ETV Bharat / state

ಮಂದಿರ-ಮಸೀದಿಗಿಲ್ಲಿ ಒಂದೇ ಗೋಡೆ: ಎರಡು ಧರ್ಮಗಳ ಒಂದು ಮಾಡುತ್ತಿದೆ ಮಾರಮ್ಮನ ಕೊಂಡೋತ್ಸವ!

ಧಾರ್ಮಿಕ ಸಾಮರಸ್ಯಕ್ಕೆ ಪ್ರತೀಕವೆಂಬಂತೆ ರಾಜ್ಯದ ಗಡಿಭಾಗ ತಾಳವಾಡಿಯ ಮಸೀದಿ ಮುಂದೆ ಮಾರಮ್ಮ ದೇಗುಲದಲ್ಲಿ ಕೊಂಡ ಹಾಯುವ ವಿಶಿಷ್ಟ ಜಾತ್ರೆ ನಡೆಯಿತು. ಇಲ್ಲಿನ ಗ್ರಾಮದ ಮುಖ್ಯಬೀದಿಯಲ್ಲಿರುವ ಮಾರಮ್ಮನ ದೇಗುಲದ ಪಕ್ಕ ಮಸೀದಿ ಇದೆ. ಇದರ ಗೋಡೆಗೆ ಅಂಟಿಕೊಂಡಂತೆ ಟಿಪ್ಪು ಸುಲ್ತಾನ್ ಕಾಲದಲ್ಲಿ ನಿರ್ಮಾಣವಾಗಿರುವ ವೇಣುಗೋಪಾಲ ಸ್ವಾಮಿ ಗುಡಿ ಇದೆ. ಮಸೀದಿ ಮುಂಭಾಗದಲ್ಲೇ ಕೊಂಡೋತ್ಸವ ಜರುಗುವುದು ಇಲ್ಲಿನ ವಿಶೇಷತೆ.

marammana-konda fest in front of masjid
ಮಸೀದಿ ಮುಂಭಾಗ ಮಾರಮ್ಮನ ಕೊಂಡ ಹಾಯುವ ಜಾತ್ರೆ ನಡೆಯಿತು.
author img

By

Published : Mar 17, 2022, 3:48 PM IST

ಚಾಮರಾಜನಗರ: ಧರ್ಮ-ಧರ್ಮಗಳ ನಡುವಿನ ಅಸಹಿಷ್ಣುತೆಯ ಗೋಡೆಗಳು ಆಗಾಗ್ಗೆ ಕಾಣಿಸುವ ಈ ಕಾಲಘಟ್ಟದಲ್ಲಿ ಮಸೀದಿ ಮುಂದೆ ಮಾರಮ್ಮನ ಕೊಂಡ ಹಾಯುವ ವಿಶಿಷ್ಟ ಆಚರಣೆ ಸಾಮರಸ್ಯದ ಸಂದೇಶ ಸಾರಿತು. ಇಂಥದ್ದೊಂದು ಆಚರಣೆ ಕರ್ನಾಟಕ-ತಮಿಳುನಾಡು ಗಡಿಭಾಗದಲ್ಲಿರುವ ತಾಳವಾಡಿಯಲ್ಲಿ ನಡೆದಿದೆ.

ತಾಳವಾಡಿ ತಮಿಳುನಾಡಿಗೆ ಒಳಪಟ್ಟರೂ ಬಹುಪಾಲು ಮಂದಿ ಕನ್ನಡಿಗರೇ ಇರುವ ಈ ಪಟ್ಟಣದ ಹೃದಯಭಾಗದಲ್ಲಿ ಮಾರಮ್ಮ ದೇಗುಲ ಮತ್ತು ಮಸೀದಿ ದಶಕಗಳಿಂದಲೂ ಆಜುಬಾಜಿನಲ್ಲೇ ಇವೆ. ಈ ಮಸೀದಿ ಟಿಪ್ಪು ಸುಲ್ತಾನ್​ ಆಡಾಳಿತಾವಧಿಯಲ್ಲಿ ನಿರ್ಮಾಣಗೊಂಡಿದೆ ಎನ್ನುವುದು ಇತಿಹಾಸ.

