ETV Bharat / state

ಬೇಟೆಗೆ ಹೊಂಚು ಹಾಕಿದ್ದ ಪ್ರಕರಣ: 7 ಆರೋಪಿಗಳೊಂದಿಗೆ 7 ನಾಡ ಬಂದೂಕು‌ ವಶ

ಕಾಡು ಪ್ರಾಣಿಗಳನ್ನು ಬೇಟೆಯಾಡಲು ಹೊಂಚು ಹಾಕಿದ್ದ 7 ಮಂದಿ ಆರೋಪಿಗಳ ಜೊತೆಗೆ 7 ನಾಡ ಬಂದೂಕು ವಶಪಡಿಸಿಕೊಂಡಿದ್ದ ಪೊಲೀಸರು, ಮುಂದುವರೆದು ಇಂದು ಪರಾರಿಯಾಗಿದ್ದ ಮತ್ತಿಬ್ಬರನ್ನು ಬಂಧಿಸಿ ಅವರಲ್ಲಿದ್ದ 3 ನಾಡ ಬಂದೂಕನ್ನು ವಶಪಡಿಸಿಕೊಂಡಿದ್ದಾರೆ.

author img

By

Published : Nov 3, 2020, 10:36 PM IST

Chamarajanagar police
ಕೊಳ್ಳೇಗಾಲ

ಕೊಳ್ಳೇಗಾಲ(ಚಾಮರಾಜನಗರ): ತಾಲೂಕಿನ ಜಾಗೇರಿ ಗ್ರಾಮದ ಶಾಂತಿನಗರ ಗವಿರಾಯಸ್ವಾಮಿ ಪ್ರದೇಶದ ಅರಣ್ಯ ಪ್ರದೇಶದ ತಪ್ಪಲಿನಿರುವ ಜಮೀನಿನಲ್ಲಿ ಅಕ್ರಮವಾಗಿ ಬೇಟೆಯಾಡಲು ಸಂಚು ರೂಪಿಸಿದ್ದ 7 ಮಂದಿ ಒಳಗೊಂಡ ತಂಡವನ್ನು ಪೊಲೀಸರು ಬಂಧಿಸಿ ಅವರಲ್ಲಿದ್ದ 7 ನಾಡ ಬಂದೂಕು ಹಾಗೂ ಸಿಡಿಮದ್ದು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳನ್ನು ವಶಪಡಿಸಿಕೊಂಡಿರುವ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ

ಜಾಗೇರಿ ಗ್ರಾಮದ ಶಾಂತಿ ನಗರ ಬಡಾವಣೆಯ ನಿವಾಸಿಗಳಾದ ಜಾನ್‍ಜೋಸ್ಸನ್, ಜಾನ್‍ಬಾಸ್ಕೋ, ಅಂತೋಣಿ, ಹೇಮಂತ್‍ ಸ್ಟಾಲಿನ್, ಭಾಗ್ಯರಾಜು ಎಂಬ ಆರೋಪಿಗಳನ್ನು‌ ನ. 2ರಂದು ಬಂಧಿಸಲಾಗಿತ್ತು. ದಾಳಿಯಲ್ಲಿ ಪರಾರಿಯಾಗಿದ್ದ ಮತ್ತಿಬ್ಬರು ಆರೋಪಿಗಳಾದ ಅಂಥೋಣಿರಾಜ್, ಸೇಸುರಾಜ್ ಎಂಬುವರನ್ನು ಮಂಗಳವಾರ ಬಂಧಿಸಲಾಗಿದೆ.

ಈ ಬಗ್ಗೆ ಇಂದು ಗ್ರಾಮಾಂತರ ಠಾಣೆಯ ಆವರಣದಲ್ಲಿ ಸುದ್ದಿಗೋಷ್ಠಿ ಆಯೋಜಿಸಿದ್ದ ಜಿಲ್ಲಾ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್ ಮಾತನಾಡಿ, ಕಾಡು ಪ್ರಾಣಿಗಳನ್ನು ಬೇಟೆಯಾಡಲು ಇಲ್ಲಿನ ಜಾಗೇರಿ ಶಾಂತಿನಗರ ಗ್ರಾಮದ ಜಮೀನಿನೊಂದರಲ್ಲಿ ಬಂದೂಕು‌ ಹಾಗೂ‌ ಇನ್ನಿತರ ಉಪಕರಣಗಳನ್ನು ಬಚ್ಚಿಡಲಾಗಿದೆ ಎಂಬ ಮಾಹಿತಿ ಆಧಾರಿಸಿದ ಸಿಪಿಐ‌ ಶ್ರೀಕಾಂತ್ ಹಾಗೂ‌ ಪಿಎಸ್ಐ ವಿ.ಸಿ.ಅಶೋಕ್ ತಂಡ, ನ. 2ರ ತಡರಾತ್ರಿ ದಾಳಿ ನಡೆಸಿತ್ತು. ದಾಳಿಯಲ್ಲಿ 4 ನಾಡ ಬಂದೂಕಿನೊಂದಿಗೆ 5 ಮಂದಿ ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಆದರೆ ಇದೇ ವೇಳೆ ಮತ್ತಿಬ್ಬರು ಆರೋಪಿಗಳು ಪರಾರಿಯಾಗಿದ್ದರು. ಇಷ್ಟಕ್ಕೆ ಬಿಡದ ನಮ್ಮ ಪೊಲೀಸರು ಪ್ರಕರಣ ಬೆನ್ನತ್ತಿ ಹೆಚ್ಚಿನ ವಿಚಾರಣೆ ನಡೆಸಿ ತಪ್ಪಿಸಿಕೊಂಡಿದ್ದ ಇನ್ನಿಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ‌ ಯಶಸ್ವಿಯಾಗಿದ್ದಾರೆ. ಅವರಲ್ಲಿದ್ದ 3 ಬಂದೂಕುಗಳನ್ನು ವಶಪಡಿಸಿಕೊಂಡಿದ್ದಾರೆ. ಒಟ್ಟಾರೆ 7 ನಾಡ ಬಂದೂಕಿನೊಂದಿಗೆ 7 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.

ಇದೇ ವೇಳೆ ದಾಳಿಯ ಕಾರ್ಯಾಚರಣೆ ಯಶಸ್ವಿಯಾಗಿ ನಡೆದಿದೆ. ಈ ಹಿನ್ನೆಲೆ ನಮ್ಮ ಸಿಬ್ಬಂದಿಯ ಕಾರ್ಯವೈಖರಿಯನ್ನು ಅಭಿನಂದಿಸುತ್ತೇನೆ. ಕಾರ್ಯಾಚರಣೆ ನಡೆಸಿದ ತಂಡಕ್ಕೆ 15 ಸಾವಿರ ನಗದು ಬಹುಮಾನ ನೀಡಲಾಗುತ್ತದೆ ಎಂದು ದಿವ್ಯಾ ಸಾರಾ ಥಾಮಸ್ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.