ಕೊಳ್ಳೇಗಾಲ : ಪಟ್ಟಣದ ಸಾದ್ವಾರ ಗೃಹ, ಬಿವಿಎಸ್ ಕ್ವಾಟ್ರಸ್ ದೇವಾಂಗ ಪೇಟೆ ಹಾಗೂ ಗ್ರಾಮಾಂತರ ಪ್ರದೇಶದ ಹರಳೆ ಕಂಟೇನ್ಮೆಂಟ್ ಝೋನ್ಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ ಬಿ ಕಾವೇರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಂಟೇನ್ಮೆಂಟ್ ಝೋನ್ನ ನಿವಾಸಿಗಳ ಯೋಗ ಕ್ಷೇಮ ವಿಚಾರಿಸಿದ ಬಿ.ಬಿ ಕಾವೇರಿ, ಅಗತ್ಯ ವಸ್ತುಗಳ ಪೂರೈಕೆ ಸರಿಯಾಗಿ ನಿಮಗೆ ಲಭ್ಯವಿದೆಯೇ, ಏನು ಸಮಸ್ಯೆ ಇಲ್ಲವೇ ಎಂದು ಮಾತನಾಡಿಸಿ ಮಾಹಿತಿ ಪಡೆದರು. ನಂತರ ಮಾತನಾಡಿದ ಅವರು, ಕೊಳ್ಳೇಗಾಲದಲ್ಲಿ ಕೊರೊನಾ ಪ್ರಕರಣ ಕಡಿಮೆ ಇತ್ತು. ಆದರೆ, ಹೊರಗಿನಿಂದ ಬಂದವರಿಂದ ಕೊರೊನಾ ಸೋಂಕು ಹೆಚ್ಚಾಗಿದೆ. ಸ್ಥಳೀಯ ನಗರಸಭೆ ಮತ್ತು ಇನ್ನಿತರ ಇಲಾಖೆ ಜೊತೆಗೂಡಿ ಸೋಂಕು ನಿಂಯತ್ರಣಕ್ಕೆ ತರಲು ಕಾರ್ಯನಿರ್ವಹಿಸುತ್ತಿದೆ ಎಂದರು.
ಇನ್ನು ಜನರು ಕೂಡ ಅರ್ಥ ಮಾಡಿಕೊಳ್ಳಬೇಕು ಸ್ವರಕ್ಷಣೆ ಎಂಬುದು ಬಹಳ ಮುಖ್ಯ. ಸುರಕ್ಷತೆ ದೃಷ್ಟಿಯಿಂದ ಸಾಮಾಜಿಕ ಅಂತರ, ಮಾಸ್ಕ್ ಬಳಸುವುದರಿಂದ ಕೊರೊನಾ ತಡೆಗಟ್ಟಬಹುದಾಗಿದೆ ಎಂದಿದ್ದಾರೆ.