ETV Bharat / state

ಅಕ್ರಮ ಅಡುಗೆ ಅನಿಲ ಮಾರಾಟ: ಚಾಮರಾಜನಗರದಲ್ಲಿ ಓರ್ವನ ಬಂಧನ

ಅಕ್ರಮವಾಗಿ ಅಡುಗೆ ಅನಿಲ ಸಿಲಿಂಡರ್​​ಗಳನ್ನು(Illegal cooking Gas sale) ದಾಸ್ತಾನಿಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಆಹಾರ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತನಿಂದ 4 ಗೃಹ ಬಳಕೆ ಸಿಲಿಂಡರ್ ಹಾಗೂ 111 ವಾಣಿಜ್ಯ ಬಳಕೆ ಸಿಲಿಂಡರ್​​ಗಳನ್ನು ವಶಪಡಿಸಿಕೊಂಡಿದ್ದಾರೆ.

Illegal cooking gas sale
ಅಕ್ರಮ ಅಡುಗೆ ಅನಿಲ ಮಾರಾಟ: ಚಾಮರಾಜನಗರದಲ್ಲಿ ಓರ್ವನ ಬಂಧನ
author img

By

Published : Nov 20, 2021, 11:26 AM IST

ಚಾಮರಾಜನಗರ: ಅಕ್ರಮವಾಗಿ ಅಡುಗೆ ಅನಿಲ ಸಿಲಿಂಡರ್​​ಗಳನ್ನು(Illegal cooking gas sale) ದಾಸ್ತಾನಿಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ದಂಧೆಯೊಂದನ್ನು ಆಹಾರ ಇಲಾಖೆ ಪತ್ತೆಹಚ್ಚಿ, ಓರ್ವನನ್ನು ಬಂಧಿಸಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.‌

ಚಾಮರಾಜನಗರ ತಾಲೂಕಿನ‌ ಬೇಡರಪುರ ಗ್ರಾಮದ ಜಗದೀಶ್ ಬಂಧಿತ ಮಾರಾಟಗಾರ. ನಗರದ ರೈಲ್ವೆ ನಿಲ್ದಾಣ ಸಮೀಪದ ಮಾಂಗಲ್ಯ ಕಲ್ಯಾಣ ಮಂಟಪದ ಹಿಂಭಾಗ ಹಳೆಯ ಮನೆಯಲ್ಲಿ ದಂಧೆ ನಡಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಆಹಾರ ಇಲಾಖೆ ಉಪ ನಿರ್ದೇಶಕ ಯೋಗಾನಂದ್ ನೇತೃತ್ವದಲ್ಲಿ ಕಂದಾಯ ನಿರೀಕ್ಷಕ ರಾಜಣ್ಣ ತಂಡ ದಾಳಿ ನಡೆಸಿ 4 ಗೃಹ ಬಳಕೆ ಸಿಲಿಂಡರ್ ಹಾಗೂ 111 ವಾಣಿಜ್ಯ ಬಳಕೆ ಸಿಲಿಂಡರ್​​ಗಳನ್ನು ವಶಪಡಿಸಿಕೊಂಡಿದ್ದಾರೆ.

ಸದ್ಯ, ಆರೋಪಿ ಜಗದೀಶ್ ಹಾಗೂ ಒಟ್ಟು 115 ಸಿಲಿಂಡರ್, 1 ಬೊಲೆರೊ ಪಿಕ್ಅಪ್ ವಾಹನ ಹಾಗೂ 1 ಗೂಡ್ಸ್ ಆಟೋವನ್ನು ಆಹಾರ ಇಲಾಖೆ ಅಧಿಕಾರಿಗಳು ಮುಂದಿನ ಕ್ರಮಕ್ಕಾಗಿ ಚಾಮರಾಜನಗರ ಗ್ರಾಮಾಂತರ ಪೊಲೀಸರಿಗೆ ಒಪ್ಪಿಸಿ, ಪ್ರಕರಣ ದಾಖಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.