ETV Bharat / state

ಚಾಮರಾಜನಗರದಲ್ಲಿ ಪ್ರವಾಸೋದ್ಯಮ ಅಭಿವೃದ್ದಿಗೆ ವಿಶೇಷ ಒತ್ತು: ಉಸ್ತುವಾರಿ ಸಚಿವರ ಮ್ಯಾರಥಾನ್ ಸಭೆ

ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್​​ ಚಾಮರಾಜನಗರದಲ್ಲಿಂದು ಅಧಿಕಾರಿಗಳೊಂದಿಗೆ ಸರಣಿ ಸಭೆ ನಡೆಸಿದ್ರು. ಕೊಳ್ಳೇಗಾಲ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಭರಚುಕ್ಕಿ ಜಲಪಾತ ಪ್ರದೇಶಾಭಿವೃದ್ದಿ ಬಗ್ಗೆ ಡಿಎಫ್​ಒ ತಯಾರಿಸಿರುವ ಮಾಸ್ಟರ್‌ ಪ್ಲಾನ್​ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡ್ರು.

author img

By

Published : Nov 5, 2019, 11:54 PM IST

ಸಚಿವ ಸುರೇಶ್ ಕುಮಾರ್ ಅಧಿಕಾರಿಗಳೊಂದಿಗೆ ಸಭೆ

ಚಾಮರಾಜನಗರ: ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ನಗರದಲ್ಲಿಂದು ಅಧಿಕಾರಿಗಳೊಂದಿಗೆ ಸಾಲು ಸಾಲು ಸಭೆ ನಡೆಸಿ ಅಭಿವೃದ್ಧಿ ಕಾರ್ಯಗಳ ವೇಗ ಹೆಚ್ಚಿಸಲು ಮುಂದಾದರು.

ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಸಭೆ ನಡೆಸಿದ ಸಚಿವರು ಕೊಳ್ಳೇಗಾಲ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಭರಚುಕ್ಕಿ ಜಲಪಾತ ಪ್ರದೇಶಾಭಿವೃದ್ದಿ ಬಗ್ಗೆ ಡಿಎಫ್​ಒ ಏಡುಕುಂಡಲು ತಯಾರಿಸಿರುವ ಮಾಸ್ಟರ್‌ ಪ್ಲಾನ್​ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡರು. ಮೊದಲ ಹಂತದಲ್ಲಿ ಸ್ಕೈವಾಕ್ ಸಮೇತ ಆ್ಯಂಪಿ ಥಿಯೇಟರ್, ಆಕರ್ಷಕ ಸ್ವಾಗತ ಕಮಾನು, ಫುಡ್ ಕೋರ್ಟ್ ಹಾಗೂ ಇಂಟಲಿಜೆನ್ಸ್ ಕಣ್ಗಾವಲು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದಾಗಿ ಅಧಿಕಾರಿ ಮನವರಿಕೆ ಮಾಡಿದ್ರು.ಈ ಸಂಬಂಧ ಕಾಮಗಾರಿಗೆ ಡಿಸೆಂಬರ್​ನಲ್ಲಿ ಭೂಮಿ ಪೂಜೆ ನಡೆಸುವುದಾಗಿ ಮಾಹಿತಿ ನೀಡಿದರು.

ಮುಂದಿನ ದಿನಗಳಲ್ಲಿ ಬ್ಯಾಂಬೂ ಪಾರ್ಕ್, ಆರ್ಕಿಡ್ ಪಾರ್ಕ್, ಎನರ್ಜಿ ಪಾರ್ಕುಗಳೆಂಬ ವಿಶಿಷ್ಟ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಸೋಲಾರ್ ಎನರ್ಜಿ ಮೂಲಕ ವಿದ್ಯುತ್ ಶಕ್ತಿ ಉತ್ಪಾದಿಸಿ ಅದನ್ನು ಉದ್ಯಾನಕ್ಕೆ ಬಳಸಿಕೊಳ್ಳುವ ಉದ್ದೇಶವೂ ಇದೆ. ಇದರ ಅನುಷ್ಠಾನಕ್ಕೆ ಮುಂದಾಗುವುದಾಗಿ ಸುರೇಶ್ ಕುಮಾರ್ ತಿಳಿಸಿದರು.

