ಚಾಮರಾಜನಗರ : ಈ ಶೈಕ್ಷಣಿಕ ವರ್ಷದಲ್ಲಿ ಶೇ.30ರಷ್ಟು ಪಠ್ಯ ಕಡಿತವಾಗಲಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು. ಚಾಮರಾಜನಗರ ತಾಲೂಕಿನ ಚಂದಕವಾಡಿ ಶಾಲೆಗೆ ಭೇಟಿ ನೀಡಿದ ಬಳಿಕ ಅವರು ಮಾತನಾಡಿ, ಯಾರೂ ಕೂಡ ಆತಂಕಪಡುವ ಅಗತ್ಯವಿಲ್ಲ. ಇಂದು ಸಂಜೆ ಅಥವಾ ನಾಳೆ ಪಠ್ಯ ಕಡಿತದ ಅಧಿಕೃತ ಆದೇಶ ಹೊರಡಿಸಲಾಗುವುದು. ಈಗಾಗಲೇ ಸಿಲಬಸ್ ನಿರ್ಧಾರವಾಗಿದೆ ಎಂದು ಅವರು ಮಾಹಿತಿ ನೀಡಿದರು.
ಜ.15ರ ನಂತರ ಎಲ್ಲಾ ತರಗತಿಗಳ ಆರಂಭಕ್ಕೆ ತಜ್ಞರ ಅಭಿಪ್ರಾಯಗಳನ್ನು ಪಡೆಯಲಾಗುವುದು. ವಸತಿ ಶಾಲೆಗಳ ಆರಂಭಕ್ಕೆ ಕೆಲ ನಿಯಮಗಳನ್ನು ಇಲಾಖೆಗೆ ನೀಡಲಾಗಿದೆ. ಖಾಸಗಿ ಶಾಲೆಗಳ ಒಕ್ಕೂಟವು ಟ್ಯೂಷನ್ ಶುಲ್ಕದಲ್ಲಿ ರಿಯಾಯಿತಿ ನೀಡುವುದಾಗಿ ತಿಳಿಸಿವೆ ಎಂದು ಅವರು ಹೇಳಿದರು.
ಓದಿ...ನಮ್ಮನ್ನು ವಲಸೆ ವಲಸೆ ಎಂದು ಯಾಕೆ ಕರೆಯುತ್ತೀರಿ?: ಸಚಿವ ಬಿ.ಸಿ. ಪಾಟೀಲ್
ಮಕ್ಕಳು ಮತ್ತು ಪಾಲಕರಲ್ಲಿ ಆತ್ಮವಿಶ್ವಾಸ ತುಂಬುವ ಅಗತ್ಯ ಇರುವುದರಿಂದ ಶಾಲೆಗಳಿಗೆ ಭೇಟಿ ನೀಡುತ್ತಿದ್ದೇನೆ. ಇಂದು 7 ಶಾಲೆಗಳಿಗೆ ಭೇಟಿಯಿತ್ತು ಮಕ್ಕಳ ಅಭಿಪ್ರಾಯ, ಅನಿಸಿಕೆ ಪಾಠ-ಪ್ರವಚನದ ಬಗ್ಗೆ ಮಾಹಿತಿ ಪಡೆಯುತ್ತೇನೆ ಎಂದರು.