ETV Bharat / state

ಭೀಮನ ಅಮಾವಾಸ್ಯೆ: ಅಂದು ಡಾ. ರಾಜ್​​ ಅಪಹರಣ, ಇಂದು ಸಿದ್ಧಾರ್ಥ್​ ಮರಣ! - cafe coffee day

ಪ್ರತಿ ಭೀಮನ ಅಮಾವಾಸ್ಯೆ ದಿನ ಚಿತ್ರ ಪ್ರೇಮಿಗಳು ಮರುಗುತ್ತಾರೆ. ಇದಕ್ಕೆ ಕಾರಣ ಕನ್ನಡದ ಮೇರು ನಟ ಡಾ. ರಾಜ್​​ಕುಮಾರ್​ ಅವರ ಅಪಹರಣ ಆಗಿದ್ದು ಅದೇ ದಿನದಂದು. ಅಲ್ಲದೇ ಕಾಫಿ ಕಿಂಗ್ ಎಂದೇ ಹೆಸರಾಗಿದ್ದ ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ಕೂಡ ಶವವಾಗಿ ಪತ್ತೆಯಾಗಿದ್ದು ಕೂಡ ಭೀಮನ ಅಮಾವಾಸ್ಯೆಯೆಂದೇ.

drrajkumar,siddarth,veerappan, ರಾಜ್​ ಕುಮಾರ್​,ಸಿದ್ದಾರ್ಥ್,ವೀರಪ್ಪನ್​​
author img

By

Published : Jul 31, 2019, 9:45 PM IST

ಚಾಮರಾಜನಗರ: ಪ್ರತಿ ಭೀಮನ ಅಮಾವಾಸ್ಯೆ ಬಂತೆಂದರೆ ಚಿತ್ರ ಪ್ರೇಮಿಗಳು ಮರುಗುತ್ತಾರೆ. ಇದಕ್ಕೆ ಕಾರಣ ಕನ್ನಡದ ವರನಟ ಡಾ. ರಾಜ್​​ಕುಮಾರ್​ ಅಪಹರಣ ಪ್ರಕರಣ. ಈ ದಿನದಂದೇ ಕಾಡುಗಳ್ಳ ವೀರಪ್ಪನ್ ನಟ ಸಾರ್ವಭೌಮನನ್ನು ಅಪಹರಿಸಿದ್ದ.

2000ನೇ ಇಸವಿಯ ಜು. 30ರಂದು ದೊಡ್ಡಗಾಜನೂರಿನ ತೋಟದ ಮನೆಯಿಂದ ಕಾಡುಗಳ್ಳ ವೀರಪ್ಪನ್ ರಾಜ್​​ಕುಮಾರ್​ ಅವರನ್ನು ಅಪಹರಿಸಿ ಬರೋಬ್ಬರಿ 108 ದಿನಗಳು ಕಾಡಿನಲ್ಲಿರಿಸಿಕೊಂಡಿದ್ದ. ತಾಳವಾಡಿಯ ತೋಟದ ಮನೆಯಲ್ಲಿ ಆಗಷ್ಟೆ ಊಟ ಮುಗಿಸಿ ವಿರಮಿಸುತ್ತಿದ್ದವರನ್ನು ವೀರಪ್ಪನ್ ನೇತೃತ್ವದ ತಂಡ ಅಪಹರಿಸಿದ್ದ ಕಾರಣ ಭೀಮನ ಅಮಾವಾಸ್ಯೆ ಚಿತ್ರ ಪ್ರೇಮಿಗಳ ಸ್ಮೃತಿ ಪಟಲದಲ್ಲಿ ಅಚ್ಚಳಿಯದೇ ಉಳಿದಿದೆ.

ಇಂದು ಸಿದ್ದಾರ್ಥ್ ಸಾವು:
ಕಾಫಿ ಕಿಂಗ್ ಎಂದೇ ಹೆಸರಾಗಿದ್ದ ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ಕೂಡ ಶವವಾಗಿ ಪತ್ತೆಯಾಗಿದ್ದು ಕೂಡ ಭೀಮನ ಅಮಾವಾಸ್ಯೆಯೆಂದೇ. ಕನ್ನಡಿಗರು ಭೀಮನ ಅಮಾವಾಸ್ಯೆ ಹಬ್ಬದ ವೇಳೆ ಕ್ಷಣ ಕ್ಷಣ ಮರುಗುವವಂತಾಗಿದೆ. ಇನ್ನು ಅಂದಿನ ರಾಜ್ ಅಪಹರಣದ ಹೊತ್ತಿನಲ್ಲಿ ಎಸ್.ಎಂ.ಕೃಷ್ಣ ಕರ್ನಾಟಕದ ಸಿಎಂ ಆಗಿದ್ದರು. ಇಂದು ಸಾವನ್ನಪ್ಪಿದ ಕಾಫಿ ಕಿಂಗ್ ಸಿದ್ಧಾರ್ಥ್ ಅವರ ಮಾವ ಎಸ್ಎಂಕೆ ಆಗಿರುವುದು ಕೂಡ ಕಾಕಾತಾಳೀಯ.

