ETV Bharat / state

ಬಿಜೆಪಿ ಅಧಿಕಾರಕ್ಕೆ ಬರಲು ಶಾಸಕ ಪುಟ್ಟರಂಗಶೆಟ್ಟಿ ಪರೋಕ್ಷ ಬೆಂಬಲ: ಎಸ್​​​ಡಿಪಿಐ ಆರೋಪ

author img

By

Published : Nov 3, 2020, 5:36 PM IST

ಶಾಸಕ ಪುಟ್ಟರಂಗಶೆಟ್ಟಿ ಅವರು ಮತ ಚಲಾಯಿಸಲು ಬರದೇ ಹಲವು ಪ್ರಶ್ನೆಗಳವು ಎದ್ದಿವೆ. ಈ ರೀತಿಯ ನಿಲುವು ತಾಳಿದ್ದಕ್ಕೆ ಶಾಸಕರು ಉತ್ತರ ಕೊಡಬೇಕಿದೆ ಎಂದು ಎಸ್ಡಿಪಿಐ ಮುಖಂಡ ಅಬ್ರಾರ್ ಅಹಮ್ಮದ್ ಆಗ್ರಹಿಸಿದರು.

SDPI leader Abrar Ahmed
ಎಸ್ಡಿಪಿಐ ಮುಖಂಡ ಅಬ್ರಾರ್ ಅಹಮ್ಮದ್

ಚಾಮರಾಜನಗರ: ಚಾಮಾಜನಗರ ನಗರಸಭೆ ಅಧ್ಯಕ್ಷೀಯ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕ ಸಿ.ಪುಟ್ಟರಂಗಶೆಟ್ಟಿ ಮತ ಚಲಾಯಿಸಲು ಬರದಿದ್ದಕ್ಕೆ ಎಸ್ಡಿಪಿಐ ಕಿಡಿಕಾರಿದ್ದು, ಬಿಜೆಪಿಗೆ ಅವರು ಪರೋಕ್ಷ ಬೆಂಬಲ ಕೊಟ್ಟಿರುವ ಗುಮಾನಿಯಂತಿದೆ ಎಂದು ಆರೋಪಿಸಿದೆ.

ಬಿಜೆಪಿ ಅಧಿಕಾರಕ್ಕೆ ಬರಲು ಶಾಸಕ ಪುಟ್ಟರಂಗಶೆಟ್ಟಿ ಪರೋಕ್ಷ ಬೆಂಬಲ: ಎಸ್​​​​ಡಿಪಿಐ ಆರೋಪ

ಸುದ್ದಿಗೋಷ್ಠಿಯಲ್ಲಿ ಎಸ್​​ಡಿಪಿಐ ಮುಖಂಡ ಅಬ್ರಾರ್ ಅಹಮ್ಮದ್ ಮಾತನಾಡಿ, ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್​​​ಗೆ ಬೇಷರತ್ ಬೆಂಬಲ ನೀಡಿದ್ದೆವು. ದುರಂತವೆಂದರೆ, ಶಾಸಕ ಪುಟ್ಟರಂಗಶೆಟ್ಟಿ ಅವರೇ ಮತ ಚಲಾಯಿಸಲು ಬರದೇ ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಈ ರೀತಿಯ ನಿಲುವು ತಾಳಿದ್ದಕ್ಕೆ ಶಾಸಕರು ಉತ್ತರ ಕೊಡಬೇಕಿದೆ ಎಂದು ಅವರು ಆಗ್ರಹಿಸಿದರು.

ಜಾತ್ಯತೀತ ಸಿದ್ಧಾಂತ ಮತ್ತು ವಿಶ್ವಾಸಕ್ಕೆ ನಂಬಿಕೆದ್ರೋಹ ಬಗೆದಿರುವ ಪುಟ್ಟರಂಗಶೆಟ್ಟಿ ಅವರಿಗೆ ಜನರು ಮುಂದಿನ ದಿನಗಳಲ್ಲಿ ತಕ್ಕಪಾಠ ಕಲಿಸಲಿದ್ದಾರೆ. ಅಧಿಕಾರ ಹಿಡಿದಿರುವ ಬಿಜೆಪಿ ಜನವಿರೋಧಿ ನೀತಿ ತಳೆದರೆ ಎಸ್​​​​ಡಿಪಿಐ ಹೋರಾಡಲಿದೆ ಎಂದು ಅವರು ಎಚ್ಚರಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.