ಚಾಮರಾಜನಗರ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಮಲೆಮಹದೇಶ್ವರ ವನ್ಯಜೀವಿ ಧಾಮದ ಡಿಎಫ್ಒ ಏಡುಕುಂಡಲು ಮಾತನಾಡಿ, 21 ವಿಶಿಷ್ಟ ಪಾರ್ಕುಗಳ ಮಾಸ್ಟರ್ ಪ್ಲಾನ್ ಮಾಡಿದ್ದು ಅಂದಾಜು 100 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದೆ. ಈ ಯೋಜನೆಗೆ ಈಗಾಗಲೇ 4 ಕೋಟಿ ರೂ. ಬಿಡುಗಡೆಯಾಗಿದೆ ಎಂದು ತಿಳಿಸಿದರು.

ಹೊಂಡ ಮುಚ್ಚಿ :

ಜಿಲ್ಲೆಯಲ್ಲಿ ಅನುಮತಿ ಪಡೆದಿರುವ 101 ಗಣಿಗಾರಿಕಾ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ಈಗಾಗಲೇ ಗಣಿಗಾರಿಕೆ ನಡೆಸಿ ಹಾಗೆಯೇ ಬಿಟ್ಟಿರುವ ಆಳವಾದ ಹೊಂಡಗಳು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದು ಇವುಗಳನ್ನು ಮುಚ್ಚಬೇಕು ಎಂದು ಶಾಸಕ ಎನ್.ಮಹೇಶ್ ಧ್ವನಿ ಎತ್ತಿದ್ದರು. ಇದಕ್ಕೆ ಶಾಸಕ ಪುಟ್ಟರಂಗ ಶೆಟ್ಟಿ ಮತ್ತು ನಿರಂಜನಕುಮಾರ್ ದನಿಗೂಡಿಸಿದ್ದು, ಅವರು ಪ್ರಪಾತ ಮಾಡಿ ಹೊರಟರೆ ಮುಚ್ಚಿಸುವವರು ಯಾರು? ಅವರೇ ಅದನ್ನು ಮುಚ್ಚಿಸಬೇಕು. ಹೊರಗಡೆ ತೆಗೆದಿರುವ ನಿರುಪಯುಕ್ತ ಕಲ್ಲು ಮಣ್ಣನ್ನೇ ಹಾಕಿದರೇ ಶೇ.50ರಷ್ಟು 150-200 ಅಡಿ ಆಳದ ಹೊಂಡಗಳು ಮುಚ್ಚಲಿದೆ ಎಂದು ಸಲಹೆ ನೀಡಿದರು.

ರೈತರ ಪ್ರತಿಭಟನೆ:

ನಿಗದಿತ ಸಮಯದಂತೆ ರೈತರೊಂದಿಗೆ ಸಭೆ ಪ್ರಾರಂಭವಾಗದಿದ್ದರಿಂದ ರೊಚ್ಚಿಗೆದ್ದ ರೈತರು ಜಿಲ್ಲಾಡಳಿತ ಸಭಾಂಗಣದಲ್ಲಿ ಸಚಿವರು ಮತ್ತು ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.

Intro:ಚಾಮರಾಜನಗರದಲ್ಲಿ ಸಚಿವರ ಮೀಟಿಂಗ್ ಮ್ಯಾರಥಾನ್.. ಭರಚುಕ್ಕಿ ಜಲಪಾತದ ಅಭಿವೃದ್ಧಿ- ಗಣಿಗಾರಿಕೆಯ ಹೊಂಡಕ್ಕೆ ಕಾದಿದೆ ಗತಿ!

