ಚಾಮರಾಜನಗರ: ಜಿಪಂ ಸಿಇಒ ಆಗಿ ಜನ ಮನ್ನಣೆಗಳಿಸಿದ್ದ ಲತಾಕುಮಾರಿ ಅವರನ್ನು ದಿಢೀರ್ ವರ್ಗಾವಣೆಗೊಳಿಸಿದ್ದು, ಇದನ್ನು ಖಂಡಿಸಿ ರೈತ ಸಂಘದ ಕಾರ್ಯಕರ್ತರು ನಗರದಲ್ಲಿಂದು ಪ್ರತಿಭಟನೆ ನಡೆಸಿದರು.
ಭುವನೇಶ್ವರಿ ವೃತ್ತದಲ್ಲಿ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ನೇತೃತ್ವದಲ್ಲಿ ರಾಜ್ಯ ಹೆದ್ದಾರಿ ತಡೆದು ಲತಾಕುಮಾರಿ ಅವರನ್ನು ಜಿಲ್ಲೆಗೆ ಮರು ನಿಯೋಜನೆಗೊಳಿಸಬೇಕೆಂದು ಘೋಷಣೆ ಕೂಗಿದರು.
ಕಳೆದ ಆರು ತಿಂಗಳ ಹಿಂದೆಯೆಷ್ಟೆ ನಿಯೋಜನೆಯಾಗಿದ್ದ ಜಿಲ್ಲಾ ಪಂಚಾಯಿತಿ ಸಿಇಒ ಲತಾ ಕುಮಾರಿ ಅವರನ್ನು ಏಕಾಏಕಿ ರಾಜ್ಯ ಸರ್ಕಾರ ವರ್ಗಾವಣೆ ಮಾಡಿರುವುದು ಸರಿಯಲ್ಲ. ಪ್ರಾಮಾಣಿಕ ಅಧಿಕಾರಿಯಾಗಿದ್ದ ಅವರು ಸಕ್ರಿಯವಾಗಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದರು. ಕೂಡಲೇ ಜಿಲ್ಲೆಗೆ ಅವರನ್ನೇ ಮರು ನಿಯೋಜನೆ ಮಾಡಬೇಕೆಂದು ಆಗ್ರಹಿಸಿದರು.