ETV Bharat / state

ಸ್ವಗ್ರಾಮದಲ್ಲೇ 'GO BACK' ಎಂದು ಶಾಸಕ ಎನ್.ಮಹೇಶ್ ವಿರುದ್ಧ ಘೋಷಣೆ - MLA N Mahesh news

ಶಾಸಕ ಎನ್.ಮಹೇಶ್ ಅವರ ಸ್ವಗ್ರಾಮದಲ್ಲೇ ಗ್ರಾಮಸ್ಥರು ಗೋ ಬ್ಯಾಕ್ ಎಂದು ಘೋಷಣೆ ಕೂಗಿರುವ ಘಟನೆ ನಡೆಯಿತು. ಗ್ರಾಮಸ್ಥರ ಕಷ್ಟಗಳಿಗೆ ಶಾಸಕರು ಸ್ಪಂದಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.

GO BACK slogan against MLA N Mahesh
GO BACK ಎಂದು ಶಾಸಕ ಎನ್ ಮಹೇಶ್ ವಿರುದ್ಧ ಘೋಷಣೆ
author img

By

Published : Sep 18, 2022, 1:25 PM IST

ಚಾಮರಾಜನಗರ: ಶಾಸಕ ಎನ್.ಮಹೇಶ್ ಅವರ ಸ್ವಗ್ರಾಮವಾದ ಕೊಳ್ಳೇಗಾಲ ನಗರಸಭೆ ವ್ಯಾಪ್ತಿಯ ಶಂಕನಪುರದಲ್ಲಿ ಗೋ ಬ್ಯಾಕ್ ಘೋಷಣೆ ಕೂಗಿ ಅವರ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದರು.

GO BACK ಎಂದು ಶಾಸಕ ಎನ್ ಮಹೇಶ್ ವಿರುದ್ಧ ಘೋಷಣೆ

ಕೊಳ್ಳೇಗಾಲ ನಗರಸಭೆಯ 26 ನೇ ವಾರ್ಡ್ ವ್ಯಾಪ್ತಿಗೆ ಶಂಕನಪುರ ಬರಲಿದೆ. ಶಾಲೆ, ಚರಂಡಿ, ರಸ್ತೆ ಸಮಸ್ಯೆ ಬಗ್ಗೆ ಶಾಸಕ ಮತ್ತು ಗ್ರಾಮಸ್ಥರು ಶನಿವಾರ ಸಭೆ ನಡೆಸಿದ್ದಾರೆ. ಈ ವೇಳೆ ರಾಜಕೀಯ ಕಾರಣಕ್ಕಾಗಿ ಶಾಸಕರು ಮಾತನಾಡುತ್ತಿದ್ದಾರೆ. ಯಾವ ಕಷ್ಟಗಳಿಗೂ ಸ್ಪಂದಿಸುತ್ತಿಲ್ಲ, ಯಾವುದಕ್ಕೂ ಪರಿಹಾರ ಕೊಡುತ್ತಿಲ್ಲ. ರಾಜಕೀಯ ಸ್ಟಂಟ್ ಮಾಡುತ್ತೀದ್ದೀರಿ, ಗೋ ಬ್ಯಾಕ್ ಮಹೇಶ್, ಗೋ ಬ್ಯಾಕ್ ಎಂದು ಘೋಷಣೆ ಕೂಗಿ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

ಓರ್ವ ಗೋ ಬ್ಯಾಕ್ ಎಂದು ಕೂಗುತ್ತಿದ್ದಂತೆ ಉಳಿದವರು ಕೂಗುವುದು ವಿಡಿಯೋದಲ್ಲಿ ಸೆರೆಯಾಗಿದೆ. ಗೋ ಬ್ಯಾಕ್ ಎಂದು ಕೂಗಿ ಸಭೆಯಿಂದ ಕೆಲವರು ಹೊರ ನಡೆದಿದ್ದು, ಬಳಿಕ ಶಾಸಕರು ಕೂಡ ಸಭೆಯಿಂದ ತೆರಳುತ್ತಾರೆ.

ಇದನ್ನೂ ಓದಿ: ಅರ್ಧ ಅಡಿ ನೀರಲ್ಲಿ ಶಾಸಕ ಎನ್ ಮಹೇಶ್ ತೆಪ್ಪ ಸವಾರಿ: ವಿಡಿಯೋ ವೈರಲ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.