ಚಾಮರಾಜನಗರ: ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ನಗರದಲ್ಲಿಂದು ಅಧಿಕಾರಿಗಳೊಂದಿಗೆ ಸಾಲು ಸಾಲು ಸಭೆ ನಡೆಸಿ ಅಭಿವೃದ್ಧಿ ಕಾರ್ಯಗಳ ವೇಗ ಹೆಚ್ಚಾಗಿಸಲು ಮುಂದಾದರು.

Body:ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಸಭೆ ನಡೆಸಿ ಕೊಳ್ಳೇಗಾಲ ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಭರಚುಕ್ಕಿ ಜಲಪಾತ ಪ್ರದೇಶದಲ್ಲಿ ನಿರ್ಮಿಸಲು ಡಿಎಫ್ ಒ ಏಡುಕುಂಡಲು ತಯಾರಿಸಿರುವ ಮಾಸ್ತರ್ ಪ್ಲಾನ್ ನ ಸಮಗ್ರ ಮಾಹಿತಿ ಪಡೆದುಕೊಂಡು ಮೊದಲ ಹಂತದಲ್ಲಿ ಸ್ಕೈವಾಕ್ ಸಮೇತ ಆ್ಯಂಪಿ ಥಿಯೇಟರ್, ಆಕರ್ಷಕ ಸ್ವಾಗತ ಕಮಾನು, ಫುಡ್ ಕೋರ್ಟ್ ಹಾಗೂ ಇಂಟಲಿಜೆನ್ಸ್ ಕಣ್ಗಾವಲು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದಾಗಿ ತಿಳಿಸಿದರು.ಈ ಸಂಬಂಧ ಕಾಮಗಾರಿಗೆ ಡಿಸೆಂಬರ್‌ ನಲ್ಲಿ ಭೂಮಿಪೂಜೆ ನಡೆಸುವುದಾಗಿ ಮಾಹಿತಿ ನೀಡಿದರು.

ಮುಂದಿನ ದಿನಗಳಲ್ಲಿ
ಬ್ಯಾಂಬೂ ಪಾರ್ಕ್, ಆರ್ಕಿಡ್ ಪಾರ್ಕ್, ಎನರ್ಜಿ ಪಾರ್ಕ್ ಅಂಥಹ ವಿಶಿಷ್ಟ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಸೋಲಾರ್ ಎನರ್ಜಿ ಮೂಲಕ ವಿದ್ಯುತ್ ಶಕ್ತಿ ಉತ್ಪಾದಿಸಿ, ಅದನ್ನು ಪಾರ್ಕ್ಗೆ ಬಳಸಿಕೊಳ್ಳವ ಉದ್ದೇಶವೂ ಇದೆ. ಇದರ ಅನುಷ್ಟಾನಕ್ಕೆ ಮುಂದಾಗುವುದಾಗಿ ಸುರೇಶ್ ಕುಮಾರ್ ಅವರು ತಿಳಿಸಿದರು.

ಮಲೆಮಹದೇಶ್ವರ ವನ್ಯಜೀವಿ ಧಾಮದ ಡಿಎಫ್ಒ ಏಡುಕುಂಡಲು ಮಾತನಾಡಿ, 21 ವಿಶಿಷ್ಟ ಪಾರ್ಕ್ ಗಳ ಮಾಸ್ಟರ್ ಪ್ಲಾನ್ ಮಾಡಿದ್ದು ಅಂದಾಜು
೧೦೦ ಕೋಟಿ ರೂ. ಯೋಜನೆ ಇದಾಗಿದೆ. ಈಗಾಗಲೇ , ೪ ಕೋಟಿ ರೂ. ಬಿಡುಗಡೆಯಾಗಿದೆ ಎಂದು ತಿಳಿಸಿದರು.

ರೋಡ್ ಶೋ, ಸಾಹಸ ಪ್ರವಾಸೋದ್ಯಮ ಸೇರಿದಂತೆ ವೈವಿಧ್ಯಮಯ ಪ್ರಕಾರಗಳ ಮೂಲಕ ಪ್ರವಾಸಿಗರನ್ನು ಆಕರ್ಷಿಸಲು ರೂಪುರೇಷೆ ತಯಾರಿಸಬೇಕು. ಒಟ್ಟಾರೆ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿದಂತೆ ಕ್ರಿಯಾ ಯೋಜನೆಯೊಂದನ್ನು ರೂಪಿಸಿ ಎಂದು ಪ್ರವಾಸೋದ್ಯಮ ಅಧಿಕಾರಿಗೆ ಸೂಚಿಸಿದರು.

