ಚಾಮರಾಜನಗರ: ತ್ಯಾಗ, ಬಲಿದಾನ, ಹೋರಾಟದಿಂದ ಪಡೆದ ಸ್ವಾತಂತ್ರ್ಯದ 73ನೇ ವರ್ಷವನ್ನು ಜಿಲ್ಲೆಯಾದ್ಯಂತ ಸಡಗರದಿಂದ ಶಾಲಾ-ಕಾಲೇಜು, ಸ್ಥಳೀಯ ಅಡಳಿತ ಸಂಸ್ಥೆಗಳು ಮತ್ತು ಸಂಘ-ಸಂಸ್ಥೆಗಳು ಆಚರಿಸಿದವು.
ಜಿಲ್ಲಾಡಳಿತ ಮತ್ತು ಜಿ.ಪಂ. ಸಂಯುಕ್ತಾಶ್ರಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಧ್ವಜಾರೋಹಣ ನೆರವೇರಿಸುವ ಮೂಲಕ ಧ್ವಜಾರೋಹಣ ನೆರವೇರಿಸಿದ ಜಿಲ್ಲೆಯ ಎರಡನೇ ಡಿಸಿ ಎಂಬ ಶ್ರೇಯಕ್ಕೆ ಪಾತ್ರರಾದರು. ಈ ಹಿಂದೆ ರಾಷ್ಟ್ರಪತಿ ಆಡಳಿತದ ವೇಳೆ ಅಂದಿನ ಚಾಮರಾಜನಗರ ಡಿಸಿಯಾಗಿದ್ದ ಹರ್ಷಗುಪ್ತ ಧ್ವಜಾರೋಹಣ ಮಾಡಿದ್ದರು. ಇಂದು ಜಿಲ್ಲಾ ಉಸ್ತುವಾರಿ ಸಚಿವರಿಲ್ಲದ ಕಾರಣ ಡಿಸಿ ಧ್ವಜಾರೋಹಣ ಮಾಡಿದರು.
ಟಿಬೆಟ್ಟಿಯನ್ನ ಸಂಭ್ರಮ
ಒಡೆಯರಪಾಲ್ಯದಲ್ಲಿನ ಟಿಬೆಟಿಯನ್ ಕ್ಯಾಂಪ್ ನಲ್ಲಿನ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ದಿನ ಆಚರಿಸಲಾಯಿತು. ಬೌದ್ಧ ಬಿಕ್ಕುಗಳು, ಸ್ಥಳೀಯರು ಕಾರ್ಯಕ್ರಮದ ಮೆರಗು ಹೆಚ್ಚಿಸಿದರು. ಬಂಡೀಪುರ ಕ್ಯಾಂಪಸ್ ನಲ್ಲಿ ಧ್ವಜಾರೋಹಣ ನೆರವೇರಿಸಿ ಸಿಹಿ ವಿತರಿಸಲಾಯಿತು. ಉಳಿದಂತೆ, ಸ್ಥಳೀಯ ಸಂಸ್ಥೆಗಳು, ಶಾಲಾ-ಕಾಲೇಜುಗಳಲ್ಲಿ ಹೆಮ್ಮೆಯಿಂದ ಸ್ವಾತಂತ್ರ್ಯ ಹಬ್ಬ ಜರುಗಿತು.