ಚಾಮರಾಜನಗರ: ಮನೆಯಲ್ಲೇ ಕುಳಿತು ಪೋನ್ ಮೂಲಕ ವೈದ್ಯರ ಸಲಹೆ, ಮಾರ್ಗದರ್ಶನ ಪಡೆಯಲು ಆರೋಗ್ಯ ಇಲಾಖೆಯ ಇ-ಸಂಜೀವಿನಿ ಎಂಬ ಯೋಜನೆಯನ್ನು ಜಾರಿಗೆ ತಿಂದಿದೆ. ಆದರೆ ಜಿಲ್ಲೆಯ ಜನರು ಮಾತ್ರ ಈ ಕುರಿತಂತೆ ಯಾವುದೇ ಒಲವು ತೋರುತ್ತಿಲ್ಲ.
ಕೊರೊನಾ ಕಾಲದಲ್ಲಿ ಸಾಮಾನ್ಯ ರೋಗ -ರುಜಿನಕ್ಕೆ ತಜ್ಞ ವೈದ್ಯರ ಮಾರ್ಗದರ್ಶನ ನೀಡಲು ಜೊತೆಗೆ ಆಸ್ಪತ್ರೆಗಳಲ್ಲಿ ಸಾಮಾಜಿಕ ಅಂತರ, ಮಹಾಮಾರಿ ಹರಡುವಿಕೆ ಕಡಿಮೆ ಮಾಡುವ ದೃಷ್ಟಿಯಿಂದ ಜಾರಿ ಮಾಡಿದ ಇ-ಸಂಜೀವಿನಿ ಯೋಜನೆಯನ್ನು ಇದುವರೆಗೆ ಜಿಲ್ಲೆಯ ಕೇವಲ 150 ಮಂದಿ ಮಾತ್ರ ಬಳಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಏನಿದು ಇ- ಸಂಜೀವಿನಿ :
ಇ- ಸಂಜೀವಿನಿ ಎಂಬುದು ಆರೋಗ್ಯ ಇಲಾಖೆ ಅಭಿವೃದ್ಧಿಪಡಿಸಿರುವ ಆ್ಯಂಡ್ರಾಯ್ಡ್ / ಐಒಎಸ್ ಆ್ಯಪ್ ಆಗಿದ್ದು ,ಆಸ್ಪತ್ರೆಯ ಒಪಿಡಿಯಂತೆ ಕಾರ್ಯ ನಿರ್ವಹಿಸಲಿದೆ. ಪ್ಲೇ ಸ್ಟೋರ್ ಮೂಲಕ ಜನರು ಡೌನ್‌ಲೋಡ್ ಮಾಡಿಕೊಂಡು ನೋಂದಣಿ ಮಾಡಿಕೊಂಡರೆ ಟೋಕನ್ ವ್ಯವಸ್ಥೆ ಮೂಲಕ ವಿಡಿಯೋ ಕಾಲ್, ಆಡಿಯೋ ಕಾಲ್ ಹಾಗೂ ಟೆಕ್ಸ್ಟ್ ಮೆಸೇಜ್ ಮೂಲಕ ಆರೋಗ್ಯ ಸಮಸ್ಯೆಗಳನ್ನು ವಿಚಾರಿಸಿಕೊಂಡು ಫೋನ್ ಮೂಲಕವೇ ಔಷಧ ಚೀಟಿಗಳನ್ನು ಪಡೆಯಬಹುದು. ಇಲ್ಲಿ ವೈದ್ಯರು ಕಳುಹಿಸುವ ಔಷಧ ಚೀಟಿಯು ಅಧಿಕೃತವಾಗಲಿದ್ದು, ಮೆಡಿಕಲ್ ಶಾಪ್ನಲ್ಲಿ ಔಷಧ ಪಡೆಯಬಹುದಾಗಿದೆ.
ಓದಿ: ಗ್ರಾ.ಪಂ ಚುನಾವಣೆ : ಚಾಮರಾಜನಗರದಲ್ಲಿ 552 ನಾಮಪತ್ರಗಳು ಸಲ್ಲಿಕೆ
ಮನೆಯಲ್ಲೇ ಕುಳಿತು ಸಮಯ, ಪ್ರಯಾಣ ವೆಚ್ಚ ಜೊತೆಗೆ ಕೊರೊನಾ ಭಯದ ನಡುವೆ ಆಸ್ಪತ್ರೆಗೆ ಹೋಗಬೇಕೆಂಬ ಆತಂಕ ಇ-ಸಂಜೀವಿನಿಯೂ ದೂರ ಮಾಡಲಿದ್ದು, 10-15 ನಿಮಿಷಗಳಲ್ಲಿ ವೈದ್ಯರನ್ನು ಭೇಟಿ ಮಾಡಿ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದಾಗಿದೆ. ಆದರೆ ಗಡಿಜಿಲ್ಲೆ ಜನರು ಈ ಕುರಿತಂತೆ ಒಲವು ತೋರುತ್ತಿಲ್ಲ. ಈ ಸಂಬಂಧ ಜಿಲ್ಲಾ ಆರೋಗ್ಯ ಇಲಾಖೆ ಇ-ಸಂಜೀವಿನಿ ಯೋಜನೆ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳಲು ಮುಂದಾಗಿದೆ.