ETV Bharat / state

ಚಾಮರಾಜನಗರ: 98 ಶಾಲಾ ವಿದ್ಯಾರ್ಥಿಗಳು ಸೇರಿ 419 ಮಂದಿಗೆ ಕೊರೊನಾ,ಓರ್ವ ಸೋಂಕಿತ ಸಾವು - ಚಾಮರಾಜನಗರದಲ್ಲಿ 98 ವಿದ್ಯಾರ್ಥಿಗಳಿಗೆ ಕೊರೊನಾ

ಮೂರನೇ ಅಲೆಯಲ್ಲಿ ಕೊರೊನಾ ಸೋಂಕಿಗೆ ಎರಡನೇ ವ್ಯಕ್ತಿಯೊಬ್ಬರು ಇಂದು ಬಲಿಯಾಗಿದ್ದಾರೆ‌‌. ಯಳಂದೂರು ತಾಲೂಕಿನ ಹೊನ್ನೂರು ಗ್ರಾಮದ 45 ವರ್ಷದ ವ್ಯಕ್ತಿಯೊಬ್ಬರು ಅಸುನೀಗಿದ್ದು ಇವರು 18 ರಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

including 98 students 419 Covid cases found  in Chamarajanagar
ಚಾಮರಾಜನಗರ ಕೋವಿಡ್​ 19 ಅಪ್​ಡೇಟ್​
author img

By

Published : Jan 23, 2022, 7:38 AM IST

ಚಾಮರಾಜನಗರ: ಜಿಲ್ಲೆಯಲ್ಲಿ ಕೊರೊನಾ ಏರುಗತಿ ಕಂಡಿದ್ದು ಶನಿವಾರ ಹೊಸದಾಗಿ 419 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ 1911 ಕ್ಕೆ ಏರಿಕೆಯಾಗಿದೆ‌.

ಶನಿವಾರ ಹೊಸ ಪ್ರಕರಣಗಳಲ್ಲಿ ಹೊಂಡರಬಾಳಿನಲ್ಲಿರುವ ನವೋದಯ ಶಾಲೆಯ 25 ಮಂದಿ ವಿದ್ಯಾರ್ಥಿಗಳು, ಉಡಿಗಾಲದ ಜೆಎಸ್ಎಸ್ ಶಾಲೆಯ 20 ವಿದ್ಯಾರ್ಥಿಗಳು ಸೇರಿದಂತೆ 98 ವಿದ್ಯಾರ್ಥಿಗಳಿಗೆ ಕೊರೊನಾ ವಕ್ಕರಿಸಿದ್ದು ಶಾಲಾ ವಿದ್ಯಾರ್ಥಿಗಳಲ್ಲೇ ಹೆಚ್ಚು ಸೋಂಕು ಬಾಧಿಸುತ್ತದೆ‌. ಬಹುತೇಕ ಎಲ್ಲರೂ ಹೋಂ ಐಸೋಲೇಷನ್​ನಲ್ಲೇ ಇದ್ದು ಆರೋಗ್ಯವಾಗಿದ್ದಾರೆಂದು ಆರೋಗ್ಯ ಇಲಾಖೆ ತಿಳಿಸಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಶನಿವಾರ 100 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದು 1379 ಮಂದಿ ಹೋಂ ಐಸೋಲೇಷನ್ ನಲ್ಲಿದ್ದಾರೆ. ಇಂದು 3711 ಮಂದಿ ಪ್ರಾಥಮಿಕ, ದ್ವಿತೀಯ ಸಂಪರ್ಕಿತರ ಮೇಲೆ ನಿಗಾ ಇರಿಸಿದ್ದು 2 ಸಾವಿರಕ್ಕೂ ಅಧಿಕ ಮಂದಿಗೆ ಕೋವಿಡ್ ಟೆಸ್ಟ್‌ ನಡೆಸಲಾಗಿದೆ‌.

ಮೂರನೇ ಅಲೆಯಲ್ಲಿ ಕೊರೊನಾ ಸೋಂಕಿಗೆ ಎರಡನೇ ವ್ಯಕ್ತಿಯೊಬ್ಬರು ಶನಿವಾರ ಬಲಿಯಾಗಿದ್ದಾರೆ‌‌. ಯಳಂದೂರು ತಾಲೂಕಿನ ಹೊನ್ನೂರು ಗ್ರಾಮದ 45 ವರ್ಷದ ವ್ಯಕ್ತಿಯೊಬ್ಬರು ಅಸುನೀಗಿದ್ದು ಇವರು 18 ರಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇದನ್ನೂ ಓದಿ:ರಾಜ್ಯದಲ್ಲಿಂದು 42,470 ಜನರಿಗೆ ಕೊರೊನಾ ಪಾಸಿಟಿವ್.. 35 ಸಾವಿರಕ್ಕೂ ಹೆಚ್ಚು ಮಂದಿ ಚೇತರಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.