ETV Bharat / state

ಯಕೃತ್ ಹಾನಿ, ಹೃದಯಸ್ತಂಭನದಿಂದ ಅಸುನೀಗಿದ ಅಕ್ಕಿರಾಜ ಖ್ಯಾತಿಯ ಆನೆ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಂಪುರ ಆನೆ ಶಿಬಿರದಲ್ಲಿ ಅಕ್ಕಿರಾಜ ಖ್ಯಾತಿಯ ಆನೆ ಅಸುನೀಗಿದೆ.

ಆನೆ
ಆನೆ
author img

By ETV Bharat Karnataka Team

Published : Nov 1, 2023, 8:49 PM IST

Updated : Nov 1, 2023, 9:09 PM IST

ಚಾಮರಾಜನಗರ : ಈ ಹೃದಯಾಘಾತ ಎನ್ನುವುದು ಮನುಷ್ಯರಷ್ಟೇ ಅಲ್ಲ, ಪ್ರಾಣಿಗಳನ್ನೂ ಕಾಡುತ್ತಿದೆ. ಇದಕ್ಕೆ ಸ್ಪಷ್ಟ ಉದಾಹರಣೆ ಎಂಬಂತೆ ಅಕ್ಕಿರಾಜ ಎಂಥಲೇ ಖ್ಯಾತಿ ಪಡೆದಿದ್ದ, ದಸರಾಗೆ ಪಳಗಿಸುತ್ತಿದ್ದ ಆನೆಯು ಹೃದಯಸ್ತಂಭನ ಹಾಗೂ ಯಕೃತ್ ಹಾನಿಯಿಂದ ಅಸುನೀಗಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಂಪುರ ಆನೆ ಶಿಬಿರದಲ್ಲಿ ನಡೆದಿದೆ.

ಅರಣ್ಯ ಇಲಾಖೆ ಮಾಧ್ಯಮ ಹೇಳಿಕೆ
ಅರಣ್ಯ ಇಲಾಖೆ ಮಾಧ್ಯಮ ಹೇಳಿಕೆ

ಕಳೆದ ಜೂನ್​ 7 ರಂದು ಈ ಆನೆಯನ್ನು ಕುಂದಕೆರೆ ವಲಯದಲ್ಲಿ ಸೆರೆ ಹಿಡಿದು ರಾಂಪುರ ಆನೆ ಶಿಬಿರಕ್ಕೆ ರವಾನೆ ಮಾಡಲಾಗಿತ್ತು.‌ ಆನೆ ನೋಡಲು ಸುಂದರವಾಗಿದ್ದರಿಂದ ಮತ್ತು ಗಾತ್ರದಲ್ಲಿ ಹಿರಿದಾಗಿದ್ದರಿಂದ ದಸರಾದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಪಳಗಿಸಲಾಗುತ್ತಿತ್ತು. ಆನೆ ಸೆರೆ ಹಿಡಿದು ಕ್ರಾಲ್​ನಲ್ಲಿ ಇಡಲಾಗಿತ್ತು. ಬಳಿಕ, ಕಳೆದ ತಿಂಗಳು 21 ರಂದು ಹೊರಕ್ಕೆ ಕರೆತಂದು ಉಳಿದ ಸಾಕಾನೆಗಳ ಜೊತೆ ತರಬೇತಿ ನೀಡಲಾಗುತ್ತಿತ್ತು ಎಂದು ಅರಣ್ಯ ಇಲಾಖೆ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ.

