ETV Bharat / state

ಗಬ್ಬೆದ್ದು ನಾರುತ್ತಿದ್ದ ಆಸ್ಪತ್ರೆ ಈಗ ಫಳ..ಫಳ.! ಯಾಕೆ ಅನ್ನೋದೆ ಇಂಟ್ರೆಸ್ಟಿಂಗ್​​ - Chamarajnagar hospital news

ಗಬ್ಬು ವಾಸನೆ ಇಲ್ಲದೇ​ ಘಮಘಮ ಪರಿಮಳ. ಅಲ್ಲಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ಜಾಗಗಳೆಲ್ಲಾ ಇದ್ದಕ್ಕಿದ್ದಂತೆ ಸ್ವಚ್ಛ. ಇದೇನು ಈ ಜಿಲ್ಲಾಸ್ಪತ್ರೆ ಇಷ್ಟೊಂದು ಕ್ಲೀನ್​ ಅಂತಾ ಬೆರಗಾಗಬೇಡಿ. ಇದು ಕೇವಲ ಈ ದಿನಕ್ಕೆ ಮಾತ್ರ ಸೀಮತ.

ಜಿಲ್ಲಾಸ್ಪತ್ರೆ
author img

By

Published : Sep 24, 2019, 9:34 PM IST

ಚಾಮರಾಜನಗರ : ಗಬ್ಬು ವಾಸನೆ ಇಲ್ಲದೇ​ ಘಮಘಮ ಪರಿಮಳ. ಅಲ್ಲಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ಜಾಗಗಳೆಲ್ಲಾ ಇದ್ದಕ್ಕಿದ್ದಂತೆ ಸ್ವಚ್ಛ. ಪ್ರತಿ ಕೋಣೆಯ ಮುಂದೆ ಡಸ್ಟ್ ಬಿನ್, ನೆಲದ ಕಸಗುಡಿಸಿ, ಒರೆಸಿ ಶುಚಿ ಮಾಡಿದ ಆಸ್ಪತ್ರೆ ಸಿಬ್ಬಂದಿ. ಅಬ್ಬಾ ಇದೇನು ಈ ಜಿಲ್ಲಾಸ್ಪತ್ರೆ ಇಷ್ಟೊಂದು ಕ್ಲೀನ್​ ಅಂತಾ ಬೆರಗಾಗಬೇಡಿ. ಇದು ಕೇವಲ ಈ ದಿನಕ್ಕೆ ಮಾತ್ರ ಸೀಮಿತ.

ಗಬ್ಬೆದ್ದು ನಾರುತ್ತಿದ್ದ ಆಸ್ಪತ್ರೆ ಈಗ ಫಳಫಳ.!

ಜಿಲ್ಲಾಸ್ಪತ್ರೆ ಈ ರೀತಿ ದಿಢೀರ್ ಶುಚಿಯಾಗಲು ಕಾರಣ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರ ಭೇಟಿ. ಎರಡು ದಿನದ ಜಿಲ್ಲಾ ಪ್ರವಾಸ ಕೈಗೊಂಡಿರುವ ಸಚಿವರು ಇಂದು ಸಂಜೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಲಿದ್ದಾರೆ. ರೋಗಿಗಳ ಕುಂದು-ಕೊರತೆಗಳನ್ನು ಆಲಿಸಲಿದ್ದು, ರಾತ್ರಿ ಆಸ್ಪತ್ರೆಯಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಬುಧವಾರ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ಆರೋಗ್ಯ ಸಚಿವರ ಭೇಟಿಗಾಗಿ ಆಸ್ಪತ್ರೆ ಇಂದು ಲಕಲಕ ಹೊಳೆಯುತ್ತಿದೆ. ಗಬ್ಬೆದ್ದು ನಾರುತ್ತಿದ್ದ ಜಿಲ್ಲಾಸ್ಪತ್ರೆಯ ಒಳರೋಗಿ ಮತ್ತು ಹೊರರೋಗಿ ವಿಭಾಗಗಳು ಇಂದು ಸ್ವಚ್ಛಗೊಂಡಿವೆ. ಎಲ್ಲ ವಿಭಾಗಗಳು ಸಮಯಪಾಲನೆಯಿಂದ ಕಾರ್ಯ ನಿರ್ವಹಣೆ ಮಾಡುತ್ತಿವೆ. ಆಸ್ಪತ್ರೆ ಹೊರ ಭಾಗದಲ್ಲಿ ಸ್ವಚ್ಛಗೊಳಿಸಿ ಬ್ಲೀಚಿಂಗ್ ಪೌಡರ್ ಸಿಂಪಡಿಸಿ, ನೇಮ್ ಬೋರ್ಡ್ ಗಳನ್ನು ಸಿಬ್ಬಂದಿ ಸ್ವಚ್ಚಗೊಳಿಸಿದ್ದಾರೆ‌.

