ETV Bharat / state

ಲ್ಯಾಂಪ್ಸ್ ಸಹಕಾರ ಸಂಘದಲ್ಲಿ ಭ್ರಷ್ಟಾಚಾರ: ಆದಿವಾಸಿ ಬುಡಕಟ್ಟು ಸಂಘ ಆರೋಪ

ಲ್ಯಾಂಪ್ಸ್ ಸಹಕಾರ ಸಂಘದಲ್ಲಿ ಕಿರು ಅರಣ್ಯ ಉತ್ಪನ್ನಗಳು ಸೇರಿದಂತೆ ಸರ್ಕಾರದ ವಿವಿಧ ಉದ್ದೇಶಗಳಿಗೆ ಬಿಡುಗಡೆಯಾಗಿರುವ ಸುಮಾರು 3 ಕೋಟಿ ಹಣ ದುರುಪಯೋಗವಾಗಿದೆ ಎಂದು ತಾಲೂಕು ಅರಣ್ಯ ಅವಲಂಬಿತ ಆದಿವಾಸಿ ಬುಡಕಟ್ಟು ಸಂಘ ಆರೋಪಿಸಿದೆ.

Corruption in the Lamps Co-operative Society
ಲ್ಯಾಂಪ್ಸ್ ಸಹಕಾರ ಸಂಘದಲ್ಲಿ ಭ್ರಷ್ಠಾಚಾರ
author img

By

Published : Jul 28, 2020, 7:55 PM IST

ಗುಂಡ್ಲುಪೇಟೆ (ಚಾಮರಾಜನಗರ): ತಾಲೂಕಿನ ಲ್ಯಾಂಪ್ಸ್ ಸಹಕಾರ ಸಂಘದಲ್ಲಿ ಅಪಾರ ಪ್ರಮಾಣದ ಭ್ರಷ್ಟಾಚಾರವಾಗಿದ್ದು, ಲಕ್ಷಾಂತರ ರೂ. ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ತಾಲೂಕು ಅರಣ್ಯ ಅವಲಂಬಿತ ಆದಿವಾಸಿ ಬುಡಕಟ್ಟು ಸಂಘ ಆರೋಪಿಸಿದೆ.

ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಆದಿವಾಸಿ ಬುಡಕಟ್ಟು ಸಂಘದ ತಾಲೂಕು ಅಧ್ಯಕ್ಷ ಚಲುವರಾಜು ಮಾತನಾಡಿ, ಗುಂಡ್ಲುಪೇಟೆ ಲ್ಯಾಂಪ್ಸ್ ಸಹಕಾರ ಸಂಘದಲ್ಲಿ ಕಿರು ಅರಣ್ಯ ಉತ್ಪನ್ನಗಳು ಸೇರಿದಂತೆ ಸರ್ಕಾರದ ವಿವಿಧ ಉದ್ದೇಶಗಳಿಗೆ ಬಿಡುಗಡೆಯಾಗಿರುವ ಸುಮಾರು 3 ಕೋಟಿ ಹಣ ದುರುಪಯೋಗವಾಗಿದೆ. ಲ್ಯಾಂಪ್ಸ್ ಸಹಕಾರ ಸಂಘ ಅಧ್ಯಕ್ಷ ದೇವಯ್ಯ ಹಾಗು ಕಾರ್ಯದರ್ಶಿ ಶಿವರಾಜು ಇಬ್ಬರು ಸೇರಿ ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯಪಾಲಕ ಅಭಿಯಂತರರ ಸೀಲು ಮತ್ತು ಸಹಿಯನ್ನು ನಕಲು ಮಾಡಿ ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ಷೇರು ಬಂಡವಾಳ ಬಿಡುಗಡೆಯಾಗಿದೆ. ಗೋದಾಮು ನಿರ್ಮಾಣಕ್ಕಾಗಿ ಮಾರಾಟ ಮಳಿಗೆ ಗಣಕಯಂತ್ರಕ್ಕೆ ಒಟ್ಟು 1 ಕೋಟಿ 6 ಲಕ್ಷ, ಸಮುದಾಯ ಭವನ, ಜೇನು ಸಂಸ್ಕರಣ ಘಟಕ, ಲ್ಯಾಂಪ್ಸ್ ಪುನಶ್ಚೇತನ ಸೇರಿದಂತೆ ಹಲವು ಉದ್ದೇಶಗಳಿಗೆ ಬಿಡುಗಡೆಯಾಗಿರುವ ಪೂರ್ತಿ ಹಣ ದುರುಪಯೋಗವಾಗಿದೆ. ಈ ಬಗ್ಗೆ ಲೆಕ್ಕ ಕೇಳಿದರೆ ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂದು ದೂರಿದರು.

ಈ ಬಗ್ಗೆ ಜಿಲ್ಲಾಧಿಕಾರಿ ಸೇರಿದಂತೆ ಹಲವು ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಕೂಡ ಪ್ರಯೋಜನವಾಗಿಲ್ಲ. ಇದರಲ್ಲಿ ಹಲವು ಪ್ರಭಾವಿ ವ್ಯಕ್ತಿಗಳ ಕೈವಾಡವಿದ್ದು, ಹಗರಣ ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಜೊತೆಗೆ ಸರ್ಕಾರದಿಂದ ಬಿಡುಗಡೆಯಾಗುತ್ತಿರುವ ಹಣ ಗಿರಿಜನರು ಹಾಗು ಬುಡಕಟ್ಟು ಜನರಿಗೆ ತಲುಪುತ್ತಿಲ್ಲ. ಸುಳ್ಳು ಲೆಕ್ಕ ಬರೆದು ನಮ್ಮನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ ಆರೋಪಿಸಿದರು.

ಆದಿವಾಸಿಗಳು ಮತ್ತು ಗಿರಿ ಜನರು ತಂದು ಕೊಡುವ ಪಾಚಿಯನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದು, ಲಕ್ಷಾಂತರ ರೂ. ಲಾಭವಿದ್ದರೂ ಈ ಬಗ್ಗೆ ಲೆಕ್ಕ ತೋರಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಳೆದು ಹಲವು ವರ್ಷಗಳಿಂದಲೂ ಲ್ಯಾಂಪ್ಸ್ ಸಹಕಾರ ಸಂಘದಲ್ಲಿ ಅವ್ಯವಹಾರ ನಡೆದಿದ್ದು, 20 ವರ್ಷಗಳಿಂದಲೂ ಒಬ್ಬರೆ ಅಧ್ಯಕ್ಷರಾಗಿರುವುದರಿಂದ ಅಕ್ರಮ ಹೆಚ್ಚಿದೆ. ಆದ್ದರಿಂದ ಈ ಕೂಡಲೇ ಲ್ಯಾಂಪ್ಸ್ ಸಹಕಾರ ಸಂಘ ಅಧ್ಯಕ್ಷ ದೇವಯ್ಯ ಹಾಗು ಕಾರ್ಯದರ್ಶಿ ಶಿವರಾಜು ಅವರ ವಿರುದ್ಧ ತನಿಖೆ ನಡೆಸಿ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.