ETV Bharat / state

5 ವರ್ಷಗಳ ಬಳಿಕ ಹೆಚ್ಚಾಯ್ತು ಮಾದಪ್ಪನ ಲಡ್ಡು ದರ... ಕಾರಣ ಹೀಗಿದೆ

author img

By

Published : Nov 8, 2020, 10:18 PM IST

ಲಾಡು ವಿಭಾಗದಲ್ಲಿ ಸೇವೆ ಸಲ್ಲಿಸುವ ಖಾಯಂ ಸಿಬ್ಬಂದಿಗಳ ವೇತನ‌ ಶೇ. 35% ಏರಿಕೆ ಆಗಿದೆ. ಹೊರಗುತ್ತಿಗೆ ನೌಕರರ ಸಂಬಳ ಶೇಕಡಾ 30% ಹೆಚ್ಚಾಗಿದ್ದು, ನಷ್ಟದ ಪ್ರಮಾಣ ಕಡಿಮೆ ಮಾಡಲು ದರ ಏರಿಕೆ ಮಾಡಲಾಗಿದೆ.

Mahadeshwara temple
5 ವರ್ಷಗಳ ಬಳಿಕ ಹೆಚ್ಚಾಯ್ತು ಮಾದಪ್ಪನ ಲಡ್ಡು ದರ

ಚಾಮರಾಜನಗರ: ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಒಂದಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿನ ಲಾಡು ಪ್ರಸಾದದ ದರ ಇಂದಿನಿಂದ ಹೆಚ್ಚಾಗಿದೆ.

100 ಗ್ರಾಂನ ಒಂದು ಲಾಡುವಿಗೆ ಈ ಹಿಂದೆ 20 ರೂ. ಇತ್ತು. ಈಗ 25 ರೂ. ಆಗಿದೆ.‌ ಉಳಿದ ಸೇವೆಗಳ ದರದಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳಲಾಗಿದೆ.‌ ದರ ಹೆಚ್ಚಳ ಕುರಿತು ಪ್ರಾಧಿಕಾರದ ಉಪಾಧ್ಯಕ್ಷರಾದ ಸಚಿವ ಸುರೇಶ್ ಕುಮಾರ್ ಅವರಿಂದ ಅನುಮೋದನೆ ಪಡೆಯಲಾಗಿದೆ ಎಂದು ಈಟಿವಿ ಭಾರತಕ್ಕೆ ಬೆಟ್ಟದ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದ್ದಾರೆ.

2015 ರಲ್ಲಿದ್ದ ಸಾಮಾಗ್ರಿಗಳ ದರ ಶೇ. 50 ರಷ್ಟು ಹೆಚ್ಚಾಗಿದೆ.‌ ಲಾಡು ವಿಭಾಗದಲ್ಲಿ ಸೇವೆ ಸಲ್ಲಿಸುವ ಖಾಯಂ ಸಿಬ್ಬಂದಿಗಳ ವೇತನ‌ ಶೇ. 35% ಏರಿಕೆ ಆಗಿದೆ. ಹೊರಗುತ್ತಿಗೆ ನೌಕರರ ಸಂಬಳ ಶೇಕಡಾ 30% ಹೆಚ್ಚಾಗಿದ್ದು, ನಷ್ಟದ ಪ್ರಮಾಣ ಕಡಿಮೆ ಮಾಡಲು ದರ ಏರಿಕೆ ಮಾಡಲಾಗಿದೆ. ಕೊರೊನಾ‌ ಸಂಕಷ್ಟದ ಸಮಯದಲ್ಲಿ ಪ್ರತಿ ಕೆಜಿಗೆ 100 ರೂ. ಏರಿಸುವ ಬದಲು 50 ರೂ. ಹೆಚ್ಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.