ಕಳೆದ ಬಾರಿ ಶ್ರೀರಾಮುಲು ಆರೋಗ್ಯ ಸಚಿವರಾಗಿದ್ದ ವೇಳೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದರು. ರೋಗಿಗಳ ಪರಿಪಾಟಲು ಕಂಡು ಮತ್ತೊಂದು ಕಟ್ಟಡಕ್ಕೆ ಅನುಮೋದನೆ ನೀಡಿ ಅನುದಾನ ಬಿಡುಗಡೆಗೊಳಿಸಿ ಗಮನ ಸೆಳೆದಿದ್ದರು‌.

Intro:ಆರೋಗ್ಯ ಸಚಿವರ ಭೇಟಿ ಎಫೆಕ್ಟ್: ಗಬ್ಬೆದ್ದು ನಾರುತ್ತಿದ್ದ ಆಸ್ಪತ್ರೆ ಫಳಪಳ!

ಚಾಮರಾಜನಗರ: ವಾಸನೆ, ಅಲ್ಲಲ್ಲೇ ಮೂತ್ರ ವಿಸರ್ಜನೆ ಮಾಡುತ್ತಿದ್ದ ಜಾಗಗಳೆಲ್ಲಾ ಕ್ಲೀನ್, ಪ್ರತಿ ರೂಂನ ಮುಂದೆ ಡಸ್ಟ್ ಬಿನ್ , ಫ್ಲೋರ್ ಎಲ್ಲಾ ಫಳ ಫಳ ಅಬ್ಬಾ ಜಿಲ್ಲಾಸ್ಪತ್ರೆಗೆ ಇಂದು ಸ್ವಚ್ಛ ಭಾಗ್ಯ.

Body:ಹೌದು, ಜಿಲ್ಲಾಸ್ಪತ್ರೆ ಈ ರೀತಿ ದೀಢೀರ್ ಫಳ ಫಳ ಎನ್ನಲು ಕಾರಣ ಆರೋಗ್ಯ ಸಚಿವ ಬಿ.ಶ್ರೀರಾಮುಲು ಭೇಟಿ. ಎರಡು ದಿನ ಜಿಲ್ಲಾ ಪ್ರವಾಸ ಕೈಗೊಂಡಿರುವ ಸಚಿವರು ಇಂದು ಸಂಜೆ ಜಿಲ್ಲಾಸ್ಪತ್ರೆಗೆ ಭೇಟಿಯಿತ್ತು ರೋಗಿಗಳ ಕುಂದು-ಕೊರತೆಗಳನ್ನು ಆಲಿಸಲಿದ್ದು ರಾತ್ರಿ ಆಸ್ಪತ್ರೆಯಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಬುಧವಾರ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ಗಬ್ಬೆದ್ದು ನಾರುತ್ತಿದ್ದ ಜಿಲ್ಲಾಸ್ಪತ್ರೆಯ ಒಳರೋಗಿ ಮತ್ತು ಹೊರರೋಗಿ ವಿಭಾಗಗಳು ಇಂದು ಸ್ವಚ್ಛಗೊಂಡಿದ್ದು ಎಲ್ಲಾ ವಿಭಾಗಗಳು ಸಮಯಪಾಲನೆಯಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದುದು ಕಂಡುಬಂದಿತು. ಆಸ್ಪತ್ರೆ ಹೊರ ಭಾಗದಲ್ಲಿ ಸ್ವಚ್ಛಗೊಳಿಸಿ ಬ್ಲೀಚಿಂಗ್ ಪೌಡರ್ ಸಿಂಪಡಣೆ, ನೇಮ್ ಬೋರ್ಡ್ ಗಳ ಸಿಬ್ಬಂದಿ ಸ್ವಚ್ಚಗೊಳಿಸಿದ್ದಾರೆ‌.

Conclusion:ಕಳೆದ ಬಾರಿ ಶ್ರೀರಾಮುಲು ಆರೋಗ್ಯ ಸಚಿವರಾಗಿದ್ದ ವೇಳೆ ಜಿಲ್ಲಾಸ್ಪತ್ರೆಗೆ ಭೇಟಿಯಿತ್ತು ರೋಗಿಗಳ ಪಡಿಪಾಟಲು ಕಂಡು ಮತ್ತೊಂದು ಕಟ್ಟಡಕ್ಕೆ ಅನುಮೋದನೆ ನೀಡಿ ಅನುದಾನ ಬಿಡುಗಡೆಗೊಳಿಸಿ ಗಮನ ಸೆಳೆದಿದ್ದರು‌.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.