ETV Bharat / state

ಚಾಮರಾಜನಗರದ ಗಡಿ ಗ್ರಾಮದಲ್ಲಿ 14 ಆನೆಗಳು.. ಜಮೀನಿನಲ್ಲೇ ಬೀಡುಬಿಟ್ಟ ಗಜಪಡೆ! - ಚಾಮರಾಜನಗರದಲ್ಲಿ ಆನೆಗಳು

ಇಂದು ಬೆಳ್ಳಂಬೆಳಗ್ಗೆ ತಾಳವಾಡಿ ತಾಲೂಕಿನ ಮಲ್ಲನಗುಳಿ ಗ್ರಾಮಕ್ಕೆ 14 ಆನೆಗಳು ಲಗ್ಗೆಯಿಟ್ಟಿದ್ದವು. ಸದ್ಯ 6 ಆನೆಗಳು ಕಾಡಿನತ್ತ ಹೆಜ್ಜೆ ಹಾಕಿವೆ. ಇನ್ನು 8 ಆನೆಗಳು ಗ್ರಾಮದ ಜಮೀನಿನಲ್ಲೇ ಬೀಡುಬಿಟ್ಟಿವೆ..

elephants in chamarajanagara
ಚಾಮರಾಜನಗರದಲ್ಲಿ ಕಾಡಾನೆ ಹಾವಳಿ
author img

By

Published : Dec 26, 2021, 12:07 PM IST

Updated : Dec 26, 2021, 12:22 PM IST

ಚಾಮರಾಜನಗರ : ಚಾಮರಾಜನಗರದ ಗಡಿ ಭಾಗವಾದ ತಾಳವಾಡಿ ತಾಲೂಕಿನ ಮಲ್ಲನಗುಳಿ ಗ್ರಾಮಕ್ಕೆ ಒಂದಲ್ಲ ಎರಡಲ್ಲ ಬರೋಬ್ಬರಿ 14 ಆನೆಗಳು ಲಗ್ಗೆಯಿಟ್ಟು ಆತಂಕದ ವಾತಾವರಣ ನಿರ್ಮಾಣ ಮಾಡಿವೆ.

ಚಾಮರಾಜನಗರದ ಗಡಿ ಗ್ರಾಮದಲ್ಲಿ ಆನೆಗಳು

ಕಾಡಂಚಿನಲ್ಲಿರುವ ಈ ಗ್ರಾ‌ಮಕ್ಕೆ ಆಗಾಗ ಆನೆಗಳು ಬಂದರೂ ಈ ರೀತಿ ಹಿಂಡು ಹಿಂಡಾಗಿ ಬಂದಿರುವುದು ಬಹಳ ಅಪರೂಪ. ಇಂದು ಬೆಳ್ಳಂಬೆಳಗ್ಗೆ ವಾಕಿಂಗ್​ಗೆ ತೆರಳಿದ್ದ ಜನರಿಗೆ ಗಜಪಡೆ ದರ್ಶನವಾಗಿದೆ. ಜನರು ದಿಕ್ಕೆಟ್ಟು ಓಡಿದ್ದಾರೆ ಎಂದು ಸ್ಥಳೀಯರಾದ ನಾಗೇಂದ್ರ ಅವರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಡಿ.28 ರಿಂದ 10 ದಿನ ನೈಟ್​​ ಕರ್ಫ್ಯೂ ಜಾರಿ

ಸದ್ಯ 6 ಆನೆಗಳು ಕಾಡಿನತ್ತ ಹೆಜ್ಜೆ ಹಾಕಿವೆ. ಇನ್ನು 8 ಆನೆಗಳು ಗ್ರಾಮದ ಜಮೀನಿನಲ್ಲೇ ಬೀಡುಬಿಟ್ಟಿವೆ. ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶದ ಸಿಬ್ಬಂದಿ ಆನೆಯನ್ನು ಕಾಡಿಗಟ್ಟಲು ಹರಸಾಹಸ ಪಡುತ್ತಿದ್ದಾರೆ.

Last Updated : Dec 26, 2021, 12:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.