ಚಾಮರಾಜನಗರ: ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಒಂದಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಭಕ್ತಸಾಗರವೇ ಹರಿದು ಬರುತ್ತಿದ್ದು, ಸೋಮವಾರ ಒಂದೇ ದಿನ ಬರೋಬ್ಬರಿ 19.5 ಲಕ್ಷ ರೂಪಾಯಿ ಸೇವೆಗಳಿಂದಲೇ ಬಂದಿದೆ.
ಎಲ್ಲ ಸೇವೆಗಳಿಗೆ ಅನುಮತಿ ಸಿಕ್ಕ ಹಿನ್ನೆಲೆಯಲ್ಲಿ ಬೆಟ್ಟಕ್ಕೆ ಭಕ್ತಸಾಗರವೇ ಹರಿದು ಬರುತ್ತಿದೆ. ಮುಡಿ ಸೇವೆಯಿಂದ 1,16,750 ರೂ.ಬಂದಿದ್ದು, 12 ಕೆಜಿ ಉದ್ದಕೂದಲು ಸಂಗ್ರಹವಾಗಿದೆ. ಚಿನ್ನದ ರಥ, ಬಸವ, ರುದ್ರಾಕ್ಷಿ ವಾಹನ, ಹುಲಿ ವಾಹನ ಸೇವೆ ಮೂಲಕ ಬರೋಬ್ಬರಿ 12,62,206 ರೂ. ವರಮಾನ ಬಂದಿದ್ದು, ಲಾಡು ಪ್ರಸಾದದಿಂದ 5,74,600 ಲಕ್ಷ ರೂ. ಸಂಗ್ರವಾಗಿರುವುದು ಭಕ್ತಸಾಗರಕ್ಕೆ ಸಾಕ್ಷಿಯಾಗಿದೆ. ಸೇವೆ ಮತ್ತು ಲಾಡು ಪ್ರಸಾದ ಕೊಳ್ಳುವವರಿಂದ 25 ಸಾವಿರಕ್ಕೂ ಹೆಚ್ಚು ಲಡ್ಡುಗಳು ಖಾಲಿಯಾಗಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ.
ಶನಿವಾರ ಒಂದೇ ದಿನ ವಿವಿಧ ಸೇವೆಗಳಿಂದ 10 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹವಾದರೇ ಸೋಮವಾರ 19.5 ಲಕ್ಷ ರೂ. ಆದಾಯ ದುಪ್ಪಟ್ಟಾಗಿದೆ. ದೀಪವಾಳಿ ಜಾತ್ರೆ, ಮಲೆಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಳ್ಳುವವರ ಸಂಖ್ಯೆ ಅಧಿಕಗೊಳ್ಳುತ್ತಿರುವುದರಿಂದ ಕೊರೊನಾ ಬಳಿಕ ದೇಗುಲ ಆದಾಯ ಚೇತರಿಕೆ ಕಾಣುತ್ತಿದೆ. ನಿರಂತರ ಜೋರು ಮಳೆಯಾಗುತ್ತಿದ್ದರೂ ಲೆಕ್ಕಿಸದ ಮಾದಪ್ಪನ ಭಕ್ತರು ಭಕ್ತಿ ಪರಾಕಷ್ಠೆ ಮೆರೆಯುತ್ತಿದ್ದಾರೆ.
ಮಲೆಮಹದೇಶ್ವರ ಬೆಟ್ಟಕ್ಕೆ ಹರಿದು ಬಂದ ಭಕ್ತ ಸಾಗರ: ಒಂದೇ ದಿನ 19.5 ಲಕ್ಷ ರೂ.ಸಂಗ್ರಹ - ಚಾಮರಾಜನಗರ
ಕೋವಿಡ್ ನಿರ್ಬಂಧಗಳು ತೆರವುಗೊಳಿಸಿದ ಬಳಿಕ ಒಂದಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಭಕ್ತಸಾಗರವೇ ಹರಿದು ಬರುತ್ತಿದ್ದು, ಮಲೆ ಮಹದೇಶ್ವರ ಸಂಪಾದನೆ ಕೂಡ ಹೆಚ್ಚಾಗುತ್ತಿದೆ.