Intro:ಭೀಮನ ಅಮಾವಾಸ್ಯೆ: ಅಂದು ರಾಜ್ ಅಪಹರಣ- ಇಂದು ಸಿದ್ದಾರ್ಥ್ ದುರ್ಮರಣ

ಚಾಮರಾಜನಗರ: ಪ್ರತಿ ಭೀಮನ ಅಮಾವಾಸ್ಯೆ ಬಂತೆಂದರೆ ಚಿತ್ರಪ್ರೇಮಿಗಳು ಮರುಗುವಂತಾಗಲು ಕಾರಣ ಕನ್ನಡದ ವರನಟ ಡಾ.ರಾಜ್ ಅಪಹರಣ ಪ್ರಕರಣ.

Body:2000ನೇ ಇಸವಿಯ ಜು.೩೦ ರಂದು ದೊಡ್ಡಗಾಜನೂರಿನ ತೋಟದಮನೆಯಿಂದ ಕಾಡುಗಳ್ಳ ವೀರಪ್ಪನ್ ನಟ ಸಾರ್ವಭೌಮನನ್ನು ಅಪಹರಿಸಿ ಬರೋಬ್ಬರಿ ೧೦೮ ದಿನಗಳು ಕಾಡಿನಲ್ಲಿರಿಸಿಕೊಂಡಿದ್ದ.

ತಾಳವಾಡಿಯ ತೋಟದ ಮನೆಯಲ್ಲಿ ಆಗಷ್ಟೆ ಊಟ ಮುಗಿಸಿ ವಿರಮಿಸುತ್ತಿದ್ದ ರಾಜ್ ಕುಮಾರ್ ರನ್ನು ವೀರಪ್ಪನ್ ನೇತೃತ್ವದ ಶಸ್ತ್ತಸಜ್ಜಿತ ತಂಡ ಅಪಹರಿಸಿತ್ತು. ಜೊತೆಗೆ ರಾಜ್ ಅಳಿಯ ಗೋವಿಂದರಾಜ್, ನಾಗೇಶ್‌, ನಾಗಪ್ಪ ಎನ್ನುವವರನ್ನು ಕರೆದೊಯ್ದು ಕರುನಾಡೇ ಬರೋಬ್ಬರಿ ೩ ತಿಂಗಳು ಸ್ತಬ್ಧವಾಗುವಂತೆ ಮಾಡಿದ್ದು ಪ್ರತಿ ಭೀಮನ ಅಮಾವಾಸ್ಯೆಗೆ ಚಿತ್ರ ಪ್ರೇಮಿಗಳ ಸ್ಮೃತಿ ಪಟಲದಲ್ಲಿ ಅಚ್ಚಳಿಯದೇ ಉಳಿದಿದೆ.

ಇಂದು ಸಿದ್ದಾರ್ಥ್ ದುರ್ಮರಣ: ಕಾಫಿ ಕಿಂಗ್ ಎಂದೇ ಹೆಸರಾಗಿದ್ದ ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ್ ಕೂಡ ಶವವಾಗಿ ಪತ್ತೆಯಾಗಿದ್ದು ಕೂಡ ಭೀಮನ ಅಮಾವಾಸ್ಯೆ ದಿನದಂದೇ ಆಗಿದ್ದು ಕನ್ನಡಿಗರು ಭೀಮನ ಅಮಾವಾಸ್ಯೆ ಹಬ್ಬದ ವೇಳೆ ಕ್ಷಣಹೊತ್ತು ಮರುಗುವ ಹಬ್ಬವಾದದ್ದು ವಿಪರ್ಯಾಸವೇ ಸರಿ.

ಇನ್ನು, ಅಂದಿನ ರಾಜ್ ಅಪಹರಣದ ಹೊತ್ತಿನಲ್ಲಿ ಎಸ್.ಎಂ.ಕೃಷ್ಣ ಕರ್ನಾಟಕದ ಸಿಎಂ ಆಗಿದ್ದರು, ಇಂದು ದುರ್ಮರಣ ಕಂಡ ಕಾಫಿ ಕಿಂಗ್ ಸಿದ್ದಾರ್ಥ್ ಅವರ ಮಾವ ಎಸ್ಎಂಕೆ ಆಗಿರುವುದು ಕೂಡ ಕಾಕಾತಾಳೀಯ.

Conclusion:((((File PIC- Veerappan, Dr raj, siddarrth)))
ETV Bharat Logo

Copyright © 2024 Ushodaya Enterprises Pvt. Ltd., All Rights Reserved.