ಚಾಮರಾಜನಗರ: ರಸ್ತೆಯಲ್ಲಿ ಹುರುಳಿ ಒಕ್ಕಣೆ ಮಾಡಿದ್ದ ಕಾರಣ ಮಾರುತಿ ವ್ಯಾನೊಂದು ಹೊತ್ತಿ ಉರಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದಲ್ಲಿ ನಡೆದಿದೆ.
ಒಕ್ಕಣೆ ಮಾಡುವಾಗ ಹುರುಳಿ ಸೊಪ್ಪು ಚಕ್ರಕ್ಕೆ ಸಿಲುಕಿ ಬೆಂಕಿ ಹೊತ್ತಿಕೊಂಡಿದ್ದು ಚಾಲಕ ಸೇರಿದಂತೆ ಮಕ್ಕಳಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೇರಳ ರಾಜ್ಯದವರಿಗೆ ಸೇರಿದ ವ್ಯಾನ್ ಇದಾಗಿತ್ತು ಎಂದು ತಿಳಿದುಬಂದಿದೆ. ಗ್ಯಾಸ್ ಬಳಸಿದ್ದರಿಂದ ಸಿಡಿಯಲಿದೆ ಎನ್ನುವ ಭೀತಿಗೊಳಗಾದ ಪ್ರತ್ಯಕ್ಷದರ್ಶಿಗಳು ಕಾರಿನ ಬೆಂಕಿಯನ್ನು ನಂದಿಸುವ ಗೋಜಿಗೆ ಹೋಗಲಿಲ್ಲ. ಇದರೊಟ್ಟಿಗೆ, ಒಕ್ಕಣೆಗೆ ಹಾಕಿದ್ದ ಹುರುಳಿ ಸೊಪ್ಪು ಕೂಡ ಸಂಪೂರ್ಣ ಭಸ್ಮವಾಗಿದೆ.
ಈ ಹಿಂದೆ ಈಟಿವಿ ಭಾರತದಲ್ಲಿ ರಸ್ತೆಯಲ್ಲಿ ರೈತರ ಸುಗ್ಗಿ ಸಂಭ್ರಮ: ವಾಹನ ಸವಾರರ ಫಜೀತಿ ಎಂದು ವರದಿ ಮಾಡಿ ಪೊಲೀಸರು, ಅಧಿಕಾರಿಗಳ ಗಮನ ಸೆಳೆದಿತ್ತು. ಆದರೆ, ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರಿಂದ ಈ ಅವಘಡ ಸಂಭವಿಸಿದೆ.