ಹೊಂಡ ಮುಚ್ಚಿ : ಜಿಲ್ಲೆಯಲ್ಲಿ ಅನುಮತಿ ಪಡೆದಿರುವ ೧೦೧ ಗಣಿಗಾರಿಕೆಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ಈಗಾಗಲೇ ಗಣಿಗಾರಿಕೆ ನಡೆಸಿ ಹಾಗೆ ಬಿಟ್ಟಿರುವ ಆಳವಾದ ಹೊಂಡಗಳು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದು ಇವುಗಳನ್ನು ಮುಚ್ಚಬೇಕು ಎಂದು ಶಾಸಕ ಎನ್.ಮಹೇಶ್ ಧ್ವನಿ ಎತ್ತಿದ್ದರು. ಶಾಸಕ ಪುಟ್ಟರಂಗಶೆಟ್ಟಿ ಮತ್ತು ನಿರಂಜನಕುಮಾರ್ ಧ್ವನಿಗೂಡಿಸಿ ಅವರು ಪ್ರಪಾತ ಮಾಡಿ ಹೊರಟರೇ ಮುಚ್ಚಿಸುವವರು ಯಾರೂ ಅವರೇ ಅದನ್ನು ಮುಚ್ಚಿಸಬೇಕು, ಹೊರಗಡೆ ತೆಗೆದಿರುವ ನಿರುಪಯುಕ್ತ ಕಲ್ಲು-ಮಣ್ಣನ್ನೇ ಹಾಕಿದರೇ ಶೇ.೫೦ ರಷ್ಟು 150-200 ಅಡಿ ಆಳದ ಹೊಂಡಗಳು ಮುಚ್ಚಲಿದೆ ಎಂದು ಸಲಹೆ ನೀಡಿದರು.

ಜಿಲ್ಲೆಯಲ್ಲಿ ಹಾಗೇ ಬಿಟ್ಟಿರುವ ಗಣಿಗಾರಿಕೆಯ ಹೊಂಡಗಳೆಷ್ಟಿವೆ ಎಂಬುದನ್ನು ಅಧಿಕಾರಿಗಳು ಪಟ್ಟಿ ತಯಾರಿಸಿ , ಅದನ್ನು ಗಣಿ ಮಾಲೀಕರಿಂದ ಮುಚ್ಚಿಸಬೇಕು ಇಲ್ಲವೇ ಇಲಾಖೆಯೇ ಬೇರೆ ಪರಿಹಾರ ಕಂಡುಹಿಡಿಯಬೇಕು ಎಂದು ಸೂಚಿಸಿದರು.

ಗಣಿಗಾರಿಕೆಯ ಸ್ಫೋಟದಿಂದಾಗುತ್ತಿರುವ ಅವಘಡಗಳು ಮತ್ತು ಮಾಲಿನ್ಯದ ಪ್ರಮಾಣ ಅಳೆಯಲು ಜಿಲ್ಲೆಯಲ್ಲಿ 3 ಮಾನಿಟರ್ ಸೆಂಟರ್ ನಿರ್ಮಿಸಬೇಕೆಂಬ ಅಧಿಕಾರಿಯ ಪ್ರಸ್ತಾವನೆಗೆ ಸದ್ಯಕ್ಕೆ ಒಂದು ಮಾನಿಟರ್ ಕೇಂದ್ರವನ್ನು ನಿರ್ಮಿಸಿ ಅದಕ್ಕೆ ತಗಲುವ 35 ಲಕ್ಷ ರೂ‌. ಒದಗಿಸಿಕೊಡುವುದಾಗಿ ಭರವಸೆ ನೀಡಿದರು.

