ಚಾಮರಾಜನಗರ: ತಾಲೂಕಿನ ಹರನದಹಳ್ಳಿ ಹೋಬಳಿಯ ಚೆನ್ನಪ್ಪನಪುರದ ಅಮಚವಾಡಿ ಗುಡ್ಡದ ಮಠದ ವೀರಭದ್ರೇಶ್ವರ ಸ್ವಾಮಿಯ ರಥೋತ್ಸವದಲ್ಲಿ ಸ್ವಾಮಿಯ ತೇರು ಮುರಿದು ಬಿದ್ದ ಆತಂಕಕಾರಿ ಘಟನೆ ನಡೆದಿದೆ.
ಎರಡು ವರ್ಷಗಳ ಬಳಿಕ ನಡೆಯುತ್ತಿದ್ದ ಜಾತ್ರೆಯಲ್ಲಿ ದೇವಾಲಯದ ಅರ್ಧ ಸುತ್ತು ಪೂರ್ಣಗೊಳಿಸಿದ ಬಳಿಕ ಏಕಾಏಕಿ ರಥದ ಮೇಲ್ಭಾಗ ಮುರಿದು ಬಿದ್ದು ಚಕ್ರಗಳು ಪಲ್ಟಿಯಾಗಿವೆ. 800ಕ್ಕೂ ಹೆಚ್ಚು ಭಕ್ತರು ರಥದ ಸುತ್ತ ಇದ್ದರು ಎಂದು ತಿಳಿದು ಬಂದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ತೊಂದರೆ ಆಗಿಲ್ಲವೆಂದು ತಿಳಿದುಬಂದಿದೆ.
ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ಬ್ರಹ್ಮ ರಥೋತ್ಸವಕ್ಕೆ ಸುರಪುರ ಸಂಸ್ಥಾನದವರಿಂದ ಪ್ರಥಮ ಪೂಜೆ