ETV Bharat / state

ಚಾಮರಾಜನಗರ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಹೀಗಿದೆ..

ಚಾಮರಾಜನಗರ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಹೊರಬಿದ್ದಿದೆ.

chamarajangara urban local body election result
ಚಾಮರಾಜನಗರ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ
author img

By

Published : Dec 30, 2021, 3:35 PM IST

Updated : Dec 30, 2021, 4:04 PM IST

ಕೊಳ್ಳೇಗಾಲ/ಚಾಮರಾಜನಗರ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಸಿಂಗನಲ್ಲೂರು ಗ್ರಾ.ಪಂ.ಗೆ ನಡೆದ ಉಪಚುನಾವಣೆಯಲ್ಲಿ ಹೇಮಾವತಿ 404 ಮತ ಪಡೆದು ಜಯಶೀಲಾರಾಗಿದ್ದಾರೆ. ಲೀಲಾವತಿ 170 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.

ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ - ಪ್ರತಿಕ್ರಿಯೆ

ಹರಳೆ ಗ್ರಾ.ಪಂ ಹೊಸ ಹಂಪಾಪುರ ಕ್ಷೇತ್ರದ ಉಪ ಚುನಾವಣೆಯಲ್ಲಿ ಒಟ್ಟು 766 ಮತಗಳು ಚಲಾವಣೆಗೊಂಡಿದ್ದು, 20 ಮತಗಳು ತಿರಸ್ಕೃತಗೊಂಡಿವೆ. ಈ ಪೈಕಿ ಪಿ. ನಾಗರಾಜು 353 ಮತಗಳನ್ನು ಪಡೆದು ಜಯ ಸಾಧಿಸಿದ್ದು, ನಾಗರಾಜು 203 ಮತ‌ ಪಡೆದು ಪರಾಭವಗೊಂಡಿದ್ದಾರೆ. ಶಿವಮಲ್ಲು 190 ಮತಗಳನ್ನು ಮಾತ್ರ ಪಡೆದಿದ್ದಾರೆ.

ಕುಂತೂರು ‌ಗ್ರಾ.ಪಂ ಮಲ್ಲಹಳ್ಳಿ ಮಾಳ ಕ್ಷೇತ್ರದ ಉಪಚುನಾವಣೆಯಲ್ಲಿ ಒಟ್ಟು 446 ಮತ ಚಲಾವಣೆಗೊಂಡಿದ್ದು, 8 ಮತಗಳು ತಿರಸ್ಕೃತಗೊಂಡಿವೆ. ರವಿ 167 ಮತ ಪಡೆದು ಜಯಶೀಲಾರಾಗಿದ್ದಾರೆ. ಜೆ.ಲಿಂಗಯ್ಯ 150 ಮತ ಪಡೆದು ಕೆಲ ಅಂತರದ ಮತಗಳಿಂದ ಸೋಲು ಕಂಡರೆ, ಪ್ರಸನ್ನ 121ಗಳನ್ನು ಮತ ಮಾತ್ರ ಪಡೆದುಕೊಂಡಿದ್ದಾರೆ.

ಕೊತ್ತನೂರು ಗ್ರಾ.ಪಂ‌ ಇಕ್ಕಡಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯ ಶರತ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಎಸ್ಡಿಪಿಐ ಅಭ್ಯರ್ಥಿಗೆ ಜಯ:

ಚಾಮರಾಜನಗರ ನಗರಸಭೆಯ ವಾರ್ಡ್-6ರ ಉಪಚುನಾವಣೆ ಫಲಿತಾಂಶ ಹೊರಬಿದ್ದಿದ್ದು ಎಸ್ಡಿಪಿಐನ ಅಪ್ಸರ್ ಪಾಷ ಗೆಲುವಿನ ನಗೆ ಬೀರಿದ್ದಾರೆ. ಈ ಹಿಂದೆಯೂ ವಾರ್ಡ್-6 ಎಸ್ಡಿಪಿಐ ತೆಕ್ಕೆಯಲ್ಲೇ ಇತ್ತು. ಹಿಂದಿನ ಸದಸ್ಯರ ನಿಧನ ಹಿನ್ನೆಲೆಯಲ್ಲಿ ನಡೆದ ಉಪಚುನಾವಣೆಯಲ್ಲಿ ಎಸ್ಡಿಪಿಐ ಅಭ್ಯರ್ಥಿಯೇ ಜಯಗಳಿಸಿದ್ದಾರೆ. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಅತೀಕ್‌ ಅಹಮದ್‌ ಅವರಿಗೆ 399 ಮತ, ಜೆಡಿಎಸ್​ನ ಮಹಮ್ಮದ್‌ ಜಾವಿದ್​ಗೆ 82 ಹಾಗೂ ಬಿಜೆಪಿಯ ಪಿ.ಮಹೇಶ್​ 73 ಮತ ಪಡೆದಿದ್ದಾರೆ.

Last Updated : Dec 30, 2021, 4:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.