ರೈತರ ಪ್ರತಿಭಟನೆ: ನಿಗದಿತ ಸಮಯದಂತೆ ರೈತರೊಂದಿಗೆ ಸಭೆ ಪ್ರಾರಂಭವಾಗದಿದ್ದರಿಂದ ರೊಚ್ಚಿಗೆದ್ದ ರೈತರು ಜಿಲ್ಲಾಡಳಿತ ಸಭಾಂಗಣದಲ್ಲಿ ಸಚಿವರು ಮತ್ತು ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.

ಬಳಿಕ, ಸಚಿವರು ವಿಳಂಬಗತಿಗೆ ಕ್ಷಮೆಕೋರಿ
ಕುಡಿಯುವ ನೀರು ಹಾಗೂ ಅಂತರ್ಜಲವೃದ್ದಿಗಾಗಿ ಜಿಲ್ಲೆಯಾದ್ಯಂತ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಇನ್ನು ಯಾವುದೇ ಸಬೂಬು ಬೇಡ ಸಮಯ ನಿಗಧಿಪಡಿಸಿಕೊಂಡು ಕಾಮಗಾರಿ ಮುಗಿಸುವಂತೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳ ಬಗ್ಗೆ ಪ್ರತಿ ಸಭೆಯಲ್ಲೂ ಚರ್ಚೆ ಮಾಡಿ ಸಾಕಾಗಿ ಹೋಗಿದೆ, ಅಧಿಕಾರಿಗಳು ಇಲ್ಲಿಯವರೆಗೆ ಕೊಟ್ಟ ಯಾವುದೇ ಭರವಸೆಯನ್ನು ಈಡೇರಿಸಿಲ್ಲ, ಈ ಸಭೆಯಲ್ಲಿ ನಮಗೆ ಅಧಿಕಾರಿಗಳರಿಂದ ಸಬೂಬು ಉತ್ತರ ಬೇಡ, ಉಸ್ತುವಾರಿ ಸಚಿವರಿಂದ ನಮಗೆ ಸ್ಪಷ್ಟ ಉತ್ತರ ಹಾಗೂ ಕಾಮಗಾರಿ ಮುಗಿಸುವ ಭರವಸೆ ಬೇಕು ಎಂದು ಪಟ್ಟು ಹಿಡಿದರು.

Conclusion:ಹುತ್ತೂರು ಹಾಗೂ ವಡ್ಡಗೆರೆ ಕೆರೆಗೆ ಡಿ.೧೦ ರೊಳಗೆ ನೀರು, ಉಮ್ಮತ್ತೂರು ಕೆರೆಗೆ ಮಾ. ಅಂತ್ಯದಲ್ಲಿ ನೀರು
ಈ ಹಂತದಲ್ಲಿ ಕಾವೇರಿ ಹಾಗೂ ಕಬಿನಿ ಮತ್ತು ಸಣ್ಣ ನೀರಾವರಿ ಇಲಾಖೆಗಳಿಗೆ ಸಂಬAದಪಟ್ಟ ಎಂಜಿನಿಯರ್, ಅಧಿಕಾರಿಗಳೊಂದಿಗೆ ಚರ್ಚಿಸಿದ ಸಚಿವರು ಏನೇ ಆಗಲಿ ಹುತ್ತೂರು ಹಾಗೂ ವಡ್ಡಗೆರೆ ಕೆರೆಗೆ ಡಿ.೧೦ ರೊಳಗೆ ನೀರು ಹರಿಸಲಾಗುವುದು. ಸುತ್ತೂರು ಏತ ನೀರಾವರಿ ಯೋಜನೆ ಕಾಮಗಾರಿಯನ್ನು ಮಾರ್ಚ್ ಅಂತ್ಯದಲ್ಲಿ ಮುಗಿಸಿ ಉಮ್ಮತ್ತೂರು ವ್ಯಾಪ್ತಿಗೆ ಬರುವ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಸ್ಪಷ್ಟ ಭರವಸೆ ನೀಡಿದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.