ಅಕ್ಟೋಬರ್​​​ 31ರ ಮಧ್ಯಾಹ್ನ ಆನೆ ದಿಢೀರ್ ಎಂದು ಕೆಳಕ್ಕೆ ಬಿದ್ದಿತ್ತು. ಈ ಸುದ್ದಿ ತಿಳಿದ ಬಳಿಕ ಸ್ಥಳಕ್ಕೆ ದೌಡಾಯಿಸಿದ ಪಶು ವೈದ್ಯರು, ಪ್ರಥಮ ಚಿಕಿತ್ಸೆ ನೀಡಿದರೂ ಸ್ಪಂದಿಸದೇ ಅಸುನೀಗಿದೆ. ಇಂದು ಡಾ ವಾಸಿಂ ಮಿರ್ಜಾ ಮತ್ತು ಡಾ ಮುಜೀಬ್ ಮರಣೋತ್ತರ ಪರೀಕ್ಷೆ ನಡೆಸಿದ್ದು, ಸಾಮಾನ್ಯ ಗಾತ್ರಕ್ಕಿಂತ 3 ಪಟ್ಟು ಹೃದಯದ ಗಾತ್ರ ದೊಡ್ಡದಾಗಿರುವುದು. ಯಕೃತ್ ಹಾನಿಯಾಗಿರುವುದು ತಿಳಿದುಬಂದಿದೆ. ಹೆಚ್ಚಿನ ಪರೀಕ್ಷೆಗಾಗಿ ಆನೆಯ ಕೆಲ ಭಾಗಗಳನ್ನು ಮೈಸೂರಿಗೆ ರವಾನೆ ಮಾಡಲಾಗಿದೆ ಎಂದು ಬಂಡೀಪುರ ಅರಣ್ಯ ಇಲಾಖೆ ತಿಳಿಸಿದೆ. ಇನ್ನು ಮರಣೋತ್ತರ ಪರೀಕ್ಷೆ ಬಳಿಕ ಆನೆಯನ್ನು ಹೂಳಲಾಗಿದೆ.‌

ಮರಣೋತ್ತರ ಪರೀಕ್ಷೆ ಬಳಿಕವೇ ಆನೆ ಸಾವಿಗೆ ನಿಖರ ಕಾರಣ ತಿಳಿದು ಬರಬೇಕಿದೆ. ಆನೆ ಕುಳಿತುಕೊಳ್ಳುವ ವೇಳೆ ಏನಾದರೂ ಆಗಿತ್ತಾ, ಅಥವಾ ಹೃದಯ ಮೂರು ಪಟ್ಟು ದೊಡ್ಡದಾಗಲು ಕಾರಣ ಏನು?. ಇವೆಲ್ಲವುಗಳ ತಜ್ಞರ ಪರೀಕ್ಷೆಯ ಬಳಿಕವೇ ತಿಳಿದು ಬರಬೇಕಿದೆ.

ಹೃದಯಾಘಾತಕ್ಕೆ ವೈದ್ಯರು ಹೇಳಿದ ಮೂರು ಕಾರಣಗಳು:

1 Cardiomegaly = ಸಾಮಾನ್ಯ ಹೃದಯಕ್ಕಿಂತ 3 ಪಟ್ಟು ಹೃದಯದ ಗಾತ್ರ ದೊಡ್ಡದಾಗಿರುತ್ತದೆ

2. Massive cardiac arrest = ಹಠಾತ್​​​ ಹೃದಯ ಸ್ತಂಭನ, ಹೃದಯವು ಇದ್ದಕ್ಕಿದ್ದಂತೆ ಬಡಿತವನ್ನು ನಿಲ್ಲಿಸುವ ಸ್ಥಿತಿಯಾಗಿದೆ.

3 Liver cirrhosis = ಯಕೃತ್ತು ವೈಫಲ್ಯ

ವಾಕಿಂಗ್ ಮಾಡುವಾಗ ಹಠಾತ್ತನೆ ಕುಸಿದುಬಿದ್ದು ಆನೆ ಸಾವು : ಕಳೆದ ವರ್ಷ ಮಣಕ್ಕುಳ ವಿನಯಗರ್​ ದೇವಸ್ಥಾನದಲ್ಲಿದ್ದ ಆನೆಯೊಂದು ವಾಕಿಂಗ್​ ಮಾಡುವಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಮೃತಪಟ್ಟಿತ್ತು. ಬಳಿಕ ಆನೆ ಲಕ್ಷ್ಮಿಯನ್ನು ಪರೀಕ್ಷಿಸಿದ ವೈದ್ಯರು ಹೃದಯಾಘಾತದಿಂದ ಸಾವನ್ನಪ್ಪಿದೆ ಎಂದು ಹೇಳಿದ್ದರು. ಅಲ್ಲದೇ ಆನೆಗೆ ಮಧುಮೇಹವಿದ್ದು, ಕಾಲಿನ ಗಾಯದಿಂದ ಬಳಲುತ್ತಿತ್ತು ಎಂದು ತಿಳಿದುಬಂದಿತ್ತು.

ಇದನ್ನೂ ಓದಿ: ವಾಕಿಂಗ್ ಮಾಡುವಾಗ ಹಠಾತ್ತನೆ ಕುಸಿದುಬಿದ್ದು ಆನೆ ಸಾವು.. ಕಂಬನಿ ಮಿಡಿದ ಜನ

Last Updated : Nov 1, 2023, 9:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.