ಚಾಮರಾಜನಗರ: ಪೊಲೀಸರ ಗಾಂಜಾ ಬೇಟೆ ಮುಂದುವರೆದಿದ್ದು, ಮಾದಕ ವಸ್ತು ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಘಟನೆ ಹನೂರು ತಾಲೂಕಿನ ವಿಎಸ್ ದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಹನೂರು ತಾಲೂಕಿನ ಜೀರಿಗೆಗದ್ದೆ ನಿವಾಸಿ ಮಂಟೆ ಅಲಿಯಾಸ್ ಮಂಟೇಲಿಂಗಯ್ಯ (30) ಬಂಧಿತ ಆರೋಪಿ. ವಿಎಸ್ ದೊಡ್ಡಿ ಗ್ರಾಮದಿಂದ ಜೀರಿಗೆ ಗದ್ದೆ ಗ್ರಾಮಕ್ಕೆ ದ್ವಿಚಕ್ರ ವಾಹನದಲ್ಲಿ ಅಕ್ರಮ ಗಾಂಜಾ ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಹನೂರು ಠಾಣೆ ಪೊಲೀಸರು ದಾಳಿ ನಡೆಸಿ 400 ಗ್ರಾಂ ಗಾಂಜಾ ಹಾಗೂ ಬೈಕ್ ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತನು ಈ ಹಿಂದೆಯೂ ಗಾಂಜಾ ಕೇಸ್ನಲ್ಲಿ ಭಾಗಿಯಾಗಿದ್ದು ಸೋಲಿಗರಿಗೆ, ಸ್ಥಳೀಯರಿಗೆ ಮಾರಾಟ ಮಾಡುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.