ETV Bharat / state

ಚಾಮರಾಜನಗರ: ಜಿಲ್ಲಾಸ್ಪತ್ರೆಯ ಆಕ್ಸಿಜನ್ ಪ್ಲಾಂಟ್​​​ನಲ್ಲಿ ತಾಂತ್ರಿಕ ದೋಷ

author img

By

Published : Jun 8, 2021, 6:52 PM IST

ಚಾಮರಾಜನಗರ ಜಿಲ್ಲಾಸ್ಪತ್ರೆಯ ಆಕ್ಸಿಜನ್ ಪ್ಲಾಂಟ್​​ನಲ್ಲಿ, ಆಕ್ಸಿಜನ್ ತುಂಬುವ ವೇಳೆ ಮಾಡಿರುವ ಎಡವಟ್ಟಿನಿಂದಾಗಿ ಹೊರ ಮತ್ತು ಒಳ ಒತ್ತಡದ ನಡುವೆ ಏರುಪೇರು ಕಂಡು ಬಂದಿದೆ. ಅಂದಾಜಿನ ಮೇಲೆ ಒತ್ತಡ ನಿರ್ವಹಣೆಯನ್ನು ಇಲ್ಲಿನ ಸಿಬ್ಬಂದಿ ನಿಭಾಯಿಸುತ್ತಿದ್ದಾರೆ.

chamarajanagar-district-hospital
ಆಕ್ಸಿಜನ್ ಪ್ಲಾಂಟ್ ನಲ್ಲಿ ತಾಂತ್ರಿಕ ದೋಷ

ಚಾಮರಾಜನಗರ: ಜಿಲ್ಲಾಸ್ಪತ್ರೆಯ ಆಕ್ಸಿಜನ್ ಪ್ಲಾಂಟ್​​​ನಲ್ಲಿ ಗಾಳಿಯ ಒತ್ತಡ ಏರುಪೇರಾಗುವ ತಾಂತ್ರಿಕ ದೋಷ ಕಾಣಿಸಿಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಆಕ್ಸಿಜನ್ ಪ್ಲಾಂಟ್ ನಲ್ಲಿ ತಾಂತ್ರಿಕ ದೋಷ

ಓದಿ: ಮಾವಿನ ಹಣ್ಣು ಕದ್ದ ಆರೋಪ: ದಲಿತ ಬಾಲಕನನ್ನು ಮರಕ್ಕೆ ಕಟ್ಟಿ ಥಳಿಸಿದ ಕೀಚಕರು

ಜಿಲ್ಲಾಸ್ಪತ್ರೆ ಆವರಣದಲ್ಲಿ ನಿರ್ಮಾಣ ಮಾಡಿರುವ 6 ಸಾವಿರ ಲೀ. ಲಿಕ್ವಿಡ್ ಆಕ್ಸಿಜನ್ ಪ್ಲಾಂಟ್​​​​ನಲ್ಲಿ, ಆಕ್ಸಿಜನ್ ತುಂಬುವ ವೇಳೆ ಮಾಡಿರುವ ಎಡವಟ್ಟಿನಿಂದಾಗಿ ಹೊರ ಮತ್ತು ಒಳ ಒತ್ತಡದ ನಡುವೆ ಏರುಪೇರು ಕಂಡು ಬಂದಿದ್ದು, ಅಂದಾಜಿನ ಮೇಲೆ ಒತ್ತಡ ನಿರ್ವಹಣೆಯನ್ನು ಇಲ್ಲಿನ ಸಿಬ್ಬಂದಿ ನಿಭಾಯಿಸುತ್ತಿದ್ದಾರೆ.

ಆರೋಗ್ಯ ಇಲಾಖೆಯು ಹೊಸ ಟ್ಯಾಂಕ್ ​​ಅನ್ನು ತರಿಸಿಕೊಂಡು ಒಂದು ವಾರಗಳಾದರೂ ಇನ್ನು ಬದಲಾಯಿಸಲು ಮುಂದಾಗದೇ ನಿರ್ಲಕ್ಷ್ಯ ವಹಿಸಿದೆ ಎಂಬ ಆರೋಪಗಳು ಕೇಳಿ ಬಂದಿದೆ. 6-8 ತಾಸು ಅವಧಿಯಲ್ಲಿ ಹೊಸ ಟ್ಯಾಂಕ್ ಅನ್ನು ಅಳವಡಿಸಬಹುದು, ಮೇಲಧಿಕಾರಿಗಳ ಸೂಚನೆಗೆ ಕಾಯಲಾಗುತ್ತಿದೆ. ಯಾವುದೇ ರೀತಿಯ ದೊಡ್ಡ ಸಮಸ್ಯೆ ಕಂಡು ಬಂದಿಲ್ಲ. ಆಕ್ಸಿಜನ್ ಫಿಲ್ ಮಾಡುವಾಗ ಕೆಲವರು ಸರಿಯಾಗಿ ನಿರ್ವಹಿಸಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಸಿಬ್ಬಂದಿ ಮಾಹಿತಿ ನೀಡಿದರು.

ಮೈನರ್ ಪ್ರಾಬ್ಲಂ ಅಷ್ಟೇ:

ಜಿಲ್ಲಾಸ್ಪತ್ರೆಯ ಸರ್ಜನ್ ಶ್ರೀನಿವಾಸ್ ಈಟಿವಿ ಭಾರತದೊಂದಿಗೆ ಮಾತನಾಡಿ, ಪ್ಲಾಂಟ್​​​ನಲ್ಲಿ ಕಾಣಿಸಿಕೊಂಡಿರುವುದು ಸಣ್ಣ ದೋಷವಷ್ಟೇ. ಆಕ್ಸಿಜನ್ ಪೂರೈಕೆಗೆ ಯಾವುದೇ ರೀತಿಯ ಸಮಸ್ಯೆಯಾಗುತ್ತಿಲ್ಲ. ಇನ್ನೆರಡು ದಿನಗಳಲ್ಲಿ ಹೊಸ ಪ್ಲಾಂಟ್​​ ಅನ್ನು ಅಳವಡಿಸಲಾಗುವುದು ಎಂದು ಮಾಹಿತಿ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.