ETV Bharat / state

ಗಸ್ತಿನಲ್ಲಿದ್ದಾಗ ಕಾರು ಡಿಕ್ಕಿ: ಸಂತೇಮರಹಳ್ಳಿ ಕಾನ್ಸ್‌ಟೇಬಲ್ ಸಾವು, ಎಎಸ್ಐಗೆ ಗಂಭೀರ ಗಾಯ - Constable died due to Car collision

ಕಾರು ಡಿಕ್ಕಿಯಾಗಿ ಕಾನ್ಸ್‌ಟೇಬಲ್ ಮೃತಪಟ್ಟಿರುವ ಘಟನೆ ಚಾಮರಾಜನಗರ ತಾಲೂಕಿನ ಕೆಂಪನಪುರ ಸಮೀಪ ನಡೆದಿದೆ. ಸಂತೇಮರಹಳ್ಳಿ ಪೊಲೀಸ್ ಠಾಣೆ ಕಾನ್ಸ್‌ಟೇಬಲ್ ಪ್ರಸಾದ್ ಮೃತ ದುರ್ದೈವಿ.

Constable died due to Car collision
ಕಾನ್ಸ್‌ಟೇಬಲ್ ಪ್ರಸಾದ್ ಹಾಗೂ ಎಎಸ್ಐ ರಾಜು
author img

By

Published : Apr 12, 2022, 10:04 AM IST

Updated : Apr 12, 2022, 10:45 AM IST

ಚಾಮರಾಜನಗರ: ಗಸ್ತಿನಲ್ಲಿದ್ದ ವೇಳೆ ಕಾರು ಡಿಕ್ಕಿಯಾಗಿ ಕಾನ್ಸ್‌ಟೇಬಲ್ ಮೃತಪಟ್ಟಿರುವ ಘಟನೆ ಚಾಮರಾಜನಗರ ತಾಲೂಕಿನ ಕೆಂಪನಪುರ ಸಮೀಪ ಮಂಗಳವಾರ ಮಧ್ಯರಾತ್ರಿ ನಡೆದಿದೆ‌. ಸಂತೇಮರಹಳ್ಳಿ ಪೊಲೀಸ್ ಠಾಣೆ ಕಾನ್ಸ್‌ಟೇಬಲ್ ಪ್ರಸಾದ್ ಮೃತ ಪೊಲೀಸ್​ ಸಿಬ್ಬಂದಿ. ಎಎಸ್ಐ ರಾಜು ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.

ಕೆಂಪನಪುರ ಗ್ರಾಮದ ಸಮೀಪ ಗಸ್ತು ನಡೆಸುತ್ತಿರುವಾಗ ಕಾರೊಂದು ಡಿಕ್ಕಿ ಹೊಡೆದಿದೆ. ಬಳಿಕ ಕಾರು ಸಮೇತ ಚಾಲಕ ಪರಾರಿಯಾಗಿದ್ದಾನೆ. ಸದ್ಯ ಕಾರಿನ ನೋಂದಣಿ ಸಂಖ್ಯೆ ಪತ್ತೆ ಹಚ್ಚಲಾಗಿದೆ ಎಂದು ತಿಳಿದು ಬಂದಿದೆ. ಸಂತೇಮರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ಮೃತಪಟ್ಟಿರುವ ಕಾನ್ಸ್​ಟೇಬಲ್​ ತಿಂಗಳ ಹಿಂದೆಯಷ್ಟೇ ಮಗುವಿಗೆ ತಂದೆಯಾಗಿದ್ದರು.

ಇದನ್ನೂ ಓದಿ: ಪೂರಿ-ಬಾಜಿಯಲ್ಲಿ ಬೆಂದ ಹಲ್ಲಿ: ಗ್ರಾಹಕರಿಗೆ 90 ಸಾವಿರ ಪರಿಹಾರ ನೀಡುವಂತೆ ಹೋಟೆಲ್​ ಮಾಲೀಕರಿಗೆ ಆದೇಶ

Last Updated : Apr 12, 2022, 10:45 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.