ಕೊಳ್ಳೇಗಾಲ(ಚಾಮರಾಜನಗರ): ಕೂಲಿ ಅರಸಿ ನಾಲ್ಕು ಮಕ್ಕಳು, ಹೆಂಡತಿಯೊಂದಿಗೆ ಬಂದ ಮೈಸೂರು ಜಿಲ್ಲೆಯಲ್ಲಿಂದ ಬಂದ ವ್ಯಕ್ತಿಯ ಕುಟುಂಬವೊಂದು ಲಾಕ್ಡೌನ್ನಿಂದಾಗಿ ಬೀದಿಗೆ ಬಿದ್ದಿದೆ. ಇತ್ತ ಸೂರು ಇಲ್ಲದೇ, ಅತ್ತ ಉದ್ಯೋಗವೂ ಇಲ್ಲದೇ ಅಕ್ಷರಶಃ ಕಂಗಾಲಾಗಿದೆ.
ಎರಡು ವರ್ಷಗಳಿಂದ ತಾಲೂಕಿನ ಸತ್ತೇಗಾಲ ಗ್ರಾಮ ಪಂಚಾಯತ್ನಲ್ಲಿ ದಿನಗೂಲಿ ಕೆಲಸ ಮಾಡಿಕೊಂಡಿದ್ದ ರಾಜು ಕುಟುಂಬ, ಗ್ರಾಮದ ಬಸ್ ನಿಲ್ದಾಣದಲ್ಲಿ ವಾಸವಾಗಿತ್ತು. ಮೈಸೂರಿನ ನರಸೀಪುರದಿಂದ ಬಂದ ಈ ಕುಟುಂಬಕ್ಕೆ ಸೂರಿನ ಅವಶ್ಯಕತೆ ಇದೆ. ಸರ್ಕಾರ ಕಷ್ಟಕ್ಕೆ ಸ್ಪಂದಿಸಬೇಕಿದೆ ರಾಜು ಬೇಡಿಕೊಂಡಿದ್ದಾನೆ.
ಪತ್ನಿ ಸೇರಿದಂತೆ ನಾಲ್ಕು ಮಕ್ಕಳ ಭವಿಷ್ಯ ನೋಡಿಕೊಳ್ಳಬೇಕಿದೆ. ಜೀವನ ನಿರ್ವಹಣೆ ತುಂಬ ಕಷ್ಟವಾಗಿದೆ. ಕೂಡಲೇ ಸರ್ಕಾರ ಸೂರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಕೂಲಿ ಕಾರ್ಮಿಕ ರಾಜು ಮೊರೆಯಿಟ್ಟಿದ್ದಾನೆ.