ಜಾತ್ರೆಯ ಬೆಳಗಿನ ಸಮಯ ಮಾರಮ್ಮನ ದೇಗುಲದಲ್ಲಿ ಘಂಟನಾದ, ಮಂತ್ರೋಚ್ಛಾರ ನಡೆದರೆ ಮಸೀದಿಯಲ್ಲಿ ಪ್ರಾರ್ಥನೆ ನಡೆಯುತ್ತದೆ. ಮುಸ್ಲಿಂ ಸಮುದಾಯದ ಜನರು ಕೊಂಡೋತ್ಸವ ಕಣ್ತುಂಬಿಕೊಂಡು ಸಾಮರಸ್ಯದ ಹಬ್ಬವೆಂದು ಮುದ್ರೆ ಒತ್ತುತ್ತಾರೆ‌.

ಮಸೀದಿ-ದೇಗುಲಕ್ಕೆ ಒಂದೇ ಗೋಡೆ: ಗ್ರಾಮದ ಮುಖ್ಯಬೀದಿಯಲ್ಲಿರುವ ಮಾರಮ್ಮನ ದೇಗುಲದ ಪಕ್ಕ ಮಸೀದಿ ಇದೆ. ಇದರ ಗೋಡೆಗೆ ಅಂಟಿಕೊಂಡಂತೆ ಟಿಪ್ಪು ಸುಲ್ತಾನ್ ಕಾಲದಲ್ಲಿ ನಿರ್ಮಾಣವಾಗಿರುವ ವೇಣುಗೋಪಾಲ ಸ್ವಾಮಿ ಗುಡಿ ಇದೆ. ಮಸೀದಿ ಮುಂಭಾಗದಲ್ಲೇ ಕೊಂಡೋತ್ಸವ ಜರುಗುವುದು ವಿಶೇಷ.

ನಾಲ್ಕು ದಶಕದ ಹಿಂದೆ ಜಾತ್ರೆ ಸಂಬಂಧ ಘರ್ಷಣೆಯಾಗಿತ್ತು. ನಂತರ ಊರಿನ ಎಲ್ಲಾ ಕೋಮಿನ ಮುಖಂಡರು ಕುಳಿತು ಚರ್ಚಿಸಿ ಯಾವುದೇ ಗಲಾಟೆಗೆ ಅವಕಾಶ ನೀಡದಂತೆ ಸಮಾಜದಲ್ಲಿ ಸಾಮರಸ್ಯ ಕಾಪಾಡುವುದರೊಂದಿಗೆ ಜಾತ್ರಾ ಮಹೋತ್ಸವ ಆಚರಣೆ ನಡೆಸಿಕೊಂಡು ಬರುತ್ತಿದ್ದಾರೆ.

ಈ ಪ್ರದೇಶದಲ್ಲಿ ಮೂರು ಮಂದಿರಗಳು ಒಟ್ಟಿಗೆ ಇವೆ. ಧ್ವನಿವರ್ಧಕವನ್ನು ಜಾತ್ರೆಯಲ್ಲಿ ಮಾತ್ರ ಬಳಸಲಾಗುತ್ತದೆ. ಮುಸ್ಲಿಂ ಸಮುದಾಯದವರು ಕೂಡಾ ಜಾತ್ರೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಕೊಂಡೋತ್ಸವದ ಹಿಂದಿನ ದಿನ ಗ್ರಾಮದ ಬೀದಿಗಳಲ್ಲಿ ಮಾರಮ್ಮ ದೇವಿ ಉತ್ಸವ ನಡೆದಿದ್ದು ಇದಕ್ಕೆ ಚಂಡಿಮೇಳ, ಗೊರವರ ಕುಣಿತ, ವೀರಗಾಸೆ, ಬೀರೇದೇವರ ಕುಣಿತ ಇತ್ಯಾದಿ ಜಾನಪದ ಕಲಾ ತಂಡಗಳು ಮತ್ತು ಮಂಗಳ ವಾದ್ಯಗಳು ಹೆಚ್ಚು ಮೆರುಗು ನೀಡಿತು.

