ETV Bharat / state

ನೈತಿಕತೆ ಇದ್ದರೆ ಶಾಸಕ ಎನ್. ಮಹೇಶ್ ರಾಜೀನಾಮೆಗೆ ನೀಡಲಿ: ಬಿಎಸ್​ಪಿ ಒತ್ತಾಯ

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ಹಿಡಿಯಲು ಎನ್. ಮಹೇಶ್ ಪ್ರಮುಖ ಕಾರಣ ಎಂದು ಜಲಸಂಪನ್ಮೂಲ ಸಚಿವರು ಹೇಳಿಕೆ ನೀಡಿದ ಬೆನ್ನಲ್ಲೇ ಬಿಎಸ್​ಪಿ ಕಾರ್ಯಕರ್ತರು, ಶಾಸಕ. ಎನ್ ಮಹೇಶ್ ರಾಜೀನಾಮೆಗೆ ಒತ್ತಾಯಿಸಿದ್ದಾರೆ.

author img

By

Published : May 31, 2020, 5:04 PM IST

If there is morality MLA Mahesh must resign: BSP insists
ನೈತಿಕತೆ ಇದ್ದರೆ ಶಾಸಕ ಎನ್. ಮಹೇಶ್ ರಾಜೀನಾಮೆಗೆ ನೀಡಲಿ: ಬಿಎಸ್​ಪಿ ಒತ್ತಾಯ

ಕೊಳ್ಳೇಗಾಲ(ಚಾಮರಾಜನಗರ): ಮೈತ್ರಿ ಸರ್ಕಾರ ಬಹುಮತ ಸಾಬೀತು ಪಡಿಸಿರುವ ಸಮಯದಲ್ಲಿ ಅಧಿವೇಶನಕ್ಕೆ ಗೈರಾಗಿ ಬಿಎಸ್​ಪಿಯಿಂದ ಉಚ್ಛಾಟನೆಗೊಂಡಿದ್ದ ಶಾಸಕ ಎನ್. ಮಹೇಶ್, ಇಲ್ಲಿಯವರೆಗೂ ಮಾಯಾವತಿ ಹೇಳಿದ ಹಾಗೆ ಕೇಳಿದ್ದೇನೆ ಎನ್ನುತ್ತಿದ್ದಾರೆ. ಆದರೆ ಸಚಿವ ರಮೇಶ್ ಜಾರಕಿಹೊಳಿ ನೀಡಿರುವ ಹೇಳಿಕೆ ಆಧಾರದ ಮೇಲೆ ಬಿಜೆಪಿ ಸರ್ಕಾರದ ರಚನೆಯಲ್ಲಿ ಎನ್. ಮಹೇಶ್ ಪ್ರಮುಖ ಪಾತ್ರಧಾರಿ ಅನ್ನೋದು ಸ್ಪಷ್ಟವಾಗಿದೆ ಎಂದು ಬಿಎಸ್​ಪಿ ಆರೋಪಿಸಿದೆ.

ಶಾಸಕ ಎನ್​ ಮಹೇಶ್​ ರಾಜೀನಾಮೆಗೆ ಬಿಎಸ್​ಪಿ ಒತ್ತಾಯ

ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ತಾಲೂಕು ಬಿ.ಎಸ್.ಪಿ ಅಧ್ಯಕ್ಷ ರಾಜಶೇಖರ್ ಮೂರ್ತಿ, ಕೊಳ್ಳೇಗಾಲ ಕ್ಷೇತ್ರದಲ್ಲಿ ಬಿಎಸ್​ಪಿ ಅಭ್ಯರ್ಥಿಯಾಗಿ ಗೆದ್ದು ಶಾಸಕರಾಗಿರುವ ಎನ್.ಮಹೇಶ್, ಈ ವಿಚಾರವಾಗಿ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು. ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.