ETV Bharat / state

ವ್ಯಾಘ್ರ ಭೀತಿ: ಕೂಂಬಿಂಗ್​​ನಲ್ಲಿ ಪತ್ತೆಯಾಯ್ತು ಹೆಣ್ಣು ಹುಲಿಯ ಜಾಡು! - ಬಿಆರ್​ಟಿ ಹುಲಿ ಸಂರಕ್ಷಿತ ಪ್ರದೇಶದ

ಚಾಮರಾಜನಗರ ತಾಲೂಕಿನ ಕೆಲವು ಗ್ರಾಮಗಳಲ್ಲಿ ಬಿಆರ್​ಟಿ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯಾಧಿಕಾರಿಗಳು ಕೂಂಬಿಂಗ್ ನಡೆಸಿದರು. ಎಲಚಿಕೆರೆ ಭಾಗದ ಅಲ್ಲಲ್ಲಿ ಹುಲಿ ಸಂಚರಿಸಿರುವ ಗುರುತು ಪತ್ತೆಯಾಗಿದೆ. ಹೆಣ್ಣುಲಿಯೊಂದು ತನ್ನ ಮರಿಯೊಂದಿಗೆ ಈ ಭಾಗದಲ್ಲಿ ಸಂಚರಿಸಿರುವ ಗುರುತು ಕಂಡು ಬಂದಿದೆ.

ಕೂಂಬಿಂಗ್​​ನಲ್ಲಿ ಪತ್ತೆಯಾಯ್ತು ಹೆಣ್ಣು ಹುಲಿಯ ಜಾಡು

author img

By

Published : Nov 6, 2020, 7:55 PM IST

Updated : Nov 6, 2020, 9:19 PM IST

ಚಾಮರಾಜನಗರ: ಕಳೆದ ಮೂರು ದಿನಗಳಿಂದ ಹುಲಿ ಭೀತಿಯಲ್ಲಿರುವ ಚಾಮರಾಜನಗರ ತಾಲೂಕಿನ ಅರಕಲವಾಡಿ, ವಡ್ಗಲ್ಪುರ, ನರಸಮಂಗಲ ಗ್ರಾಮಗಳಲ್ಲಿ ಬಿಆರ್​ಟಿ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯಾಧಿಕಾರಿಗಳು ಕೂಂಬಿಂಗ್ ನಡೆಸಿದರು.

ಪಾರ್ಥಸಾರಥಿ, ಗಜೇಂದ್ರ ಹಾಗೂ ಲಕ್ಷ್ಮೀ ಆನೆಗಳ ಮೂಲಕ 70ಕ್ಕೂ ಹೆಚ್ಚು ಸಿಬ್ಬಂದಿ ಸತತ 8 ತಾಸು ಹುಲಿ ಜಾಡನ್ನು ಹುಡುಕಾಡಿದ್ದು, ಎಲಚಿಕೆರೆ ಭಾಗದ ಅಲ್ಲಲ್ಲಿ ಹುಲಿ ಸಂಚರಿಸಿರುವ ಗುರುತು ಪತ್ತೆಯಾಗಿದೆ. ಹೆಣ್ಣುಲಿಯೊಂದು ತನ್ನ ಮರಿಯೊಂದಿಗೆ ಈ ಭಾಗದಲ್ಲಿ ಸಂಚರಿಸಿರುವ ಗುರುತು ಕಂಡು ಬಂದಿದ್ದು, ಗ್ರಾಮಸ್ಥರಿಗೂ ಕಾಣಿಸಿಕೊಂಡಿದೆ.

ಕೂಂಬಿಂಗ್​​ನಲ್ಲಿ ಪತ್ತೆಯಾಯ್ತು ಹೆಣ್ಣು ಹುಲಿಯ ಜಾಡು

ಮರಿಯೊಂದಿಗೆ ಹುಲಿ ಇರುವುದರಿಂದ ಜೊತೆಗೆ ಅರಣ್ಯ ಪ್ರದೇಶದ ಅಂಚಿನಲ್ಲಿರುವ ಮಾನವ, ಪ್ರಾಣಿ ಮೇಲೆ ಯಾವುದೇ ದಾಳಿಯಾಗದಿರುವುದರಿಂದ ಕಾಡಿಗೆ ಓಡಿಸಲು ಅರಣ್ಯ ಇಲಾಖೆ ಮುಂದಾಗಿದೆ.

ವಡ್ಗಲ್‌ಪುರ ರಾಚಶೆಟ್ಟಿ ಅವರ ಜಮೀನಿನಲ್ಲಿ ನ. 2ರಂದು ಕಾಣಿಸಿಕೊಂಡಿದ್ದ ಹುಲಿ ಸೆರೆ ಹಿಡಿಯಲು ಅರಣ್ಯ ಇಲಾಖೆಯು ಬೋನು ಇಟ್ಟಿದೆ. ಕಳೆದ ಎರಡು ತಿಂಗಳಿಂದ ತಾಲೂಕಿನ ಸಾಸವಳ್ಳ, ಅರಕಲವಾಡಿ, ವಡ್ಗಲ್‌ಪುರ, ಚನ್ನಪ್ಪನಪುರ ಗ್ರಾಮಗಳ ಅಲ್ಲಲ್ಲಿ ಹುಲಿ ಕಾಣಿಸಿಕೊಂಡಿರುವುದರಿಂದ ಜನರು ಭಯಭೀತರಾಗಿದ್ದು, ಜಮೀನುಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.

Last Updated : Nov 6, 2020, 9:19 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.