ಜಾತ್ರೆ ವೇಳೆ ಯಾರ ಮನೆಯಲ್ಲಿಯೂ ಘಾಟು, ಒಗ್ಗರಣೆ, ಕರಿದ ತಿನಿಸು, ಮಾಂಸಾಹಾರ ಮಾಡುವುದಿಲ್ಲ. ಜತೆಗೆ, ಸತ್ತವರ ಶವವನ್ನು ಊರೊಳಗೆ ತರುವಂತಿಲ್ಲ. ಇದನ್ನು ಎಲ್ಲ ಕೋಮಿನವರು ಇಂದಿಗೂ ಪಾಲಿಸಿಕೊಂಡು ಬರುತ್ತಿದ್ದಾರೆ. ಜಾತ್ರೆ ಅಂಗವಾಗಿ ಗ್ರಾಮದ ಒಂದೊಂದು ಜನಾಂಗದವರಿಗೂ ನಿರ್ದಿಷ್ಟ ಜವಾಬ್ದಾರಿ ವಹಿಸಲಾಗುತ್ತದೆ. ಹಾಲುಮತಸ್ಥರು ಕೊಂಡಕ್ಕೆ ಸೌದೆ ತರುತ್ತಾರೆ. ನಾಯಕ ಜನಾಂಗದವರು ಅದನ್ನು ಹೊತ್ತಿಸಿ ಕೆಂಡ ಮಾಡುತ್ತಾರೆ. ಬ್ರಾಹ್ಮಣರು ದೇವಿ ಪೂಜೆ ಮಾಡಿದರೆ, ಲಿಂಗಾಯತರು ಮತ್ತು ಲಿಂಗಾಯತ ಶೆಟ್ಟರು ತೇರು ಸಿದ್ಧಪಡಿಸುತ್ತಾರೆ. ಉಪ್ಪಾರ ಶೆಟ್ಟರದ್ದು ಹೂವಿನ ಅಲಂಕಾರ ಮಾಡುವ ಜವಾಬ್ದಾರಿ. ನೈವೇದ್ಯಕ್ಕೆ ಹೊಸ ಮಡಿಕೆ ಇಡುವುದು ಕುಂಬಾರಶೆಟ್ಟರ ಹೊಣೆ. ಪರಿಶಿಷ್ಟರು ಚಪ್ಪರ ಹಾಕಿ ಕೊಂಬು, ಕಹಳೆ, ತಮಟೆ ವಾದ್ಯ ನುಡಿಸುತ್ತಾರೆ.

ಈ ಹಿಂದೆ 20 ರಿಂದ 30 ಮಂದಿ ಕೊಂಡ ಹಾಯುತ್ತಿದ್ದರು. ನೂಕುನುಗ್ಗಲಿನ ಪರಿಣಾಮ ಕೊಂಡದ ಮೇಲೆ ಬಿದ್ದು ಗಾಯಗೊಂಡಂಥ ಘಟನೆಗಳೂ ನಡೆದಿವೆ. ಈ ಹಿನ್ನೆಲೆಯಲ್ಲಿ ಒಬ್ಬರು ಮಾತ್ರ ಕೊಂಡ ಹಾಯುವ ಪದ್ಧತಿ ಚಾಲ್ತಿಗೆ ಬಂದಿದ್ದು, ಕಳೆದ ಹತ್ತಾರು ವರ್ಷಗಳಿಂದಲೂ ಶಿವಣ್ಣ ಎಂಬುವರು ಕೊಂಡ ಹಾಯುತ್ತಿದ್ದು, ಈ ವರ್ಷವೂ ಮೈನವಿರೇಳುವಂತೆ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.