ಚಾಮರಾಜನಗರ: ಇಂದಿನಿಂದ 3 ದಿನಗಳ ಕಾಲ ಬಿಳಿಗಿರಿ ರಂಗನ ಬೆಟ್ಟದಲ್ಲಿ 7ನೇ ಆವೃತ್ತಿಯ ಕರ್ನಾಟಕ 'ಹಕ್ಕಿಹಬ್ಬ'ಕ್ಕೆ ಚಾಲನೆ ಸಿಕ್ಕಿದ್ದು, ಪಕ್ಷಿಗಳ ಕಲರವಕ್ಕೆ ಕಿವಿಯಾಗಬಹುದಾಗಿದೆ.
ಬಿಳಿಗಿರಿ ರಂಗನ ಬೆಟ್ಟದ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಆವರಣದಲ್ಲಿ ನಡೆದ ಕರ್ನಾಟಕ ಹಕ್ಕಿ ಹಬ್ಬಕ್ಕೆ ಶಾಸಕ ಎನ್.ಮಹೇಶ್ ಚಾಲನೆ ನೀಡಿದರು. ಇದೇ ವೇಳೆ, ವನ್ಯಜೀವಿ ವಿಭಾಗದ ಪಿಸಿಸಿಎಫ್ ಅಜಯ್ ಮಿಶ್ರಾ, ಅರಣ್ಯ ವಿಭಾಗದ ಸರ್ಕಾರದ ಮುಖ್ಯಕಾರ್ಯದರ್ಶಿ ಸಂದೀಪ್ ದಾವೆ, ಚಾಮರಾಜನಗರ ಸಿಸಿಎಫ್ ಮನೋಜ್ ಕುಮಾರ್, ಡಿಸಿಎಫ್ಗಳಾದ ಸಂತೋಷ್ ಕುಮಾರ್, ಏಡುಕುಂಡಲು ಹಕ್ಕಿಗಳ ಸ್ಟ್ಯಾಂಪ್ ಬಿಡುಗಡೆ ಮಾಡಿದರು.
ಓದಿ: ಪುರಸಭೆ ಸದಸ್ಯೆಯರ ತಳ್ಳಾಟ-ನೂಕಾಟ ಪ್ರಕರಣ: 31 ಜನರ ವಿರುದ್ಧ ಕೇಸ್ ದಾಖಲು
ವನ್ಯಜೀವಿ ವಿಭಾಗದ ಪಿಸಿಸಿಎಫ್ ಅಜಯ್ ಮಿಶ್ರಾ ಅವರು ಮಾತನಾಡಿ, ಅಳಿವಿನ ಅಂಚಿನಲ್ಲಿರುವ ಅಪರೂಪದ ಪಕ್ಷಿಗಳ ಬಗ್ಗೆ ಜಾಗೃತಿ ಮೂಡಿಸಲು ಹಕ್ಕಿಹಬ್ಬ ಆಚರಣೆ ಪ್ರಮುಖವಾಗಿದೆ. ಬಿಳಿಗಿರಿ ರಂಗನಬೆಟ್ಟ ಪಶ್ಚಿಮ ಹಾಗೂ ಪೂರ್ವ ಘಟ್ಟಗಳು ಸೇರುವ ಪ್ರದೇಶವಾಗಿದೆ. ಹೀಗಾಗಿ ಇಲ್ಲಿ 250 ಕ್ಕೂ ಹೆಚ್ಚು ವಿವಿಧ ಜಾತಿಯ ಪಕ್ಷಿಗಳನ್ನು ಕಾಣಬಹುದು. ಹೀಗಾಗಿ ಇಲ್ಲಿ ಹಕ್ಕಿಹಬ್ಬವನ್ನು ಹಮ್ಮಿಕೊಳ್ಳಲಾಗಿದ್ದು, ಈ ಆವೃತ್ತಿಯ ಹಕ್ಕಿಹಬ್ಬದ ರಾಯಭಾರಿ 'ಹದ್ದು' ಎಂದು ತಿಳಿಸಿದರು.
ಪರಿಸರ ಪ್ರವಾಸೋದ್ಯಮವನ್ನು ಬಲಪಡಿಸುವುದು ಅರಣ್ಯ ಇಲಾಖೆಯ ಬಹುಮುಖ್ಯ ಕಾರ್ಯವಾಗಿದೆ. ಸುಮಾರು 500ಕ್ಕೂ ಹೆಚ್ಚು ವಿವಿಧ ಜಾತಿಯ ಪಕ್ಷಿಗಳಿವೆ. ಈ ಪಕ್ಷಿಗಳ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಬಹುಮುಖ್ಯವಾಗಿದೆ. ಹೀಗಾಗಿ ಪೂರ್ವ ಮತ್ತು ಪಶ್ಚಿಮ ಘಟ್ಟಗಳು ಸೇರುವ ಪ್ರದೇಶವಾಗಿರುವ ಬಿಳಿಗಿರಿ ರಂಗನಬೆಟ್ಟದಲ್ಲಿ 7ನೇ ಆವೃತ್ತಿಯ ಹಕ್ಕಿಹಬ್ಬವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಇದಕ್ಕೂ ಮುನ್ನ ಶಾಸಕ ಎನ್.ಮಹೇಶ್ ಮಾತನಾಡಿ, ಕಾಡು ಹಾಗೂ ಪ್ರಾಣಿಗಳನ್ನು ಸಂರಕ್ಷಣೆ ಮಾಡುವಷ್ಟೇ ಮುಖ್ಯವಾಗಿ ಗಿರಿಜನರ ರಕ್ಷಣೆಗೆ ಮುಂದಾಗಬೇಕು ಎಂದರು.