ಚಾಮರಾಜನಗರ: ನಗರದ ಸಿಡಿಎಸ್ ಭವನದಲ್ಲಿರುವ ನಿರಾಶ್ರಿತರಿಗಾಗಿ ನಗರಸಭೆ ವತಿಯಿಂದ ಸಂಗೀತ ರಸಸಂಜೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ವಿಶೇಷವೆಂದರೆ, ಕೊರೊನಾ ಜಾಗೃತಿ ಮೂಡಿಸುವ ಸುರಕ್ಷಾ ಪಡೆ ಸ್ವಯಂ ಸೇವಕರು, ಯೋಜನಾ ನಿರ್ದೇಶಕ ಕೆ.ಸುರೇಶ್ ಹಾಗು ನಗರಸಭೆಯ ಆರೋಗ್ಯ ನಿರೀಕ್ಷಕರುಗಳಾದ ಶರವಣ, ಶಿವಪ್ರಸಾದ್, ಮಹಾದೇವನಾಯಕ ಅವರುಗಳೇ ಗಾಯನ ಸಂಗೀತ ರಸಸಂಜೆ ಕಾರ್ಯಕ್ರಮದಲ್ಲಿ ಕಲಾವಿದರಾಗಿ ಗಮನ ಸೆಳೆದರು.
ಯೋಜನಾ ನಿರ್ದೇಶ ಕೆ.ಸುರೇಶ್ ಕೋಲುಮಂಡೆ ಜಂಗಮದೇವ ಹಾಡು ಹೇಳಿದ್ರೆ, ಆರೋಗ್ಯ ನಿರೀಕ್ಷಕ ಶಿವಪ್ರಸಾದ್ ಒಳಿತು ಮಾಡು ಮನುಷ, ಶರವಣ ಮಹಾದೇವನಾಯಕ ಡಾ.ರಾಜ್ಕುಮಾರ್ ಹಾಡುಗಳನ್ನು ಹಾಡಿದರು. ಸುರಕ್ಷಾ ಪಡೆಯ ಸ್ವಯಂ ಸೇವಕರು ಬಿಳಿಗಿರಿರಂಗನಾಥ, ಮಲೆಮಹದೇಶ್ವರ ಕುರಿತ ಜನಪ್ರಿಯ ಜನಪದ ಗೀತೆಗಳನ್ನು ಹಾಡಿ ರಂಜಿಸಿದರು.
ಇದನ್ನೂ ಓದಿ: ರಾಜ್ಯಾದ್ಯಂತ ಮಾನ್ಸೂನ್ ಚುರುಕು: ಕರಾವಳಿಗೆ ಭಾರೀ ಮಳೆ ಮುನ್ಸೂಚನೆ