ಗುಂಡ್ಲುಪೇಟೆ (ಚಾಮರಾಜನಗರ): ತಾಲೂಕಿನ ಬರಗಿ ಅರಣ್ಯದ ಎಎನ್ಎಫ್ ಕ್ಯಾಂಪ್ ವಾಪ್ತಿಯಲ್ಲಿ ಬರುವ ಕಾಡಂಚಿನ ಗ್ರಾಮಗಳಲ್ಲಿರುವ ನಿರುದ್ಯೋಗಿ ಯುುವಕರಿಗೆ ಉದ್ಯೋಗ ಮಾಹಿತಿ ಕಿರು ಹೊತ್ತಿಗೆಯನ್ನು ಉಚಿತವಾಗಿ ನೀಡಲಾಯಿತು.
ನಕ್ಸಲ್ ನಿಗ್ರಹ ದಳದ ಪೊಲೀಸ್ ಅಧೀಕ್ಷಕರು ಹಾಗೂ ಚಾಮರಾಜನಗರ ಜಿಲ್ಲಾ ಪೊಲೀಸ್ ಅಧೀಕ್ಷಕರ ಸಹಯೋಗದೊಂದಿಗೆ ಬರಗಿ ಎಎನ್ಎಫ್ ಕ್ಯಾಂಪ್ ವ್ಯಾಪ್ತಿಯಲ್ಲಿ ಬರುವ ಕಾಡಂಚಿನ ಗ್ರಾಮಗಳಲ್ಲಿರುವ ನಿರುದ್ಯೋಗಿ ಯುವಕ-ಯುವತಿಯರಿಗೆ ಅಗ್ನಿಶಾಮಕ ದಳದ ನೇಮಕಾತಿ, ಪೊಲೀಸ್ ಇಲಾಖೆ ನೇಮಕಾತಿ, ಅರಣ್ಯ ಇಲಾಖೆ ನೇಮಕಾತಿಗಳ ಬಗ್ಗೆ ಯುವಕರಿಗೆ ಅರ್ಜಿ ಹಾಕುವಂತೆ ತಿಳಿಸಿ, ಅಧಿಸೂಚನೆಯ ಕರಪತ್ರವನ್ನು ಯುವಕರಿಗೆ ಹಂಚಲಾಯಿತು.
ಈ ವೇಳೆ ಮಾತನಾಡಿದ ನಕ್ಸಲ್ ನಿಗ್ರಹ ಪಡೆಯ ಡಿಎಸ್ಪಿ ಪ್ರಸನ್ನಕುಮಾರ್, ಕಾಡಂಚಿನ ಗ್ರಾಮದ ಯುವಕರಿಗೆ ಸರ್ಕಾರದ ಉದ್ಯೋಗದ ಕುರಿತು ಮಾಹಿತಿ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಅವರು ಇದುವರೆಗೂ ಹೆಚ್ಚಿನ ಉದ್ಯೋಗ ದೊರಕಿಸಿಕೊಳ್ಳಲು ಸಾಧ್ಯವಾಗಿಲ್ಲ.
ಈಗ ನಾವು ನೀಡಿರುವ ಕಿರುಹೊತ್ತಿಗೆಯಲ್ಲಿ ಉದ್ಯೋಗದ ಕುರಿತು ಎಲ್ಲಾ ರೀತಿಯ ಮಾಹಿತಿ ಇದೆ. ಇದರ ಸದುಪಯೋಗವನ್ನು ಕಾಡಂಚಿನ ಯುವಕ-ಯುವತಿಯರು ಪಡೆದುಕೊಳ್ಳಬೇಕೆಂದು ತಿಳಿಸಿದರು. ಈ ಸಂಧರ್ಭದಲ್ಲಿ ಸಬ್ ಇನ್ಸ್ಪೆಕ್ಟರ್ ಯುವರಾಜ್, ಸಿಬ್ಬಂದಿ ವರ್ಗದವರಾದ ಮಹದೇವಪ್ರಸಾದ್, ಶಿವಕುಮಾರ್, ಕಾಳಯ್ಯ ಸೇರಿದಂತೆ ಇತರರು ಇದ್ದರು.