ಚಾಮರಾಜನಗರ: ಸಾರಿಗೆ ನೌಕರರ ಮುಷ್ಕರದ 2ನೇ ದಿನವಾದ ಇಂದು ಮಧ್ಯಾಹ್ನ 1.30ರ ಸುಮಾರಿಗೆ ಕೊಳ್ಳೇಗಾಲದಿಂದ ಚಾಮರಾಜನಗರಕ್ಕೆ ಸಾರಿಗೆ ಸಂಸ್ಥೆ ಬಸ್ವೊಂದು ಆಗಮಿಸಿದೆ. ರಾಜ್ಯದಾದ್ಯಂತ ಮುಷ್ಕರ ನಡೆಯುತ್ತಿದ್ದು, ಈ ನಡುವೆ ಕೊಳ್ಳೇಗಾಲದಿಂದ ಚಾಮರಾಜನಗರಕ್ಕೆ ಕೆಎಸ್ಆರ್ಟಿಸಿ ಬಸ್ವೊಂದು ಆಗಮಿಸಿದೆ.
ಚಾಲಕ ಕಂ ನಿರ್ವಾಹಕರೊಬ್ಬರು ಮುಖಕ್ಕೆ ಬಟ್ಟೆ ಸುತ್ತಿಕೊಂಡು ಭಯದ ನಡುವೆಯೇ 20 ಮಂದಿ ಪ್ರಯಾಣಿಕರನ್ನು ಕೊಳ್ಳೇಗಾಲದಿಂದ ಚಾಮರಾಜನಗರಕ್ಕೆ ಕರೆತಂದಿದ್ದಾರೆ.
ಪೊಲೀಸರು ಚಾಲಕನಿಗೆ ಧೈರ್ಯ ತುಂಬಿದ್ದು, ಸಾರಿಗೆ ಸಂಸ್ಥೆಯ ಅಧಿಕಾರಿಯೊಬ್ಬರು ಚಾಲಕನೊಂದಿಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. KSRTC ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ಗಳು ಕೂಡ ಸೇವೆ ನೀಡುತ್ತಿದ್ದು, ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
8 ಬಸ್ ಸಂಚಾರ:
ಇಂದು ಚಾಮರಾಜನಗರದಿಂದ ಮೈಸೂರಿಗೆ, ಕೊಳ್ಳೇಗಾಲ, ಹನೂರು, ಗುಂಡ್ಲುಪೇಟೆ ಮತ್ತು ಕೊಳ್ಳೇಗಾಲದಿಂದ ಮೈಸೂರಿಗೆ, ಕೊಳ್ಳೇಗಾಲದಿಂದ ಚಾಮರಾಜನಗರಕ್ಕೆ ಒಟ್ಟು 8 ಬಸ್ ಸಂಚಾರ ನಡೆಸಿದ್ದು, 25 ಸಾವಿರ ರೂ. ಸಂಗ್ರಹವಾಗಿದೆ. ನಾಳೆ 20-25 ಬಸ್ಗಳು ಸಂಚಾರ ಆರಂಭಿಸುವ ನಿರೀಕ್ಷೆ ಇದ್ದು, ಮನವೊಲಿಸುವ ಪ್ರಯತ್ನ ಮಾಡುತ್ತಿದ್ದೇವೆ. ಇಂದು ಕೂಡ 50 ಲಕ್ಷ ರೂ. ನಷ್ಟುವಾಗಿದೆ ಎಂದು KSRTC ಚಾಮರಾಜನಗರ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ತಿಳಿಸಿದರು.