ಚಾಮರಾಜನಗರ: ಕೋವಿಡ್ ಸೋಂಕಿಗೆ ಒಳಗಾಗಿ ಪಡಿತರ ಪಡೆಯಲು ಸಾಧ್ಯವಾಗದ ಜನರ ಮನೆ ಬಾಗಿಲಿಗೆ ಪಡಿತರ ವಿತರಿಸುವ ಮೂಲಕ ಜಿಲ್ಲೆಯ ಗ್ರಾಮವೊಂದರಲ್ಲಿ ಮಾದರಿ ಕಾರ್ಯ ಮಾಡಲಾಗಿದೆ.
ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮದಲ್ಲಿ 60ಕ್ಕೂ ಹೆಚ್ಚು ಸೋಂಕಿತ ಕುಟುಂಬಗಳಿವೆ. ಇವರಿಗೆ ಪಡಿತರ ಪಡೆಯಲು ನ್ಯಾಯಬೆಲೆ ಅಂಗಡಿಗೆ ಬರಲು ಸಾಧ್ಯವಾಗುತ್ತಿಲ್ಲ. ಇದನ್ನು ಮನಗಂಡ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನ್ಯಾಯಬೆಲೆ ಅಂಗಡಿ, ಸೋಂಕಿತರ ಮನೆ ಬಾಗಿಲಿಗೆ ಪಡಿತರ ವಿತರಿಸುತ್ತಿದೆ.
ಓದಿ : ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಿಂದ 50 ಲಕ್ಷ ಅನುದಾನ ಬಳಕೆಗೆ ಶ್ರೀನಿವಾಸ ಪ್ರಸಾದ್ ಅನುಮತಿ
ಹೋಂ ಐಸೋಲೇಷನ್ನಲ್ಲಿ ಇರಬೇಕಾದವರು ಪಡಿತರಕ್ಕಾಗಿ ಅಡ್ಡಾಡಿದರೆ ಮತ್ತಷ್ಟು ಸೋಂಕು ಹಬ್ಬುವ ಭೀತಿಯಿದೆ. ಹಾಗಾಗಿ, ಆಶಾ ಕಾರ್ಯಕರ್ತೆಯರ ಸಹಕಾರ ಪಡೆದು, ಸೋಂಕಿತ ಕುಟುಂಬಗಳ ಮನೆ ಬಾಗಿಲಿಗೆ ಪಡಿತರ ವಿತರಣೆ ಮಾಡುವ ಮಾಡಲಾಗ್ತಿದೆ.