಸೇರಿ ಹಾಡಿಗಳನ್ನು ಸುತ್ತಿ, ಮಕ್ಕಳ ಚಟುವಟಿಕೆ ಗಮನಿಸಿ ಒಂದು ಪಠ್ಯ ಸಿದ್ಧಪಡಿಸಿದ್ದೆವು. ಇಂಗ್ಲಿಷ್ ಮಾಧ್ಯಮ ಬಂದು ಕನ್ನಡವೇ ಅರ್ಥವಾಗದ ಹಾಡಿ ಜನರಿಗೆ ಇಂಗ್ಲಿಷ್ ಹೇಗೆ ಅರ್ಥವಾಗುತ್ತದೆ? ಸ್ಥಳೀಯವಾಗಿ ಇರುವ ಜ್ಞಾನ, ಅನುಭವವನ್ನು ಬಳಸಿಕೊಂಡು ಕಾರ್ಯನಿರ್ವಹಿಸಿದಾಗ ಮಾತ್ರ ಸ್ಥಳೀಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಇದರತ್ತ ಮಾಧ್ಯಮಗಳೂ ಗಮನ ಹರಿಸಬೇಕು ಎಂದು ಸಲಹೆ ನೀಡಿದರು. ತಂತ್ರಜ್ಞಾನದ ಬಳಕೆ ಈ ದಿನಗಳಲ್ಲಿ ಹೆಚ್ಚಾಗಿ ನಡೆಯುತ್ತಿದೆ. ಪ್ರಾಣಿ, ಪಕ್ಷಿ ಹಾಗೂ ಅರಣ್ಯ ಜೀವಿಗಳ ಮಾಹಿತಿ ಸಂಗ್ರಹಕ್ಕೆ ಸಹಕಾರಿಯಾಗುವ ಸಾಕಷ್ಟು ತಂತ್ರಜ್ಞಾನ ಲಭ್ಯತೆ ಇದೆ. ಆದರೆ, ಇದು ದುಬಾರಿ ಸವಲತ್ತಾಗಿದ್ದು, ಅರಣ್ಯ ಇಲಾಖೆಗೆ ಇದು ಸಿಗುವ ಸಾಧ್ಯತೆ ಬಹಳ ಕಡಿಮೆ ಎಂದು ಹೇಳಿದರು.

ಶೇ.75ರಷ್ಟು ಬಯೋ ಡೈವರ್ಸಿಟಿ ಕಳೆದ 30 ವರ್ಷದಲ್ಲಿ ನಾಶವಾಗಿದೆ. ದೊಡ್ಡ ಮಟ್ಟದಲ್ಲಿ ಅರಣ್ಯ ನಾಶ ಆಗುತ್ತಿದೆ. ನಿರ್ಮಾಣ ಪ್ರಮಾಣ ಹೆಚ್ಚಾಗುತ್ತಿದೆ. ಜಾಗತಿಕ ತಾಪಮಾನ ಹೆಚ್ಚಾಗುತ್ತಿದೆ. ಇದೆಲ್ಲವನ್ನೂ ಜನರೇ ಮಾಡಿಕೊಂಡ ಬದಲಾವಣೆಯಿಂದ ಆಗಿದೆ.

ಪ್ರಾಣಿಗಳನ್ನು, ಪಕ್ಷಿಗಳನ್ನು, ಅರಣ್ಯವನ್ನು ವಿವಿಧ ಕಾರಣ ನೀಡಿ ನಾಶ ಮಾಡಲಾಗುತ್ತಿದೆ. ಸೀಮಿತ ಸಂಖ್ಯೆಯಲ್ಲಿ ಪಕ್ಷಿಗಳು ಇದ್ದಾಗ ಮಾತ್ರ ವಂಶೋದ್ಧಾರ ಮಾಡುತ್ತವೆ. ಸಾಕಷ್ಟು ಬಹುರಾಷ್ಟ್ರೀಯ ಕಂಪನಿಗಳು ಇಂದು ವಿವಿಧ ಕಾಮಗಾರಿ ಆರಂಭಿಸಿದ್ದು, ಪರಿಸರ ನಾಶ ಹೆಚ್ಚಾಗಿದೆ ಎಂದರು.

ಪರಿಸರ ಸಂರಕ್ಷಣೆಗೆ ಕಾರ್ಪೊರೇಟ್ ಸಂಸ್ಥೆಗಳ ಮನವೊಲಿಕೆ ಬಹಳ ಕಷ್ಟ. ತಮ್ಮ ಅನುಕೂಲಕ್ಕೆ ವಿದ್ಯುತ್ ತಂತಿ, ಹೆದ್ದಾರಿ ನಿರ್ಮಾಣ ಇತ್ಯಾದಿ ಜತೆ ಇಂದು ಬೇರೆ ಬೇರೆ ಕಾರಣಕ್ಕೆ ಅರಣ್ಯ ನಾಶ ಆಗುತ್ತಿದೆ. ವಿವಿಧ ಮಾಫಿಯಾಗಳು ಇದರ ಹಿಂದೆ ಉತ್ತೇಜನ ನೀಡುತ್ತವೆ.

ಪಶ್ಚಿಮ ಘಟ್ಟ ಪ್ರದೇಶದಲ್ಲಿ 12 ಹೆದ್ದಾರಿ ನಿರ್ಮಾಣವಾಗಿದೆ. ಅಧಿಕಾರದಲ್ಲಿರುವವರು, ರಾಜಕೀಯ ಶಕ್ತಿಗಳು ಹಾಗೂ ಉದ್ಯಮಿಗಳು ಪರಿಸರ, ಅರಣ್ಯ ಸಂರಕ್ಷಣೆ ವಿಚಾರದಲ್ಲಿ ಮನವರಿಕೆ ಮಾಡುವುದು ಕಷ್ಟ.

ಸಂವಹನ ಮಾಡುವ ಸಂದರ್ಭ ಸೂಕ್ತ ವ್ಯಕ್ತಿಯನ್ನು ಗುರಿಯಾಗಿಸಿಕೊಳ್ಳಬೇಕು. ನಗರ ಪ್ರದೇಶದಲ್ಲಿ ನೀರು ನಿರ್ಲಕ್ಷ್ಯ ಹೆಚ್ಚಾಗಿದೆ. ಶುದ್ಧ ನೀರಿನ ಅಗತ್ಯತೆ ಸಮುದ್ರಕ್ಕೆ ಅಪಾರವಾಗಿದೆ. ಆದರೆ, ಮಾರ್ಚ್ ನಂತರ ಸಮುದ್ರಕ್ಕೆ ನದಿ ನೀರು ಸೇರುತ್ತಿಲ್ಲ. ಆವಿಯಾಗಿ ನೀರು ನೆಲದ ಮೇಲ್ಬಾಗಕ್ಕೆ ತೆರಳುತ್ತಿದೆ.

ಅದು ಹಲವೆಡೆ ಮಳೆಯಾಗಿ ಧಾರಾಕಾರವಾಗಿ ಸುರಿಯುತ್ತದೆ. ನಾವು ಜನರಿಗೆ ಅರಿವು ಮೂಡಿಸಲು ಹೂಡುವ ದಾರಿಗಳೆಲ್ಲಾ ಒಂದು ನಿರ್ಧಾರ ಕೈಗೊಳ್ಳುವ ಹಂತ ತಲುಪಿ ನಿಲ್ಲುತ್ತವೆ ಎಂದು ಬೇಸರ ವ್ಯಕ್ತಪಡಿಸಿದರು.

Last Updated : Oct 28, 2022, 1:15 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.